ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಮಲಾಪುರ ;ಸೆ. ೧೦ ರಂದು ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮುಖರಿಗೆ ವಿಶೇಷ ಸತ್ಕಾರ

ಕಲಬುರಗಿ/ಕಮಲಾಪುರ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಕಮಾಪುರ ತಾಲೂಕಾ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ,ವಿವಿಧ ಕ್ಷೇತ್ರದ ಪ್ರಮುಖರಿಗೆ ವಿಶೇಷ ಸತ್ಕಾರ , ಮಾಜಿ ಸೈನಿಕರು, ಸ್ನಾತಕೋತ್ತರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭವು ದಿನಾಂಕ 10.09.2024 ರಂದು ಮಂಗಳವಾರ ಕಮಲಾಪುರದ ಆಕೃತಿ (ಬಿರಾದಾರ) ಕಲ್ಯಾಣ ಮಂಟಪದಲ್ಲಿ 11 ಗಂಟೆಗೆ ಜರುಗಲಿದೆ ಎಂದು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸುರೇಶ ಲೇಂಗಟಿ ಹಾಗೂ ನೂತನ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮೂಲಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೊಂತ -ಕಲಮೂಡ ಮುಲ್ಲಾಮಾರಿ ತೀರ್ಥ ಕ್ಷೇತ್ರದ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ದಿವ್ಯ ಸಾನಿಧ್ಯ ವಹಿಸಲಿದ್ದು, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಾಬುರಾವ ಯಡ್ರಾಮಿ ಗೌರವ ಉಪಸ್ಥಿತಿ ವಹಿಸುವರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಚಿವ ರೇವುನಾಯಕ ಬೆಳಮಗಿ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಶಿವಂಜನ ಸತ್ಯಂಪೇಟ್,ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ, ಮಾಜಿ ಜಿಪಂ ಅಧ್ಯಕ್ಷ ಶಿವಪ್ರಭು ಪಾಟೀಲ, ಮಾಜಿ ಜಿಪಂ ಸದಸ್ಯ ಶರಣಬಸ್ಸಪ್ಪ ಪೊಲೀಸ್ ಪಾಟೀಲ, ಮಾಜಿ ಜಿಪಂ ಸದಸ್ಯ ಶಿವಶೆಟ್ಟಿ ಪಾಟೀಲ, ವೀರಶೈವ ಲಿಂಗಾಯ ಮುಖಂಡ ರವಿ ಬಿರಾದರ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ,
ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ, ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಜಕುಮಾರ ಕಪನೂರ, ಬಿಜೆಪಿ ಮುಖಂಡ ಶಿವಕುಮಾರ ಪಸಾರ, ಕಾಂಗ್ರೆಸ್ ಮುಖಂಡ ಗುರು ಮಾಟೂರ,ತಹಶಿಲ್ದಾರ ಮಹಮ್ಮದ್ ಮೊಹಸಿನ್, ಪ.ಪಂ. ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ತಾಪಂ ಇಒ ಕುಮಾರಿ ನಿಲಾಂಬಿಕಾ ಬಬಲಾದ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ, ಶಿವಕುಮಾರ ದೊಶೆಟ್ಟಿ, ಅಮೃತ ಗೌರೆ, ಮಲ್ಲಿಕಾರ್ಜುನ ಮರತೂರಕರ, ಅಮರನಾಥ ಚಿಕ್ಕೆಗೌಡ, ಶಿವಾ ಅಷ್ಟಗಿ, ಸಂತೋಷ ರಾಂಪೂರ, ನಿಂಗಪ್ಪ ಪ್ರಬುದ್ದಕರ್, ನರೇಶ ಹರಸೂರಕರ, ಶಶಿಧರ ಮಾಕಾ, ಅಂಬಾರಾಯ ಜವಳಗಾ, ಶರಣು ಗೌರೆ, ತಾಜುದ್ದಿನ ಪಟೇಲ, ಸುರೇಶ ರಾಠೋಡ, ಆನಂದ ವಾರಿಕ್, ಮಹಾದೇವ ದಸ್ತಾಪುರ, ಮಹಾದೇವ ದಸ್ತಾಪುರ, ಹಣಮಂತ ಹೊಸಮನಿ ಇತರರು ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರದ ಪ್ರಮುಖರಿಗೆ ವಿಶೇಷ ಸತ್ಕಾರ:
ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ರಾಯಚೂರು ತಹಶೀಲ್ದಾರ ಸುರೇಶ ವರ್ಮಾ, ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷಪ್ಪ ಜಮಾದಾರ, ಕಮಲಾಪುರ ಡಿಗ್ರಿ ಕಾಲೇಜಿನ ಪ್ರಾಚಾರ್ಯೆ ಡಾ ಅಮೃತಾ ಕಟಕೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ, ಕಲಬುರಗಿ ಸಿಪಿಐ ಪಿ.ಬಿ.ಶಾಂತಿನಾಥ, ಕಮಲಾಪುರ ಸಿಪಿಐ ಶಿವಶಂಕರ ಸಾಹು, ಉದಯಕಾಲ ದಿನಪತ್ರಿಕೆಯ ಜಿಲ್ಲಾ ವರದಿಗಾರ ಚಂದ್ರಶೇಖರ ಕವಲಗಾ, ಮಹಾಗಾಂವ ಕ್ರಾಸ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪ್ಪ ಮಾಳಗೆ, ಸಂಯುಕ್ತ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ಭಿಮಾಶಂಕರ ಫಿರೋಜಾಬಾದ, ಕಮಲಾಪುರ ಮಾಜಿ ಗ್ರಾಪಂ ಅಧ್ಯಕ್ಷ ಅಬ್ದು ಸತ್ತಾರ, ಜಿಲ್ಲಾ ಕಾರ್ಮಿಕ ಹೋರಾಟಗಾರ ಸುನೀಲ ಮಾನಪಡೆ ಸಕಲರನ್ನು ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಮರಣೀಯ ಸೇವೆ ಗುರುತಿಸಿ ವಿಶೇಷವಾಗಿ ಸತ್ಕರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಮಲಾಪುರ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಬಸವರಾಜ ಬಿರಾದರ,ಖಜಾಂಚಿ ಶಿವಲಿಂಗ ಬೆಳಕೋಟಾ,ಉಪಾಧ್ಯಕ್ಷರಾದ ರಮೇಶ ಕಟ್ಟಿಮನಿ, ಚೆನ್ನವೀರ ದಸ್ತಾಪುರ, ಕಾರ್ಯದರ್ಶಿ ಆನಂದ ತೆಗನೂರ, ಕಾರ್ಯಕಾರಣಿ ಸದಸ್ಯ ಸುಧಾಕರ ಲೇಂಗಟಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ