ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮರ್ಪಕವಾಗಿ ಹುಳು ನಿರ್ವಹಿಸಲು ಕೃಷಿ ನಿರ್ದೇಶಕರ ಸಲಹೆ

ಕಲಬುರಗಿ//ಚಿತ್ತಾಪುರ :ಮುಂಗಾರು ಹಂಗಾಮಿನ ಬೆಳಗಳಿಗೆ ಬಿತ್ತನೆ ಪ್ರಾರಂಭವಾಗಿದ್ದು ಬಿತ್ತನೆ ಮಾಡಿದ ಸೋಯಾ, ಉದ್ದು, ಹೆಸರು ಮತ್ತು ತೊಗರಿ ಬೆಳೆಗಳಿಗೆ 2-3 ಎಲೆಯ ಹಂತದಲ್ಲಿದ್ದಾಗ (ಸುಮಾರು 10 ರಿಂದ 20 ದಿವಸದ ಬೆಳೆಗಳಿರುವಾಗ) ರೈತರ ಹೊಲಗಳಲ್ಲಿ ಬಸವನ ಹುಳುವಿನ (ಶಂಕದ ಹುಳು) ಬಾಧೆ ಕಂಡು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವುಗಳ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕ‌ರ್ ತಿಳಿಸಿದ್ದಾರೆ.

ಬಸವನ ಹುಳುವಿನ ಲಕ್ಷಣಗಳು:
ಈ ಹುಳುಗಳು ಬೆಳೆಯುತ್ತಿರುವ ಗಿಡದ ಪ್ರಥಮವಾಗಿ 2 ರಿಂದ 4 ಎಲೆಗಳ ತುದಿ ಚಿಗುರು, ದೇಟುಗಳು ಹಾಗೂ ಕಾಂಡಗಳನ್ನು ಕಾಂಡಗಳನ್ನು ಕೆರೆದು ತಿನ್ನುವದು ಪೀಡೆ ಭಾದಿತ ನಾಟಿಗಳು ಸರಿಯಾಗಿ ಬೆಳೆಯದೇ ನಶಿಸಿ ಹೊಗುತ್ತದೆ ಮತ್ತು ಮುಂದುವರೆದು ಈ ಪೀಡೆಯ ಭಾಧೆ ಜಾಸ್ತಿಯಾದಲ್ಲಿ ಅಂತಹ ಭಾದಿತ ಹೊಲಗಳ ರೈತರು ಮತ್ತೊಮ್ಮೆ ಬಿತ್ತನೆ ಕಾರ್ಯ ಮಾಡಿಕೊಳ್ಳಬಹುದು, ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಬಾದ ಕಾಣಬಹುದು ಸಾಮಾನ್ಯವಾಗಿ ಸಾಯಂಕಾಲದಿಂದ ಬೆಳಗಿನ ಜಾವದವರೆಗೂ ತಿಂದು ಪುನ: ಬೆಳೆಗಾದ ಕೂಡಲೇ ಅಡುಗುತಾಣಗಳಲ್ಲಿ ಸೇರಿಕೊಳ್ಳುತ್ತವೆ.

ಬಸವನ ಹುಳುವಿನ ನಿರ್ವಹಣೆ:
ಪೀಡೆಗೆ ಆಸರೆಯಾಗುವ ಅಡುಗು ತಾಣಗಳಾದ ಹುಲ್ಲು ಬಿದ್ದ ಕಸಕಡ್ಡಿ ಮುಂತಾದವುಗಳನ್ನು ಪ್ರಾರಂಭದಲ್ಲಿ ತೆಗೆದು ಸ್ವಚ್ಚವಾಗಿಡಬೇಕು, ಯಾವಾಗ ಶಂಕದ ಹುಳುವಿನ ಆರ್ಭಟ ಜಾಸ್ತಿಯಾಗಲಿಕ್ಕೆ ಪ್ರಾರಂಭಿಸುವುದು ಆಗ ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪಿ ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂಡುತ್ತವೆ. ಪ್ರತಿ ದಿನ ಮುಂಜಾನೆ ಆರಿಸಿ ಸಾಬೂನಿನ ನೀರಲ್ಲಿ ಬಕೇಟಿಗೆ ಹಾಕಿ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು. ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿಚೀಲ ಹರಡಿ ಅಥವಾ ಕೊಳೆತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬೀಚಿಂಗ್ ಪುಡಿ 8-10ಕಿ.ಗ್ರಾ ಪ್ರತಿ ಎಕರೆಗೆ ಧೂಳಿಕರಿಸಿ ನಾಶಪಡಿಸಬಹುದು. ಅಥವಾ ಮೇಲೆ ಹೇಳಿದ 2 ಪದ್ಧತಿ ಅನುಸರಿಸಿ ನಾಶಪಡಿಸಬಹುದು.

ಸತ್ತ ಹುಳುಗಳನ್ನು ಮರುದಿನವೇ ಆರಿಸಿ 3 ಅಡಿ ಆಳದ ಗುಂಡಿಯಲ್ಲಿ ಹೂಳಬೇಕು. ಈ ರೀತಿ ಮಾಡುವುದರಿಂದ ಸತ್ತ ಹುಳುವಿನ ಹೊಟ್ಟೆಯಲ್ಲಿರುವ ಮೊಟ್ಟೆಗಳನ್ನು ನಾಶ ಮಾಡಿದಂತಾಗುತ್ತದೆ. ಮತ್ತು ಬೆಕ್ಕು, ನಾಯಿ, ಪಕ್ಷಿ ಮತ್ತು ಇತರೆ ಪರ ಭಕ್ಷಕಗಳು ಪಾಷಣ ಯುಕ್ತ ಸತ್ತ ಹುಳುಗಳನ್ನು ತಿಂದು ನಾಶವಾಗದಂತೆ ಕಾಪಾಡಬಹುದು, ಕರ್‌ಬಾರಿಲ್ ವಿಷ ಪಾಷಾಣವನ್ನು ಬಳಸಿದ ಯಾವುದೇ ಬೆಳೆಗಳಲ್ಲಿ ನೀರನ್ನು ಚೆಲ್ಲಿ ನಿಷ್ಕ್ರಿಯಗೊಳಿಸಬೇಕು ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ವರದಿ ಮೊಹಮ್ಮದ್ ಅಲಿ, ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!