ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಸರ್ವೆ ನಂಬರ್ 21/6 ರಲ್ಲಿ ಜಮೀನುಗಳ ಸಾಗುವಳಿ ಮತ್ತು ಅನಧಿಕೃತ ಇಟ್ಟಿಗೆ ಭಟ್ಟಿ ನಿರ್ಮಾಣ ಮಾಡಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ ತಹಶೀಲ್ದಾರ್ ಮತ್ತು ದಂಡಾಧಿಕಾರಿಗಳಾದ ಶ್ರೀಶಂಕರ್ ಗೌಡಿ ಹಾಗೂ ಕಂದಾಯ ನಿರೀಕ್ಷಕರು ಆದ ವಿಕ್ರಮ ಸಿಂಗ ರಜಪೂತ,ಗ್ರಾಮ ಆಡಳಿತ ಅಧಿಕಾರಿಯಾದ ಗಿರೀಶ್ ರಣದೇವ್ ಅವರೊಂದಿಗೆ ತೆರಳಿದ್ದರು,
ಈ ವೇಳೆ ರವಿ ನಾಗಪ್ಪ ಕೋಣನಕೇರಿ,
ಕುಬೇರಪ್ಪ ಯಲ್ಲಪ್ಪ ಕೋಣನಕೇರಿ
ಗುಡ್ಡಪ್ಪ ಕುಬೇರಪ್ಪ ಕೋಣನಕೇರಿ ಇವರುಗಳು
ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದು, ಜೀವಬೆದರಿಕೆ ಹಾಕಿದ್ದಾರೆ ಎಂದು ಮಾನ್ಯ ತಹಶೀಲ್ದಾರ ಆದಂತಹ ಶಂಕರ್ ಗೌಡಿ ಅವರು ಮುಂಡಗೋಡ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು,
ಮೇಲೆ ಹೆಸರಿಸಿದ ಆರೋಪಿತರ ಮೇಲೆ ಭಾರತೀಯ ದಂಡ ಸಂಹಿತೆ ಪ್ರಕಾರ 447,341,353,504,506 ರ ಪ್ರಕಾರ FIR ದಾಖಲಾಗಿದ್ದು,
ಮುಂದಿನ ಕ್ರಮಗಳ ಬಗ್ಗೆ ಕಾದು ನೋಡಬೇಕಿದೆ.
ಶಾಸನಗಳನ್ನು ರಚಿಸುವುದು ಶಾಸಕಾಂಗದ ಕೆಲಸವಾದರೂ ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ಕಾರ್ಯರೂಪಕ್ಕೆ ತರುವ ಕೆಲಸ ಕಾರ್ಯಾoಗದ್ದು ಅಂತಹ ಕಾರ್ಯಾoಗ ವನ್ನು ಪ್ರತಿನಿಧಿಸುವ ತಾಲೂಕ ಆಡಳಿತ ನೋಡಿಕೊಳ್ಳುವ ಅಧಿಕಾರಿಗಳನ್ನು ದಬಾಯಿಸುವ ಅವರ ಕಾರ್ಯವ್ಯಾಪ್ತಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು,ಇದು ಅಪಾಯಕಾರಿ ಬೆಳವಣಿಗೆ ಆಗಿದೆ ಅಧಿಕಾರಿಗಳ ಬೆನ್ನಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ನಿಲ್ಲಬೇಕು ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.
ವರದಿ – ಶಿವರಾಜ್ ಶಿರಾಲಿ




















