ಅವಿವೇಕ ಅಜ್ಞಾನಗಳ
ದೂರ ಸರಿಸಯ್ಯ,
ವಿವೇಕ ಸುಜ್ಞಾಗಳ
ನನ್ನೊಳಿರಿಸಯ್ಯ, ಕತ್ತಲೆಯೇ
ತುಂಬಿದೆ, ಈ ಬಾಳು,
ಬೆಳಕಿಗಾಗಿ ಹಂಬಲಿಸಿದೆ ಎನ್ನ
ಮನ, ಬೆಳಕ ತೋರಿ
ಮುನ್ನಡೆಸೆಂದ ಶಿವ ಶಿವಾ!
ಹೇ ಹುಲು ಮಾನವ,
ನಾ ಅವರಂತಾಗಲಿಲ್ಲ,
ನಾ ಇವರಂತಾಗಲಿಲ್ಲ,
ಎಂಬ ಕೊರಗಿನಲಿ
ಸೊರಗಿ ಹೋಗುವ ಮುನ್ನ
ನಿನ್ನಂತೆ ನೀನಾಗಿ ಹೋಗೆಂದ
ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ ✍🏻



















