ಬಳ್ಳಾರಿ / ಕಂಪ್ಲಿ : ಪಟ್ಟಣದ ದಿ. ಗಂಗಪ್ಪ ಮತ್ತು ಶ್ರಿಮತಿ. ಸಣ್ಣ ರುದ್ರಮ್ಮ ಇವರ ಮಗನಾದ ಶ್ರೀ.ಸತೀಶ ಇವರಿಗೆ ಬಳ್ಳಾರಿಯ ವಿ.ಎಸ್.ಕೆ. ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿಯಾದ ಶ್ರೀ ಸತೀಶ ಇವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಲಾಗಿದೆ. ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ, ಪ್ರಾಧ್ಯಾಪಕರಾದ ಡಾ.ಮೇಧಾವಿನಿ ಎಸ್.ಕಟ್ಟಿ ಅವರ ಮಾರ್ಗದರ್ಶನದಲ್ಲಿ “ಇನ್ ಫ್ರಾಸ್ಟ್ರಕ್ಟರ್ ಅಂಡ್ ಅಗ್ರಿಕಲ್ಟರ್ ಡೆವಲಪ್ಟೆಂಟ್ ಇನ್ ಕಲ್ಯಾಣ ಕರ್ನಾಟಕ ರೀಜನ್” ಎಂಬ ಶಿರ್ಷಿಕೆಯಡಿ ಮಹಾ ಪ್ರಬಂಧ ಮಂಡಿಸಿದ ಹಿನ್ನಲೆಯಲ್ಲಿ ಪಿಹೆಚ್.ಡಿ. ಪದವಿ ಪ್ರಧಾನ ಮಾಡಲಾಗಿದೆ.
ದಿ. ಗಂಗಪ್ಪ ಮತ್ತು ಶ್ರಿಮತಿ. ಸಣ್ಣ ರುದ್ರಮ್ಮ ಇವರ ಮಗನಾದ ಶ್ರೀ.ಸತೀಶ ರವರು ಮೂಲತಃ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನವರಾಗಿದ್ದು, ಪಿಹೆಚ್.ಡಿ. ಪದವಿ ಲಭಿಸಿದ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿವರು, ಕುಟುಂಬದ ಸದಸ್ಯರು, ಸ್ನೇಹಿತರು, ಮತ್ತು ಸಮುದಾಯದ ಗುರು ಹಿರಿಯರು ಶುಭಾಶಯವನ್ನು ಕೋರಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್


















