ಕಲ್ಬುರ್ಗಿ :ಹಾನಗಲ್ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘ ಕೊಡಮಾಡುವ ರಾಜ್ಯ ಮಟ್ಟದ ‘ಕುಮಾರಶ್ರೀ’ ಪ್ರಶಸ್ತಿಗೆ ಕಾಳಗಿ ತಾಲೂಕಿನ ರಟಕಲ್, ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘ ಮಾಲೀಕ, ಕಲಾಪೋಷಕ, ಕಲಾವಿದ ವೀರಣ್ಣ ಗಂಗಾಣಿ ರವರು ಭಾಜನರಾಗಿದ್ದಾರೆ.
ಇದೇ ಜುಲೈ 19ರಂದು ಮದ್ಯಾಹ್ನ 3 ಗಂಟೆಗೆ ನಗರದ ಡಾ|ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಯಲಿರುವ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದೆ 44ನೇ ವಾರ್ಷಿಕೋತ್ಸವ ಹಾಗೂ ಹಿರಿಯ ನಟಿ ಡಾ|ಉಮಾಶ್ರೀ ಅಭಿನಯದ ಶರ್ಮಿಷ್ಠೆ ನಾಟಕ ಪ್ರದರ್ಶನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಕರುನಾಡ ಕಂದ ಸುದ್ದಿ


















