ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಾಳೆಮ್ಮ ದೇವಿ ವಾರ್ಷಿಕೋತ್ಸವದ ಹಿನ್ನಲೆ ಶ್ರದ್ದಾಭಕ್ತಿಯ ವಿಶೇಷ ಧಾರ್ಮಿಕ ಕೈಂಕರ್ಯಗಳು

ಬಳ್ಳಾರಿ / ಕಂಪ್ಲಿ : ಪಟ್ಟಣದ ಮುಸ್ಟೂರು ರಸ್ತೆ ಬದಿಯಲ್ಲಿ ಆರಾಧ್ಯ ದೇವತೆ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದಲ್ಲಿ ನಾಲ್ಕನೇ ವರ್ಷದ ವಾರ್ಷಿಕೋತ್ಸವ ನಿಮಿತ್ಯ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ರೈತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ಮಂಗಳವಾರ ನೆರವೇರಿದವು.
ಇಲ್ಲಿನ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ ದೇವಿಗೆ ಅಭಿಷೇಕ, ಅಲಂಕಾರ, ಪೂಜೆ ಮತ್ತು ಪುನಸ್ಕಾರಗಳು ಶಾಸ್ತ್ರೋಕ್ತವಾಗಿ ಜರುಗಿದವು. ರೈತರು ಮತ್ತು ಸಾರ್ವಜನಿಕರು ಕಾಯಿ, ಕರ್ಪೂರ ಅರ್ಪಿಸಿ ದೇವಿಯ ದರ್ಶನದೊಂದಿಗೆ ಧನ್ಯರಾದರು.
ತದ ನಂತರ ಮಹಾದಾಸೋಹ ಜರುಗಿತು.
ರೈತ ಮುಖಂಡ ಕೆ. ಅಕ್ಬರ್ ಮಾತನಾಡಿ, ಪ್ರತಿಯೊಬ್ಬ ರೈತರ ಆರಾಧ್ಯ ದೇವತೆ ಶ್ರೀ ಗಾಳೆಮ್ಮ ದೇವಿಯ ವಾರ್ಷಿಕೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ವಾರ್ಷಿಕೋತ್ಸವದ ನಿಮಿತ್ಯ ವಿಶೇಷ ಪೂಜೆಗಳು ನೆರವೇರಿದವು. ದೇವಿಯು ಸದಾ ಕಾಲ ಸಕಾಲಕಕ್ಕೆ ಮಳೆ, ಬೆಳೆಯೊಂದಿಗೆ ಸಮೃದ್ಧ ಬೆಳೆ ನೀಡಬೇಕೆಂಬುದು ರೈತರ ಆಶಯವಾಗಿದೆ.
ಇದರ ಹಿನ್ನಲೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಾರ್ಷಿಕೋತ್ಸವದ ಜೊತೆಗೆ ಲೋಕಕಲ್ಯಾಣಕ್ಕಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದರು.
ಈ ಸಂದರ್ಭದಲ್ಲಿ ರೈತರಾದ ಅಯೋಧ್ಯ ವಿರುಪಣ್ಣ, ಕೆ.ಮುಕ್ಕಣ್ಣ, ಕೆ.ಬುಡ್ಡಪ್ಪ, ಸಿದ್ದಿ ಅಂಜಿನಪ್ಪ, ವಡ್ರು ಗೋವಿಂದಪ್ಪ, ಆದೋನಿ ನಾಗರಾಜ, ಸಿ.ಡಿ.ತಿಮ್ಮಯ್ಯ, ಡಿ.ಆರ್.ಪಾಡುರಂಗ, ಸಿದ್ದಿ ಷಣ್ಮುಖ, ಶ್ರೀನಿವಾಸ, ಸಂಡೂರು ಮೂಕಪ್ಪ, ಸುಧಾ, ಮಾರುತಿ, ಪೂಜಾರಿ ದೇವಮ್ಮ, ದಾಸರ ಪದ್ಮಾವತಿ ಸೇರಿದಂತೆ ರೈತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!