ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ಪಂಚ ಗ್ಯಾರಂಟಿ ಫಲಾನುಭವಿಗಳ ಸಮಾವೇಶ”

ಕೊಟ್ಟೂರು:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ನೇಮಿರಾಜ ನಾಯ್ಕ,ಶಾಸಕರು, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವರು ವಹಿಸಿಕೊಂಡಿದ್ದು,ಅನ್ನಭಾಗ್ಯ,ಗೃಹಲಕ್ಷಿ,ಗೃಹಜ್ಯೋತಿ ಯೋಜನೆಯಡಿ ಸೌಲಭ್ಯವನ್ನು ಪಡೆದ ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ ಐದೈದು ಜನರಿಗೆ ಯೋಜನೆಯ ಪ್ರಮಾಣ ಪತ್ರಗಳನ್ನು ವಿತರಿಸಿದರು.
ತಹಶೀಲ್ದಾರರಾದ ಅಮರೇಶ ಜಿ.ಕೆ ಸ್ವಾಗತಿಸಿದರೆ, ರವಿಕುಮಾರ್.ವೈ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಯನ್ನು ನುಡಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ನಸರುಲ್ಲಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಮರಬದ ಕೊಟ್ರೇಶ,ಜಿ ಸಿದ್ದಯ್ಯ ಹಾಜರಿದ್ದರು.ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಲುಂಬಿ.ಬಿ ಶಿಶು ಯೋಜನೆ ಅಭಿವೃದ್ಧಿ ಅಧಿಕಾರಿಗಳು,ಶಕ್ತಿ ಯೋಜನೆ ಬಗ್ಗೆ ಮರಿಲಿಂಗಪ್ಪ,ಡಿಪೋ ಮ್ಯಾನೇಜರ್ ಕೂಡ್ಲಿಗಿ,ಗೃಹ ಜ್ಯೋತಿ ಯೋಜನೆ ಬಗ್ಗೆ ಪ್ರಕಾಶ ಪತ್ತೆನೂರು ಎಇಇ, ಜೆಸ್ಕಾಂ ಕೂಡ್ಲಿಗಿ,ಅನ್ನಭಾಗ್ಯ ಯೋಜನೆ ಬಗ್ಗೆ ಬಿ ಮಂಜುನಾಥ ಆಹಾರ ನಿರೀಕ್ಷಕರು,ಕೊಟ್ಟೂರು ಇವರು ಮಾಹಿತಿಯನ್ನು ನೀಡಿದರು.ಪದ್ಮನಾಭ ಕರಣಂ, ಕ್ಷೇತ್ರಶಿಕ್ಷಣಾಧಿಕಾರಿಗಳು,ಕೂಡ್ಲಿಗಿ;ಈರಣ್ಣ ಕಾರ್ಯದರ್ಶಿ ಎಪಿಎಂಸಿ;ಶರಣಪ್ಪ ಶಾಖಾಧಿಕಾರಿಗಳು ಜೆಸ್ಕಾಂ ಕೊಟ್ಟೂರು,ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ,ಡಿ ಶಿವಕುಮಾರ್,ಗ್ರಾಮ ಆಡಳಿತ ಅಧಿಕಾರಿಗಳು,ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಿ.ಮ.ಗುರುಬಸವರಾಜ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪಂಚ ಯೋಜನೆಗಳು ಪ್ರಾರಂಭವಾದಾಗಿನಿಂದ ಇಂದಿನವರೆಗೆ ಶಕ್ತಿಯೋಜನೆ ಅಡಿ 41,95,357,ಫಲಾನುಭವಿಗಳು ಪ್ರಯಾಣಿಸಿದ್ದು, 14,80,59,706/- ರೂ. ಖರ್ಚಾಗಿರುತ್ತದೆ,ಅನ್ನಭಾಗ್ಯ ಯೋಜನೆಯಲ್ಲಿ 20,228 ಫಲಾನುಭವಿಗಳು, ಗೃಹಜ್ಯೋತಿ ಯೋಜನೆ ಅಡಿಯಲ್ಲಿ 24,799 ಫಲಾನುಭವಿಗಳು,ಗೃಹ ಲಕ್ಷ್ಮಿ ಯೋಜನೆ ಯಡಿ 60,127 ಫಲಾನುಭವಿಗಳಿಗೆ ರೂ.12,02,54,000/- ಪಾವತಿಸಲಾಗಿದೆ;ಯುವನಿಧಿ ಯೋಜನೆ ಅಡಿ 8 ವಿದ್ಯಾರ್ಥಿಗಳು (ಎಸ್ಸಿ-1,ಎಸ್ಟಿ-2,ಒಬಿಸಿ-4, ಸಾಮಾನ್ಯ-1) ಫಲಾನುಭವಿಗಳು ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.

ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ