ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುನರಾಂಭಗೊಂಡ ಶಾಲೆಗಳು : ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತ : ಶಾಲೆಗಳಲ್ಲಿ ಮಕ್ಕಳ ಕಲರವ

ಬಳ್ಳಾರಿ / ಕಂಪ್ಲಿ : ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳು ಪುನರಾಂಭಗೊಂಡ ಹಿನ್ನಲೆ ಪಟ್ಟಣದ ಸಕ್ಕರೆ ಕಾರ್ಖಾನೆಯ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ಹನುಮಂತಪ್ಪ ನೇತೃತ್ವದಲ್ಲಿ ಸಹ ಶಿಕ್ಷಕರು ಶಾಲೆಗೆ ಬಂದಂತಹ ಮಕ್ಕಳಿಗೆ ಹೂಗುಚ್ಚ ನೀಡುವ ಮೂಲಕ ಸೋಮವಾರ ಅದ್ಧೂರಿಯಾಗಿ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಕಳೆದ ಒಂದೂವರೆ ತಿಂಗಳು ಶಾಲೆಗಳ ಬಿಡುವು ನೀಡಲಾಗಿತ್ತು. ಆದರೆ, ಈಗ ಶಾಲೆಗಳು ಆರಂಭಗೊಂಡ ಹಿನ್ನಲೆ ಮಕ್ಕಳು ಶಾಲೆಗಳತ್ತಾ ಮುಖ ಮಾಡುತ್ತಿರುವುದು ಕಂಡು ಬಂತು. ಇಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಹೂಗಳನ್ನು ನೀಡಲಾಯಿತು. ಒಂದುವರೆ ತಿಂಗಳ ನಂತರ ಮಕ್ಕಳು ಶಾಲೆಗೆ ಬಂದ ಹಿನ್ನಲೆ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡು ಬಂತು.
ನಂತರ ಮುಖ್ಯಗುರು ಹನುಮಂತಪ್ಪ ಮಾತನಾಡಿ, ಕಂಪ್ಲಿ ಸೇರಿದಂತೆ ರಾಜ್ಯದಲ್ಲಿ ಶಾಲೆಗಳು ಪುನರಾಂಭಗೊಂಡಿವೆ. ಇದರಿಂದ ಶಾಲೆಗೆ ಬಂದಂತಹ ಮಕ್ಕಳನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಮಕ್ಕಳ ಭವಿಷ್ಯ ಶಿಕ್ಷಣದಲ್ಲಿದ್ದು, ಪ್ರತಿ ಹಂತದಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಗಳ ಸದುಪಯೋಗದೊಂದಿಗೆ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕಾಗಿದೆ. ರಜೆ ದಿನಗಳಲ್ಲಿ ಮನೆಯಲ್ಲಿ ಕಾಲ ಕಳೆದಿದ್ದರು. ಆದರೆ, ಈಗ ಶಾಲೆಗಳಲ್ಲಿ ಪಾಠ, ಪ್ರಚನದೊಂದಿಗೆ ಆಟೋಟದೊಂದಿಗೆ ಶಿಕ್ಷಣವಂತರಾಗಬೇಕಾಗಿದೆ. ಈ ದಿಸೆಯಲ್ಲಿ ಮಕ್ಕಳು ಶಾಲೆಯನ್ನು ತಪ್ಪಿಸದೇ ನಿರಂತರವಾಗಿ ಬಂದು ಶಿಕ್ಷಕರ ಬೋಧನೆಗಳನ್ನು ಆಲಿಸಿ, ಕಲಿಯಬೇಕು. ಮೊದಲ ದಿನವೇ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಬಂದಿದ್ದು, ಇನ್ನೂಳಿದ ಮಕ್ಕಳು ಸಹ ಶಾಲೆಗಳಿಗೆ ಬರಬೇಕು. ಶಾಲೆಗೆ ಬಂದ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು ಎಂದರು.
ನಂತರ ಮಕ್ಕಳು ರುಚಿಕರವಾದ ಸಿಹಿ ಊಟ ಸವಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಾಮಲಿಂಗ, ಮುಖಂಡರಾದ ನಾಗರಾಜ, ಶೇಖರ್, ಆದಿನಾರಾಯಣ, ಮರಿಸ್ವಾಮಿ, ಸಹ ಶಿಕ್ಷಕರಾದ ಡಿ.ಪ್ರಭಾಕರ, ಐ.ಗಂಗಮ್ಮ, ದಿದ್ಲಿ ಗೌರಮ್ಮ, ಆರ್.ಎಚ್.ರೇಣುಕಾ, ರೆಹಮತ್ ಬೀ, ಜೆ.ಎಂ.ತಿಪ್ಪಮ್ಮ, ಕೆ.ಪ್ರೀತಿ, ವಾಣಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.

ಎಸ್‌ಎನ್‌ಪೇಟೆ: ಸ್ಥಳೀಯ ಎಸ್‌ಎನ್‌ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಳಿರು ತೋರಣಗಳಿಂದ ಶೃಂಗರಿಸಿ, ಶಾಲೆಗೆ ಬಂದ ಮಕ್ಕಳಿಗೆ ಹೂಗಳನ್ನು ನೀಡಿ ಸ್ವಾಗತಿಸಿದರು. ನಂತರ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಶಶಿಧರ್ ಅಕ್ಕಸಾಲಿ, ಜಿ.ಪಂಪಯ್ಯ, ಆರ್.ವಿರುಪಾಕ್ಷಪ್ಪ, ಎಚ್.ಯಶೋಧ, ಬಡಿಗೇರ ರತ್ನಮ್ಮ, ಕೆ.ಮಂಜುಳಾ, ಎನ್.ಮಂಜುನಾಥ ಸೇರಿದಂತೆ ಶಾಲಾ ಮಕ್ಕಳಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!