ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಚಿವರೇ, ನಮ್ಮೂರ ಸರಕಾರಿ ಶಾಲೆ ಉಳಿಸಿ: ದುಂಡಗಿ ಕ್ಯಾಂಪ್ ಗ್ರಾಮಸ್ಥರ ಆರ್ತನಾದ!

​ಶಾಲಾ ಪ್ರಾರಂಭೋತ್ಸವದಂದೇ ಪ್ರತಿಭಟನೆಯ ಎಚ್ಚರಿಕೆ ನೀಡಿದ ಎಸ್‌ಡಿಎಂಸಿ ಹಾಗೂ ಪೋಷಕರು

​ಜೂನ್ 12ರೊಳಗೆ ಖಾಯಂ ಶಿಕ್ಷಕರನ್ನು ನೇಮಿಸದಿದ್ದರೆ ಬೃಹತ್ ಧರಣಿ

​ಕಾರಟಗಿ: ಒಂದೆಡೆ ಶಾಲಾ ಪ್ರಾರಂಭೋತ್ಸವದ ಸಡಗರ, ಪುಟಾಣಿ ಮಕ್ಕಳಿಗೆ ಹೂ ನೀಡಿ ಬರಮಾಡಿಕೊಳ್ಳುವ ಸಂಭ್ರಮ, ಸಮವಸ್ತ್ರ-ಪುಸ್ತಕ ವಿತರಣೆಯ ಸಡಗರ, ಆದರೆ ಇದ್ಯಾವುದೂ ಆ ಶಾಲೆಯ ಪೋಷಕರು ಮತ್ತು ಮಕ್ಕಳ ಮುಖದಲ್ಲಿ ಪೂರ್ಣ ನಗು ತರಲಿಲ್ಲ. ಕಾರಣ ಅಲ್ಲಿ ಅಕ್ಷರ ಕಲಿಸಲು ಒಬ್ಬರೇ ಒಬ್ಬ ಖಾಯಂ ಶಿಕ್ಷಕರಿಲ್ಲ!

​ಇದು ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ದುಂಡಗಿ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಂದಿನ ಕರುಣಾಜನಕ ಸ್ಥಿತಿ.

ಜೂನ್ 1ರಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು, ಸರಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧದ ಆಕ್ರೋಶದ ವೇದಿಕೆಯಾಗಿ ಮಾರ್ಪಟ್ಟಿತು.

​ಬಡ ಮಕ್ಕಳ ಬಾಳಿಗೆ ಬೆಳಕಾಗಿ: ಸಚಿವರಿಗೆ ಮನವಿ…
​”ಕಳೆದ 3-4 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಕೇವಲ ಹೆಚ್ಚುವರಿ ಮತ್ತು ಅತಿಥಿ ಶಿಕ್ಷಕರ ಭರವಸೆಯಲ್ಲೇ ದಿನದೂಡಲಾಗುತ್ತಿದೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗುತ್ತಿದೆ,” ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷರಾದ ರಾಘವೇಂದ್ರ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
​”ಈ ಶಾಲೆಯಲ್ಲಿ ಶೇಕಡಾ 95 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಅತ್ಯಂತ ಬಡ ಕುಟುಂಬಗಳ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದಾರೆ. ಹಿಂದೆ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಶಾಲೆ, ಈಗ ಶಿಕ್ಷಕರಿಲ್ಲ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಬೇರೆಡೆಗೆ ಕರೆದೊಯ್ಯುತ್ತಿದ್ದಾರೆ. ಪ್ರಸ್ತುತ 50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಶಾಲೆ ಮುಚ್ಚುವ ಹಂತಕ್ಕೆ ತಲುಪುತ್ತದೆ. ಮಾನ್ಯ ಸಚಿವರಾದ ಶಿವರಾಜ ಎಸ್. ತಂಗಡಗಿಯವರು ತಕ್ಷಣ ಇತ್ತ ಗಮನಹರಿಸಿ, ಕನಿಷ್ಠ ಇಬ್ಬರು ಖಾಯಂ ಶಿಕ್ಷಕರನ್ನು ನೀಡಿ ಬಡ ಮಕ್ಕಳ ಬಾಳಿಗೆ ಬೆಳಕಾಗಬೇಕು,” ಎಂದು ಅವರು ವಿನಂತಿಸಿದರು.

​ಸಡಗರದ ನಡುವೆಯೂ ಕಾಡಿದ ಆತಂಕ :

​ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಶಾಲಾ ಮಕ್ಕಳಿಗೆ ಬಾಗಿಲಲ್ಲೇ ಹೂವು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಸರಕಾರದಿಂದ ಬಂದ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಆದರೆ, ಮೂಲಭೂತ ಅಗತ್ಯವಾದ ‘ಶಿಕ್ಷಕರೇ’ ಇಲ್ಲದ ಮೇಲೆ ಪುಸ್ತಕ ಓದುವವರಾರು ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ. ತಮ್ಮೂರಿನ ಮಕ್ಕಳ ಶೈಕ್ಷಣಿಕ ನ್ಯಾಯಕ್ಕಾಗಿ ಇಡೀ ಗ್ರಾಮವೇ ಒಂದಾಗಿ ಹೋರಾಡಲು ನಿರ್ಧರಿಸಿದೆ.

​ಈ ಸಂದರ್ಭದಲ್ಲಿ ಶಾಲಾ ಹೆಚ್ಚುವರಿ ಮುಖ್ಯ ಶಿಕ್ಷಕ ಹೊಮಣ್ಣ, ಎಸ್‌ಡಿಎಂಸಿ ಉಪಾಧ್ಯಕ್ಷೆ ವೀಣಾ ಬಸವರಾಜ, ಮುಖಂಡರಾದ ಶೇಷಪ್ಪ, ಮಲ್ಲಪ್ಪ, ಗಂಗಪ್ಪ, ಯಮನೂರ ಹಿರೇಮನಿ, ಸೋಮನಾಥ ಹಿರೇಮನಿ, ಗವಿಸಿದ್ದಪ್ಪ ಕೊಪ್ಪಳ, ದೇವೇಂದ್ರಪ್ಪ ಹಿರೇಮನಿ, ಮಲ್ಲೇಶ ಸಿಂಗನಾಳ, ಯಮನೂರ ಬೆಣಕಲ್, ಚೌಡಪ್ಪ ಹಿರೇಮನಿ, ತಿಮ್ಮಮ್ಮ ಮೆತ್ತನಾಳ, ಗೌರಮ್ಮ ಕೊಪ್ಪಳ, ಈರಮ್ಮ ಜೂರಟಗಿ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

​ಜೂನ್ 12ಕ್ಕೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ !

​”ಸಚಿವರು ಮತ್ತು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ನಮ್ಮ ಶಾಲೆಗೆ ಖಾಯಂ ಶಿಕ್ಷಕರನ್ನು ನಿಯೋಜಿಸಬೇಕು. ಇಲ್ಲದಿದ್ದರೆ ಜೂನ್ 12ರಂದು ನಮ್ಮೆಲ್ಲ ಮಕ್ಕಳನ್ನು ಕರೆದುಕೊಂಡು ಬಂದು ಶಾಲಾ ಆವರಣದಲ್ಲೇ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಖಾಯಂ ಶಿಕ್ಷಕರು ಬರುವವರೆಗೂ ಧರಣಿ ಕೈಬಿಡುವುದಿಲ್ಲ.”

  • ದುಂಡಗಿ ಕ್ಯಾಂಪ್ ಗ್ರಾಮಸ್ಥರು ಹಾಗೂ ಪೋಷಕರು.
  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!