ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವಿರಕ್ತ ಮಠಕ್ಕೆ ಅನ್ನದಾನೇಶ್ವರ ದೇವರು ಅವರನ್ನು ಮಠದ ಉತ್ತರಾಧಿಕಾರಿಯಾಗಿ ನೇಮಿಸುವ ಕಾರ್ಯಕ್ರಮವು ಅದ್ದೂರಿಯಾಗಿ ಭಕ್ತರ, ಮಠಾಧೀಶರ ಸಮ್ಮುಖದಲ್ಲಿ ಸಂಭ್ರಮದಲ್ಲಿ ಜರುಗಿತು. ಭಕ್ತಿ ಭಾವಕ್ಕೆ ಹೆಸರಾಗಿರುವಂತಹ ನಮ್ಮ ದೇಶ, ನಾಡಿನಲ್ಲಿರುವ ಮಠಗಳು ಮಾನ್ಯಗಳು, ಬಡವ ದೀನದಲಿತರ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡಾ ಅನ್ನ ಅಕ್ಷರ ಆಶ್ರಯಗಳನ್ನು ನೀಡಿ ಮಾನವೀಯತೆಯನ್ನು ಮೆರೆಯುತ್ತವೆ. ಅದರಲ್ಲಿ ನಮ್ಮ ಭಾಗದಲ್ಲಿರುವ ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಶ್ರೀ ಮಠವೂ ಒಂದಾಗಿದೆ ಎಂದು ಗುರು ಸಂಸ್ಥಾನ ಮಠದ ಪೂಜ್ಯ ಡಾಕ್ಟರ್ ಶಿವಾನಂದ್ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ರಟಕಲ್ ಮುರುಘೇಂದ್ರ ಶಿವಯೋಗಿಗಳು ವಿರಕ್ತ ಮಠ( ದೊಡ್ಡ ಮಠ )ದ ನಿಯೋಜಿತ ಉತ್ತರಾಧಿಕಾರಿ ಪೂಜ್ಯ ಅನ್ನದಾನೇಶ್ವರ ದೇವರು ಪುರ ಪ್ರವೇಶ ನಿಮಿತ್ಯ ದಿನಾಂಕ 23-06-2025 ಸೋಮವಾರ ದಂದು ರಟಕಲ್ ನಲ್ಲಿ ದೊಡ್ಡ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಕಳೆದ ವರ್ಷ 8ನೇ ಜುಲೈ 2024ರಲ್ಲಿ ಶ್ರೀ ಮಠದ ಸಿದ್ಧರಾಮ ದೇವರು ಲಿಂಗೈಕ್ಯರಾದ ಪ್ರಯುಕ್ತ ಮುಂದಿನ ಉತ್ತರಾಧಿಕಾರಿಯಾಗಿ ನಡೆಸಿಕೊಂಡು ಹೋಗುವುದಕ್ಕಾಗಿ ಅನ್ನದಾನೇಶ್ವರ ದೇವರುಗಳಿಗೆ ಉತ್ತರಾಧಿಕಾರಿ ಪತ್ರ ನೀಡಿದರು.
ನೂತನ ಶ್ರೀಗಳ ಪರಿಚಯ : ಪೂಜ್ಯ ಅನ್ನದಾನೇಶ್ವರ ದೇವರು ತಂದೆ ಅಜ್ಜಯ್ಯ ಹಿರೇಮಠ ತಾಯಿ ಸುಧಾದೇವಿ ಊರು ಅರಳೇಶ್ವರ ತಾಲೂಕು ಹಾನಗಲ್ ಜಿಲ್ಲೆ ಹಾವೇರಿ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಘಟಪ್ರಭಾದಲ್ಲಿ ಪಿಯುಸಿ ಬಿಎ ಶಿಕ್ಷಣ ಮುಗಿಸಿ, ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಉನ್ನತ ಶಿಕ್ಷಣ ಮುಗಿಸಿ, ವೈದಿಕೃತ, ಜ್ಯೋತಿಷ್ಯ, ಸಂಸ್ಕೃತ ಅಧ್ಯಯನ, ಯೋಗ ಶಿಕ್ಷಣ ಪಡೆದಿದ್ದಾರೆ.
ಉತ್ತರಾಧಿಕಾರಿ :
ರಟಕಲ್ ಮುರುಘೇಂದ್ರ ಶಿವಯೋಗಿಗಳ ವಿರಕ್ತ ಮಠವು 40 ಎಕರೆ ಜಮೀನು ಹೊಂದಿದ್ದು, ವಿವಿಧಡೆಯಿಂದ 18,000 ರೂ ಆದಾಯ ಬರುತ್ತದೆ. ಅಲ್ಲದೆ ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ಶ್ರೀ ಮಠದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮಾರಾಟ ಮಾಡದೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು, ನಿತ್ಯ ಲಿಂಗ ಪೂಜೆ, ಅರ್ಚನೆ, ಅಕ್ಷರ, ದಾಸೋಹ, ಶಿಕ್ಷಣ, ಸಮಾಜ ಸೇವೆ, ಹಾಗೂ ಇತರೆ ವ್ಯವಹಾರಗಳಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ಪತ್ರವನ್ನು ಬರೆದು ನೂತನ ಉತ್ತರಾಧಿಕಾರಿ ಶ್ರೀ ನೀಲಕಂಠ ದೇವರಿಗೆ ಹಸ್ತಾಂತರಿಸಲಾಯಿತು.
ಶ್ರೀಗಳ ಹೆಸರು ಬದಲಾವಣೆ :
ಅನ್ನದಾನೇಶ್ವರ ದೇವ ನೀಲಕಂಠ ದೇವನಾದ. ಈಗಾಗಲೇ ಪುರ ಪ್ರವೇಶ ಮಾಡಿರುವ ನಿಯೋಜಿತ ಉತ್ತರಾಧಿಕಾರಿಯದ ಪೂಜ್ಯ ಅನ್ನದಾನೇಶ್ವರ ದೇವರು ಎಂಬ ಹೆಸರನ್ನು ಬದಲಿಸಿ ರಟಕಲ್ ನ ಮುರುಘೇಂದ್ರ ಶಿವಯೋಗಿಗಳ ವೀರಭಕ್ತ (ದೋಡ ಮಠ) ದ ನೀಲಕಂಠ ದೇವರ ಹೆಸರನ್ನು ನೂತನ ಶ್ರೀಗಳಿಗೆ ನಾಮಕರಣ ಮಾಡಿದರು.
ಹಿರೇನಗಾವ್ ವಿರಕ್ತದ ಜಯ ಶಾಂತಲಿಂಗ ಮಹಾಸ್ವಾಮಿಗಳು, ಭರತೂರಿನ ಚಿಕ್ಕ ಗುರು ನಂಜೇಶ್ವರ ಶ್ರೀಗಳು, ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠ ಘಟಪ್ರಭದ ಮಂಡರಗಿ ಡಾ. ಮಲ್ಲಿಕಾರ್ಜುನ್ ಮಹಾಸ್ವಾಮಿಗಳು, ಹುಲಸೂರಿನ ಶಿವನಂದ್ ಮಹಾಸ್ವಾಮಿಗಳು, ರಟಕಲ್ ಮುರುಘೇಂದ್ರ ಶಿವಯೋಗಿಗಳ ವಿರಕ್ತ ಮಠ (ದೊಡ್ಡ ಮಠ )ದ ನಿಯೋಜಿತ ಉತ್ತರಾಧಿಕಾರಿ ಪೂಜ್ಯ ಅನ್ನದಾನೇಶ್ವರ ( ನೀಲಕಂಠ ) ದೇವರು ಆಶೀರ್ವಚನ ನೀಡಿದರು.
ನಿವೃತ್ತ ನ್ಯಾಯಾಧೀಶರು ಚನ್ನಬಸಪ್ಪ ಬೆನಕನಹಳ್ಳಿ ಮಾತನಾಡಿದರು.
ರಟಗಲ್ ನಡುವಿನ ಮಠದ ರೇವಣಸಿದ್ಧ ಶಿವಾಚಾರ್ಯರು , ಹುಕ್ಕೇರಿಯ ಶಿವಬಸವ ಸಿರಿಗಳು, ತೆಲಸಂಗದ ವೀರೇಶ್ವರ ದೇವರು, ಕಂತಾನಟ್ಟಿಯ ಗುರುದೇವ ದೇವರು, ರಾಜೇಶ್ವರದ ಘನಲಿಂಗ ರುದ್ರಮನಿ ಶ್ರೀಗಳು, ಅಜ್ಜಯ್ಯ ಹಿರೇಮಠ, ಬಿಲಗುಂದಿಯ ಚೀದಾನಂದ ಶ್ರೀಗಳು, ಸೂಗೂರಿನ ಚನ್ನ ರುದ್ರಮುನಿ ಶ್ರೀಗಳು, ರಟಕಲ್ ಗೌರಿಗುಡ್ಡದ ರೇವಣಸಿದ್ದ ಶರಣರು, ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ. ಅವಿನಾಶ್ ಜಾಧವ, ರಾಜೇಶ್ ಗುತ್ತೇದಾರ್, ಚಿಂತನ ರಾಠೋಡ್, ಶಿವಶರಣಪ್ಪ ಪೋತಕ್ ಪಲ್ಲಿ, ವೀರಣ್ಣ ಗಂಗಾಣಿ, ಜಗನ್ನಾಥ್ ಚೆಂಗಟಿ, ಶ್ರೀಶೈಲ ಮಾಲಿ ಪಾಟೀಲ್, ರಾಚಯ್ಯ ಕಿಣಿ, ಸಂಜಯ್ ಕುಮಾರ್ ಪಾಟೀಲ್, ರೇವಣಸಿದ್ಧ ಬಡಾ ಶರಣರು ಸಾಲಿಮಠ, ರಾಘವೇಂದ್ರ ಗುಂಡಾನೋರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶರಣಬಸಪ್ಪ ಮಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಂಕರ ಚೋಕಾ ಕಾಳಗಿ ತಾಲೂಕು ಹಿಂದೂ ಜಾಗೃತಿ ಸೇನೆ ಅಧ್ಯಕ್ಷರು ಸ್ವಾಗತಿಸಿದರು, ಗೌರಿಶಂಕರ್ ಕಿಣಿ ನಿರೂಪಿಸಿದರು, ಮಲ್ಲಿಕಾರ್ಜುನ್ ಚಕ್ಕ್ ಗಸಿ ವಂದಿಸಿದರು.
ಇದಕ್ಕೂ ಮುಂಚೆ ನೂತನ ಶ್ರೀಗಳಿಗೆ ರೇವಗಿ (ರಟಕಲ್ ) ಶ್ರೀ ರೇವಣಸಿದ್ದೇಶ್ವರ ದರ್ಶನ ಆಶೀರ್ವಾದ ಪಡೆದ ಯುವಕರು ಬೈಕ್ ರಾಲಿಯ ಮುಖಾಂತರ ರಟಕಲ್ ಗ್ರಾಮಕ್ಕೆ ಪುರ ಪ್ರವೇಶ ಮಾಡಿಕೊಂಡು ಕುಂಭ ಹಾಗೂ ಕಳಸಗಳ ಮೂಲಕ ಡೊಳ್ಳು ಹಲಿಗೆ ಭಾಜ ಭಜಂತ್ರಿಗಳ ಮೂಲಕ ಪಾದಪೂಜೆಗೆ ಇದು ರಟಕಲ ಗ್ರಾಮದ ಮಠಕ್ಕೆ ಬರಮಾಡಿಕೊಂಡರು.
ರಟಕಲ್ ಭಕ್ತರು ನನ್ನ ಮೇಲೆ ವಿಶ್ವಾಸವಿಟ್ಟು ಮಠಕ್ಕೆ ನಿಯೋಜಿಸಿದ್ದಾರೆ. ಅವರ ಭಕ್ತಿ ಭಾವನೆಗಳಿಗೆ ಧಕ್ಕೆ ಬಾರದಂತೆ ಸೇವೆ ಮುನ್ನಡೆಸಿಕೊಂಡು ಹೋಗುವೆ, ಭಕ್ತರು ನನ್ನನ್ನು ತಮ್ಮ ಮಕ್ಕಳಂತೆ ಕಾಣುತ್ತಾರೆ ಎಂಬ ನಂಬಿಕೆ ನನಗಿದೆ ಪೂಜ್ಯ ಅನ್ನದಾನೇಶ್ವರ
– ( ನೀಲಕಂಠ) ದೇವರು ನಿಯೋಜಿತ ಉತ್ತರಾಧಿಕಾರಿ.

ಗುರುವಿಲ್ಲದ ಮಠ ಹಿರಿಯರಿಲ್ಲದ ಮನೆ ಎಂದಿಗೂ ಇರಬಾರದು ಎಂಬ ನುಡಿ ಮುತ್ತಿನಂತೆ ಅರಿತುಕೊಂಡು ರಟಕಲ ಮುರುಘೇಂದ್ರ ಶಿವಯೋಗಿಗಳ ವಿರಕ್ತ ಮಠಕ್ಕೆಶ್ರೀ ನೀಲಕಂಠ ದೇವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಅಸಂಖ್ಯಾತರ ಭಕ್ತರ ನಡುವೆ ಪುರ ಪ್ರವೇಶ ನಡೆದಿದೆ. ನೂತನ ಶ್ರೀಗಳ ಆಗಮನದಿಂದ ನವ ಚೈತನ್ಯ ಬಂದಿದೆ ಎಂದು ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ಕಾಳಗಿ ಮಾತನಾಡಿದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















