ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರಾಜವಂತಿ ಗ್ರಾಮದ ಜನರ ಆಕ್ರಂದನ
ಬೇಸಿಗೆಯಲ್ಲಿ ಕೆರೆ ಕಟ್ಟೆ ಬತ್ತಿಹೋಗಿದ್ದು ಬೋರ್ ಗಳು ಬತ್ತಿ ಹೋಗಿದ್ದು ದನ ಕರುಗಳಿಗೆ ಕುರಿಗಳಿಗೆ ಇತರೆ ಜಾನುವಾರುಗಳಿಗೆ ಹಾಗೂ ಜನರಿಗೆ ದಿನ ಬಳಕೆಗೆ ಮತ್ತು ಕುಡಿಯುವ ನೀರಿಗೆ ತುಂಬಾ ಕಷ್ಟ ವಾಗಿದೆ ಎಂದು ರಾಜವಂತಿ ಗ್ರಾಮದ ಜನರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇಲ್ಲಿನ ಅಧಿಕಾರಿಗಳು ನಮಗೆ ಸ್ವಂದಿಸುವುದಿಲ್ಲ ಎಂದು ಆರೋಪಿಸಿದರು. ತಾಲ್ಲೂಕು ಪಂಚಾಯಿತಿ ಇಒ ಮಧುಸೂದನ್ ಅವರು ಸದ್ಯದ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಆದರೆ ಗ್ರಾಮಸ್ಥರು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜವಂತಿ ಗ್ರಾಮದ ಜನರು ಇಒ ಅಧಿಕಾರಿಗಳು ಗ್ರಾಮದ ಮುಖಂಡರು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ.
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿ.




















