ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಿಜೆಪಿ ಕಾರ್ಯಕರ್ತರ ಸಮಾವೇಶ:ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಗೇರಿ

ಮುಂಡಗೋಡ:ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಾರ್ಟಿ ಮುಂಡಗೋಡ ಮಂಡಲ ವತಿಯಿಂದ ದೈವಜ್ಞ ಕಲ್ಯಾಣ ಮಂಟಪ ಮುಂಡಗೋಡದಲ್ಲಿ”ಕಾರ್ಯಕರ್ತರ ಸಮಾವೇಶ” ನಡೆಯಿತು.
ತಾಲೂಕ ಮಂಡಲ ಅಧ್ಯಕ್ಷರಾದ ಮಂಜುನಾಥ್ ಪಾಟೀಲ್ ಅತಿಥಿಗಳನ್ನು ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ,ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಮತ್ತೊಮ್ಮೆ ಮೋದಿಯವರಿಗೆ ಅಧಿಕಾರದ ಚುಕ್ಕಾಣಿ ನೀಡುವ ಅವಶ್ಯಕತೆ ಅದಕ್ಕಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗೆ ಮತ ನೀಡಬೇಕು ಎಂದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಲ್ ಟಿ ಪಾಟೀಲ್ ಮಾತನಾಡಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಸವಣ್ಣನವರಿಗೆ ಹೋಲಿಸಿ,ಮೋದಿ ಅವರು ಹೆಣ್ಣು ಮಕ್ಕಳಿಗೆ ನೀಡಿರುವ ಮೀಸಲಾತಿ ಕುರಿತು ಮಾತನಾಡಿದರು.ಮೋದಿಯವರ ಪ್ರತಿನಿಧಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ನಮ್ಮ ಮತ ಚಲಾಯಿಸುವ ಮೂಲಕ ಗೆಲ್ಲಿಸಬೇಕು ಎಂದರು.ಗ್ಯಾರಂಟಿಗಳಿಗೆ ವಾರೆಂಟಿ ಇಲ್ಲ ಮೋದಿ ಡೈಮಂಡ್ ಇದ್ದಂತೆ ಅವರನ್ನು ಗೆಲ್ಲಿಸುವ ಎಂದರು.375 ಯೋಜನೆಗಳನ್ನು ಕೇಂದ್ರ ಸರ್ಕಾರ ದೇಶದ ಪ್ರಗತಿಗಾಗಿ ನೀಡಿದೆ.ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆಯಿಲ್ಲದ ನಾಯಕ ಎಂದರೆ ಅದು ವಿಶ್ವೇಶ್ವರ ಹೆಗಡೆ ಕಾಗೇರಿ.ತಮ್ಮ ಆಸು ಪಾಸಿನ ಮತದಾರರ ಮನೆಗೆ ಹೋಗಿ ಬಿಜೆಪಿ ಪಕ್ಷದ ಸಾಧನೆಗಳನ್ನು ತಿಳಿಸಬೇಕು ಎಂದರು ನಮ್ಮ ತಾಲೂಕಿನಲ್ಲಿ ಗೊಂದಲವಿದೆ ಅದು ಸದ್ಯದಲ್ಲಿಯೇ ಬಗೆಹರಿಯುತ್ತದೆ ಎಂದರು.ಪಂಚಾಯ್ತಿ ಮಟ್ಟದಲ್ಲಿ ಪಕ್ಷ ಬಲವರ್ಧನೆ ಯಾಗಬೇಕು ಎಂದರು.

ಮೋದಿ ವಿಶ್ವ ನಾಯಕ

ಪಟ್ಟಣ ಪಂಚಾಯ್ತಿ ಸದಸ್ಯರಾದ ಅಶೋಕ್ ಛಲವಾದಿ ಮಾತನಾಡಿ ದೇಶ ಕಂಡ ಅಪ್ರತಿಮ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಮೋದಿಜಿ ಬರಬೇಕಾಯಿತು.ಶೋಷಿತ ವರ್ಗಗಳ ಕಲ್ಯಾಣಕ್ಕೆ ಇರುವ ಮೋದಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರ ಕ್ಕೆ ತರಬೇಕು ಅದಕ್ಕಾಗಿ ಎಲ್ಲರೂ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವ ಎಂದರು.

ಸನಾತನ ಧರ್ಮ ಉಳಿವಿಗೆ ಬಿಜೆಪಿಗೆ ಮತ ನೀಡಿ

ಭಾರತ ದೇಶ ಸನಾತನ ಧರ್ಮದ ಸಂಸ್ಕೃತಿ ಯನ್ನೂ ಹೊಂದಿರುವ ದೇಶ,ಸನಾತನ ಸಂಸ್ಕೃತಿ ಉಳಿಯಬೇಕಾದರೆ ಬಿಜೆಪಿ ಗೆಲ್ಲಬೇಕು.ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶಿ ಮಥುರಾ ದೇಗುಲಗಳನ್ನು ನಿರ್ಮಾಣ ಮಾಡಲಾಗುವುದು.ದೇಶದ ಅಸ್ಮಿತೆಯ ಸಂಕೇತ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್.ಆರ್ಟಿಕಲ್ 28,29,30,31ಗಳನ್ನು ತಿದ್ದುಪಡಿ ಮಾಡಿ ಸಂವಿಧಾನವನ್ನು ತಿರುಚುವ ಪ್ರಯತ್ನಕ್ಕೆ ಕೈ ಹಾಕಿದ್ದು ಕಾಂಗ್ರೆಸ್ ಎಂದು ತಿಳಿಸಿದರು.ಬಾಯಿಗೆ ಬಂದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಮಾತನಾಡುತ್ತಾ ಇದ್ದರೆ ಅದನ್ನು ಬಂದ್ ಮಾಡಬೇಕು ಎಂದರು.

ಹೋಗೋದಿದ್ರೆ ಜಲ್ದಿ ಹೋಗಿ…!

ಶ್ರೀ ನರೇಂದ್ರ ಮೋದಿ ಅವರು ದೇವ ಮಾನವ ರಿದ್ದಂತೆ ಅವರನ್ನು ಗೆಲ್ಲಿಸಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಚಿಹ್ನೆ ಕಮಲದ ಗುರುತಿಗೆ ಮತ ಹಾಕಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸೋಣ ಎಂದರು.ಇದೇವೇಳೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರೆಬೇಕು? ಎನ್ನುವ ತವಕದಲ್ಲಿರುವವರು ಆದಷ್ಟು ಬೇಗ ಹೊರಟುಬಿಡಿ, ಮುಂದೆ ನಿಮಗೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಕೆಲವರ ಹೆಸರು ಹೇಳದೇ ಟಾಂಗ್ ನೀಡಿದರು.ಬಿಜೆಪಿ ಪಕ್ಷ ಕೆಲವರಿಗೆ ಎಲ್ಲವನ್ನೂ ನೀಡಿತ್ತು,ಪಕ್ಷ ಎಂದರೆ ತಾಯಿ ಇದ್ದಂತೆ ಆ ತಾಯಿಗೆ ದ್ರೋಹ ಬಗೆದರೆ ಒಳಿತಾಗುವುದಿಲ್ಲ,ಕಾರ್ಯಕರ್ತರೇ ಪಕ್ಷದ ಶಕ್ತಿ , ಕಾರ್ಯಕರ್ತರಿಂದ ಪಕ್ಷ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸೋಣ ಎಂದರು.

ಉದ್ದೇಶ ಪೂರ್ವಕವಾಗಿಯೇ ಬ್ಯಾನರ್ ನಲ್ಲಿ ಫೋಟೋ ಹಾಕಿಲ್ಲ

ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್ ಏಸ್ ಹೆಗಡೆ ಮಾತನಾಡಿ ಜನ ಬಿಜೆಪಿಯ ಪರವಾಗಿದ್ದಾರೆ,ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ಪಕ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರ ಪಡೆಯಲಿದೆ ಎಂದರು.ಗ್ಯಾರಂಟಿ ಗುಂಗಿನಲ್ಲಿ ರುವ ಸರ್ಕಾರ ರಾಜ್ಯದಲ್ಲಿ ವಿಫಲವಾಗಿದೆ ಎಂದರು. 11.000 ಕೋಟಿ ಶೋಷಿತ ವರ್ಗಗಳಿಗೆ ಸೇರಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ ಎಂದರು ಕಳೆದ ತಿಂಗಳು ನಡೆದ ಸಮಾರಂಭದಲ್ಲಿ ಈ ಶಿವರಾಮ್ ಹೆಬ್ಬಾರ್ ಭಾವಚಿತ್ರ ಬ್ಯಾನರ್ ನಲ್ಲಿತ್ತು,ಆದರೆ ಈ ಬಾರಿ ಉದ್ದೇಶ ಪೂರ್ವಕವಾಗಿಯೇ ಹಾಕಿಲ್ಲ,ಅವರಿಂದ ಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿದೆ ಎಂದು ಜಿಲ್ಲಾಧ್ಯಕ್ಷರಾದ ಎನ್ ಏಸ್ ಹೆಗಡೆ ತಿಳಿಸಿದರು.

ಹೃದಯ ಶ್ರೀಮಂತಿಕೆಯ ಕಾರ್ಯಕರ್ತರು ಪಕ್ಷದ ಶಕ್ತಿ

ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28,500 ಲೀಡ್ ಅನ್ನು ಯಲ್ಲಾಪುರ– ಮುಂಡಗೋಡ ಕ್ಷೇತ್ರ ನೀಡಿತ್ತು.ಈ ಬಾರಿ ಅದು ಹೆಚ್ಚಾಗಬೇಕು ಎಂದರು.ತುಷ್ಟೀಕರಣ ಹಾಗೂ ದೇಶ ದ್ರೋಹಿ ನೀತಿ ಹೊಂದಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಹಿಂದೂ ಪರ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ನೀಡಿದೆ ಇದು ಅಂತ್ಯವಾಗಲು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಮತ್ತೊಮ್ಮೆ ಬರಬೇಕು,ಮುಂಡಗೋಡ ದಲ್ಲಿ ಗೂಂಡಾಗಿರಿ,ಹಣದ ಮದದ,ಅಧಿಕಾರ ಕೊನೆಯಾಗಬೇಕು ಎಂದರೆ ಈ ಬಾರಿ ಬಿಜೆಪಿಗೆ ಮತ ನೀಡಿ ವಿಶ್ವೇಶ್ವರ ಹೆಗಡೆ ಅವರನ್ನು ಗೆಲ್ಲಿಸಿ ಎಂದರು ಹೃದಯ ಶ್ರೀಮಂತಿಕೆಯ ಕಾರ್ಯಕರ್ತರು ಪಕ್ಷದ ಶಕ್ತಿ ಎಂದು ಹೇಳಿದರು

ಮೋದಿ ವಿಶ್ವ ನಾಯಕ

ಇದೇವೇಳೆ ಮಾತನಾಡಿದ ಬಿಜೆಪಿಯ ಕೆನರಾ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕಾರ್ಯಕರ್ತರ ಸಮಾವೇಶ ದಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿ ನನ್ನ ಉತ್ಸಾಹ ಹೆಚ್ಚಿದೆ ಎಂದರು ಶಿವಾಜಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿಗೂ ಹಿಂದೂ ಸಮಾಜ ತನ್ನ ಅಸ್ತಿತ್ವ ವನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ ಎಂದರು.ಇತ್ತೀಚಿಗೆ ನಡೆದ G -20 ಸಮ್ಮೇಳನದಲ್ಲಿ ಮೋದಿಯನ್ನು ವಿಶ್ವ ನಾಯಕ ಎಂದು ಇಡೀ ಪ್ರಪಂಚದ ಎಲ್ಲ ದೇಶಗಳು ಬಣ್ಣಿಸಿದೆ ಅಂತಹ ನಾಯಕನನ್ನು ಇನ್ನೊಮ್ಮೆ ಗೆಲ್ಲಿಸೋಣ ಎಂದರು.ಮುಂಡಗೋಡ ದಲ್ಲಿರುವ ಸುಮಾರು 90 ಬೂತಗಳಲ್ಲಿ ಅತಿ ಹೆಚ್ಚಿನ ಲೀಡ್ ಕೊಟ್ಟು ಬಿಜೆಪಿ ಯನ್ನೂ ಕೆನರಾ ಕ್ಷೇತ್ರದಲ್ಲಿ ಗೆಲ್ಲಿಸುವ ಎಂದರು.ಹಣಕ್ಕೆ ಹೆಂಡಕ್ಕೆ ಮಾರಿಕೊಳ್ಳದ ಜನ ಎಂದು ಯಲ್ಲಾಪುರ ಮುಂಡಗೋಡ ಕ್ಷೇತ್ರದ ಜನ ಸಾಭಿತುಪಡಿಸುವ ಅವಶ್ಯಕತೆ ಈ ಬಾರಿಯ ಚುನಾವಣೆಯಲ್ಲಿದೆ ಎಂದರು.

ಕಾರ್ಯಕರ್ತರ ಸಮಾವೇಶ ದಲ್ಲಿ ಅಳವಡಿಸಲಾದ ಪಕ್ಷದ ಬ್ಯಾನರ್ ನಲ್ಲಿ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ್ ಹೆಬ್ಬಾರ್ ಭಾವಚಿತ್ರ ಇಲ್ಲದಿರುವುದು ಚರ್ಚೆಗೆ ಗ್ರಾಸವಾಯಿತು.ಅದರಲ್ಲೂ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಊಹಾಪೋಹಗಳ ಜೊತೆಗೆ ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆ ಯಲ್ಲಿ ಮತ ಚಲಾಯಿಸದೆ ಇದ್ದಿದ್ದು,ಪಕ್ಷದಲ್ಲಿ ಶಿವರಾಮ್ ಹೆಬ್ಬಾರ್ ಅವರ ಕುರಿತು ಅಸಮಾಧಾನ ಉಂಟಾಗಲು ಕಾರಣ ಎನ್ನಲಾಗಿದೆ.

ಕಾರ್ಯಕ್ರಮದ ವೇಳೆ ಬಿಜೆಪಿ ಮಾಧ್ಯಮ ವಕ್ತಾರರಾದ ಹರಿಪ್ರಸಾದ್ ಕೊಣೆಮನೆ,ಸುನಿಲ್ ಹೆಗಡೆ,ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಪ್ರಮುಖರಾದ ಗುರುಪ್ರಸಾದ್ ಹೆಗಡೆ,ಮಹೇಶ್ ಹೊಸಕೊಪ್ಪ,ಪಟ್ಟಣ ಪಂಚಾಯ್ತಿ ಸದಸ್ಯ ಶ್ರೀಕಾಂತ್ ಸಾನು,ವೀಣಾ ಓಶಿಮಠ ಉಪಸ್ಥಿತರಿದ್ದರು ವಿಠ್ಠಲ ಬಾಳಂಬಿಡ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!