ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಸಣಾಪುರ ಗ್ರಾಮದ ಆರಾಧ್ಯ ದೇವರಾದ ಲಿಂಗರೂಪಿ ಶ್ರೀ ಉದ್ಬವ ವೀರಭದ್ರೇಶ್ವರ ದೇಗುದಲ್ಲಿ 24 ಗಂಟೆಗಳ ಕಾಲ ಅಖಂಡ ಭಜನೆ ಕಾರ್ಯಕ್ರಮ ಹಾಗೂ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಜು.26 ರಂದು ಶ್ರೀ ಉದ್ಬವ ವೀರಭದ್ರೇಶ್ವರ ಸ್ವಾಮಿಗೆ ವಿವಿಧ ಅಭೀಷೇಕಗಳನ್ನು ಮಾಡಿದ ನಂತರ ಸಣಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ಭಜನಾ ಮಂಡಳಿಯ ಸದಸ್ಯರು 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
24 ಗಂಟೆಗಳ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಮೂರು ಗ್ರಾಮಗಳಾದ ಸಣಾಪುರ,ಗುತ್ತಿಗನೂರು ಮತ್ತು ಮುಸ್ಟೂರು ಗ್ರಾಮದ ಭಜನಾ ಮಂಡಳಿಗಳು ಭಾಗವಹಿಸಿದ್ದು, ಜು.26 ರಂದು ಬೆಳಿಗಿನಿಂದ 27ರ ಸೋಮವಾರ ಬೆಳಗಿನ 6 ಗಂಟೆಯರವರೆಗೆ ನಿರಂತರವಾಗಿ ಒಂದೂರಾದ ನಂತರ ಒಂದು ಊರಿನವರು ಭಕೆನ ಕಾರ್ಯಕ್ರಮ ನಡೆಸಲಿದ್ದಾರೆ.
ಜು.27 ರಂದು ಸೋಮವಾರ ಭಜನೆ ಕಾರ್ಯಕ್ರಮ ಮುಗಿದ ನಂತರ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನು ಮಾಡಿದ ನಂತರ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ, ವಿವಿಧ ಹೂಗಳಿಂದ ಅಲಂಕರಿಸಿ ಪೂಜಿಸಿದರು.
ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ಹೋಮ ಹವನಗಳು ಜರುಗಲಿವೆ. ನಂತರ ಮಹಾಮಂಗಳಾರತಿ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಲಿದ್ದಾರೆ. ನಂತರ ಮಹಾ ಪ್ರಸಾದ ವಿತರಣೆ ಜರುಗಲಿದೆ. ಇಂದಿನ ಅಖಂಡ ಭಜನಾ ಕಾರ್ಯಕ್ರಮದಲ್ಲಿ ದೇಗುಲ ಸಮಿತಿಯ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















