ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ತಾಲೂಕಿನಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಯನ್ನು ಪ್ರಾರಂಭಿಸಿ : ಬಿ. ಪ್ರಸಾದ

ಬಳ್ಳಾರಿ / ಕಂಪ್ಲಿ : ಪಟ್ಟಣದ ಎಸ್ ಎನ್ ಪೇಟೆ ಶಾಲೆ ಸಭಾಂಗಣದಲ್ಲಿ ಸೋಮವಾರ ಸಂಜೆ 5 : 00 ಗಂಟೆಗೆ ಕಂಪ್ಲಿ ತಾಲೂಕಿನಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಯನ್ನು ಆರಂಭಿಸುವ ಬಗ್ಗೆ ಜನಪ್ರತಿನಿಧಿಗಳ, ಊರಿನ ಮುಖಂಡರ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಭೆ ಜರುಗಿತು.

ಈ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಬಿ. ಪ್ರಸಾದ ಮಾತನಾಡಿ ಕಂಪ್ಲಿಯಲ್ಲಿ ನೂತನ ಬಿಇಒ ಕಚೇರಿ ಆರಂಭಕ್ಕೆ ಕಲಬುರ್ಗಿಯ ಶಿಕ್ಷಣ ಇಲಾಖೆ ಅಪಾರ ಆಯುಕ್ತರು ಪ್ರಕ್ರಿಯೆ ಆರಂಭಿಸಿದ್ದಾರೆ.
ಕಚೇರಿ ಆರಂಭಕ್ಕೆ ಸೃಜನಾ ಸಮಿತಿ ನೇಮಕ ರಚಿಸಲಾಗಿದೆ. ಆದರೆ ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭವಾಗಿಲ್ಲ, ಕಂಪ್ಲಿ ತಾಲೂಕು ದಿನೇ ದಿನೇ ಬೆಳೆಯುತ್ತಿದ್ದು ಕ್ರಮೇಣ ಶಾಲೆಗಳ ಸಂಖ್ಯೆಯು ಹೆಚ್ಚಳವಾಗುತ್ತಿದೆ, ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರ ಅನುಕೂಲಕ್ಕಾಗಿ ಕಂಪ್ಲಿಯಲ್ಲಿ ಕಚೇರಿಯನ್ನು ಆರಂಭಿಸಲು ಮಾನ್ಯ ಶಾಸಕರ ನೇತೃತ್ವದಲ್ಲಿ ಮೇಲಾಧಿಕಾರಿಗಳ ಬಳಿ ನಿಯೋಗ ತೆರಳಿ ಮನವರಿಕೆ ಮಾಡಿ ಕಂಪ್ಲಿಯಲ್ಲಿಯೇ ಬಿಇಒ ಕಚೇರಿ ಪ್ರಾರಂಭಿಸೋಣ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸ ರಾವ್ ( ಕೆ. ವಾಸಪ್ಪ) ಮಾತನಾಡಿ ಕಂಪ್ಲಿ ಕಂದಾಯ ತಾಲೂಕಾಗಿ ಅನೇಕ ವರ್ಷಗಳಾದರು ತಾಲೂಕಿನಲ್ಲಿ ಬಿಇಒ ಕಚೇರಿ ಆರಂಭಿಸಿಲ್ಲ ಆದಷ್ಟು ಬೇಗನೆ ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲವಾಗುಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ, ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ವಿವಿಧ ಸಂಘಟನೆಗಳ ಪ್ರಮುಖರಾದ ಜಿ. ರಾಮಣ್ಣ, ಸಿ. ಚೆನ್ನಪ್ಪ,
ಕೆ. ಮನೋಹರ, ಎಸ್. ವೆಂಕಟರಮಣ, ಟಿ.ಎಚ್. ಎಂ. ರಾಜಕುಮಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿಇಒ ಕಚೇರಿಯನ್ನು ಸ್ಥಾಪಿಸಲು ಶಿಫಾರಸ್ಸು ಮಾಹಿತಿಯನ್ನು ನೀಡುವುದಕ್ಕಾಗಿ ನೌಕರರ ಸಂಘ ಹಾಗೂ ವಿವಿಧ ವೃಂದದ ಸಂಘಗಳ ಪದಾಧಿಕಾರಿಗಳನ್ನು ಮಾಹಿತಿಗಾಗಿ ಕರೆಸಲಾಗಿತ್ತು.

ಕಂಪ್ಲಿ ಹೊಸ ತಾಲ್ಲೂಕಾಗಿರುವುದರಿಂದ ಬಿಇಒ ಕಚೇರಿ ಆರಂಭಕ್ಕೆ ಮುಖ್ಯಮಂತ್ರಿಯವರನ್ನು ಒತ್ತಾಯಿಸುವುದಾಗಿ ಶಾಸಕ ಜೆ.ಎನ್. ಗಣೇಶ ರವರು ಶಿಕ್ಷಕರ ದಿನಾಚರಣೆಯ ಸೆಪ್ಟೆಂಬರ್ 05. 2024 ರಂದು ಭರವಸೆ ನೀಡಿದರು.
ಈ ಭರವಸೆಯ ಈಡೇರಿಸುತ್ತಾರೆ ಎಂಬ ವಿಶ್ವಾಸ ಕಂಪ್ಲಿ ತಾಲೂಕಿನ ಜನತೆಯದ್ದಾಗಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!