ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೆಜೆಸ್ಟಿಕ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಕರಾಳತೆ

ಬೆಂಗಳೂರು :ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದ್ದು ಇದರ ಬಗ್ಗೆ ಅನೇಕ ಗಂಭಿರ ಆರೋಪಗಳು ಕೇಳಿ ಬಂದಿದ್ದರೂ ಯಾವುದೇ ಕ್ರಮ ಇದುವರೆಗೂ ಕೈಗೊಂಡಿರುವುದಿಲ್ಲ.

ಬಸ್ ನಿಲ್ದಾಣದ ಟನಲ್ ಒಳಗಡೆ ಮತ್ತು ಮೆಟ್ರೋ ನಿಲ್ದಾಣಕ್ಕೆ ಹೋಗುವ ರಸ್ತೆಯು ದಂಧೆಯ ಅಡ್ಡವಾಗಿದೆ. ಆ ಮೂಲಕ ಸಂಚರಿಸುವ ಗ್ರಾಹಕರನ್ನು ಸೆಳೆದು ಇವರ ಕೊಠಡಿಗಳಿಗೆ ಆಟೋಗಳಲ್ಲಿ ಕರೆದುಕೊಂಡುಹೋಗಿ ಸರ್ವೀಸ್ ಕೊಡುತ್ತಾರೆ. ಆ ರಸ್ತೆಯಲ್ಲಿ ಹೋಗುವವರಿಗೆ ಸುಖಾಸುಮ್ಮನೆ ತೊಂದರೆ ನೀಡುತ್ತಾರೆ.
ಅವರ ಗುಂಪು ಸುತ್ತಮುತ್ತಲಲ್ಲೇ ಇರುತ್ತದೆ. ಅವರು ಚೈನ್ ‘ಲಿಂಕ್ ತರಹ ಕೆಲಸ ಮಾಡುತ್ತಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಸಣ್ಣ ವ್ಯಾಲೆಟ್ ಹಿಡಿದುಕೊಂಡು ಗಿರಾಕಿಗಳಿಗೆ ಬಲೆ ಬೀಸುತ್ತಿರುತ್ತಾರೆ. ಅವರ ಏರಿಯಾಗಳಲ್ಲಿ ಗ್ರಾಹಕರಿಗೆ ಹೆದರಿಸಿ ಬೆದರಿಸಿ ಹಣ , ಚೈನು , ಪರ್ಸು , ಬೆಲೆಬಾಳುವ ವಸ್ತುಗಳನ್ನು ದಬ್ಬಾಳಿಕೆಯಿಂದ ಕಸಿದುಕೊಂಡು ಜೇಬು ಬರಿದಾಗಿಸಿ ಕಳುಹಿಸುತ್ತಾರೆ. ಅಲ್ಲೇ ಪೋಲಿಸರಿದ್ದರೂ ಅವರಿಗೆ ಕ್ಯಾರೆಯಿಲ್ಲದೆ ವ್ಯವಹಾರ ಮಾಡುತ್ತಾರೆ‌.
ಪೋಲಿಸರು ಮತ್ತು ಆಟೋಚಾಲಕರು ಇವರಿಗೆ ಸಾಥ್ ನೀಡುತ್ತಾರೆ. ಇದರ ಬಗ್ಗೆ ಅನೇಕ ಯೂಟ್ಯುಬರ್’ಗಳು ಚಾನಲ್ ಗಳಲ್ಲಿ ವರದಿ ಮಾಡಿದ್ದರೂ ಏನೂ ಪ್ರಯೋಜನವಾಗಲಿಲ್ಲ. ಇವರ ದಂಧೆ ಜೋರಾಗೆ ನಡೆಯತ್ತಿದೆ. ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುವ ಇಂತಹವರಿಗೆ ಕಾನೂನಿನ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರ ಆಗ್ರಹ.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!