ಚಾಮರಾಜನಗರ ಸುದ್ದಿ ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಣೆ ಮಾಡಬೇಕು ಎಂದು ವಿರಾಟ್ ಶಿವು, ರಮೇಶ್ ಹರದಹಳ್ಳಿ, ಸತೀಶ್ , ಬಾಲಸುಬ್ರಮಣ್ಯ, ಪ್ರದೀಪ್ ಹರದನಹಳ್ಳಿ,ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಹಿಂದೂ ಮನೆಗಳು ದೇವಾಲಯಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಅತ್ಯಂತ ನಾಚಿಕೆ ಗೆಡೀತನದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಿಂದುಗಳ ಮೇಲಿನ ದಾಳಿಯನ್ನು ತಡೆಯುವಂತೆ ಬಾಂಗ್ಲಾದೇಶದ ಸೇನೆಗೆ ಭಾರತ ಸರ್ಕಾರವು ನಿರ್ದೇಶನ ನೀಡಬೇಕು ಅಲ್ಲಿರುವ ಹಿಂದೂಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ತಕ್ಷಣವೇ ಅವರಿಗೆ ಭದ್ರತೆ ಒದಗಿಸಬೇಕೆಂದು ಹಿಂದೂ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ವರದಿ-ಷಣ್ಮುಗ ಸ್ವಾಮಿ