ಬಳ್ಳಾರಿ / ಕಂಪ್ಲಿ : ಮಾಜಿ ಸಚಿವ ಬಿ. ಝಡ್ ಜಮೀರ್ ಅಹ್ಮದ್‌ಗೆ ಖಾನ್ ರವರಿಗೆ ಡಿಸಿಎಂ ಮತ್ತು ಶಾಸಕ ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಬೇಕೆಂದು ಕಂಪ್ಲಿ ಅಂಜುಮನ್ ಖಿದ್ಮತ್-ಏ-ಇಸ್ಲಾಂ ಅಧ್ಯಕ್ಷ ಅಬ್ದುಲ್ ಕರೀಂ ಲಡ್ಡು ಒತ್ತಾಯಿಸಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಕಂಪ್ಲಿ ಅಂಜುಮನ ಖಿದ್ಮತ್-ಏ-ಇಸ್ಲಾಂ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಬಿ. ಝಡ್ ಜಮೀರ್ ಅಹ್ಮದ್ ಅವರು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಸದಾ ಜನರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಜಮೀರ್ ಅಹ್ಮದ್ ಇವರಿಗೆ ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ವರಿಷ್ಠರು, ಹೈಕಮಾಂಡ್ ಮತ್ತಷ್ಟು ಜನರ ಸೇವೆಗೆ ಅನುವು ಮಾಡಬೇಕು. ಮತ್ತು ಸ್ಥಳೀಯ ಜನಪ್ರಿಯ ಶಾಸಕ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುವ ಅಭಿವೃದ್ಧಿ ಹರಿಕಾರ ಜೆ.ಎನ್.ಗಣೇಶಗೆ ಸಚಿವ ಸ್ಥಾನ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೆ ಇಳಿಯುವ ಜೊತೆಗೆ ಬರುವ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದರು.
ನಂತರ ಪ್ರಧಾನ ಕಾರ್ಯದರ್ಶಿ ಯು. ಜಹಿರುದ್ಧೀನ್ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಗಣೇಶ ಜನಪರ ಕಾರ್ಯದೊಂದಿಗೆ ಅಚ್ಚುಮೆಚ್ಚಿನ ನಾಯಕರಾಗುವ ಜೊತೆಗೆ ರಾಜ್ಯದಲ್ಲಿ ಒಂದೊಳ್ಳೇ ಹೆಸರು ಪಡೆದುಕೊಂಡಿದ್ದಾರೆ. ಸದಾ ಕ್ಷೇತ್ರದ ಜನರ ಮಧ್ಯದಲ್ಲಿದ್ದುಕೊಂಡು ಅವರ ಕಷ್ಟಗಳನ್ನು ಆಲಿಸಿ, ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಮತ್ತು ಜಮೀರ್ ಅಹ್ಮದ್ ಅವರ ಸೇವೆ ದೊಡ್ಡದಿದೆ, ಸರ್ವಜನರ ಆದ್ದರಿಂದ ಜಮೀರ್ ಅಹ್ಮದ್‌ಗೆ ಡಿಸಿಎಂ ಮತ್ತು ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೈಯದ್ ರಾಜಾಸಾಬ್, ಖಜಾಂಚಿ ಮೌಲಾ ಹುಸೇನ್, ಸದಸ್ಯರಾದ ಕೆ.ಮೆಹಬೂಬ್, ಮಸ್ತಾನ್ ವಲಿ ಕಡಪಾ, ಅತ್ತಾವುಲ್ಲಾ ರೆಹಮಾನ್, ಸೈಯದ್ ಗೇಸುದರಾಜ್ ಖಾದ್ರಿ, ಎನ್.ಯುನೂಸ್, ಮುಖಂಡರಾದ ಸೈಯದ್ ಉಸ್ಮಾನ್, ವಾಹಿದಸಾಬ್, ಮೆಹಮೂದ್ ಸಾಬ್, ವರ್ದಿ ಜಾಫರ್, ಅಬ್ದುಲ್ ವಾಹೀದ್ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















