ಬಾಗಲಕೋಟೆ : ನಿನ್ನೆ ಸುರಿದ ಭಾರಿ ಮಳೆಗೆ ಬಾಗಲಕೋಟೆ ವಲ್ಲಭಾಯಿ ಚೌಕ್ ಹತ್ತಿರ ಬೀದಿ ಬದಿ ಹಣ್ಣಿನ ವ್ಯಾಪಾರಿ ಶಬ್ಬೀರ್ ಬಾಗವಾನ್ ಇವರ ಮನೆ ಬಿದ್ದಿದ್ದು ವಿಧಾನ ಪರಿಷತ್ ಶಾಸಕ ಪಿ ಎಚ್ ಪೂಜಾರ ಇವರು ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಬಡ ವ್ಯಾಪಾರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಆಂಜನೇಯ ಕಾಗಿ, ಬಾಗಲಕೋಟೆ ಯೂನಿಯನ್ ಮಾರ್ಕೆಟ್ ಆಫ್ ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಟಗಿ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಅಮೃತಕರ, ಶ್ರೀನಿವಾಸ್ ಬಳ್ಳಾರಿ, ಮಕ್ತುಮಸಾಬ ದೊಡ್ಡಮನಿ, ಶೌಕತ ವಾಳದ ಹಾಗೂ ಇತರ ವ್ಯಾಪಾರಿಗಳು ಇದ್ದರು.
- ಕರುನಾಡ ಕಂದ ಸುದ್ದಿ




















