
ಬೆಳಗಾವಿ: ಅಥಣಿ ನಗರದಲ್ಲಿರುವ ಶ್ರೀ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಅಥಣಿ ಗ್ರಾಮೀಣ ಹಾಲು ಉತ್ಪಾದಕರ ಸಹಕಾರಿ ಸಂಘ ಅಥಣಿ ಇವರ ಹಾಲು ತಂಪುಗೊಳಿಸುವ ಯಂತ್ರದ (ಬಿ,ಎಮ್,ಸಿ) ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ಸಸಿಗೆ ನೀರು ಹಾಕುವುದರ ಮೂಲಕ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಶಾಸಕರು ಗ್ರಾಮೀಣ ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬ ಸದುದ್ದೇಶದಿಂದ ಈ ಸಂಘವನ್ನು ಉದ್ಘಾಟಿಸಲಾಗಿದೆ. ಸಂಘಟನೆ ಪ್ರಾರಂಭಿಸುವುದು ಸುಲಭ, ಆದರೆ ಅದನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸ ಸಂಘವು ಪ್ರಗತಿ ಸಾಧಿಸಬೇಕಾದರೆ ಸಂಘಟಿಕರ ಪರಿಶ್ರಮ ಪ್ರಾಮಾಣಿಕತೆ ಮತ್ತು ದೂರ ದೃಷ್ಟಿ ಮುಖ್ಯ ಎಂದು ಶಾಸಕರಾದ ಲಕ್ಷ್ಮಣ ಸವದಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ,ಮ,ನಿ,ಪ್ರ, ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಶ್ರೀ ರಾಜು ಹಳ್ಳದಮಳ ಅಧ್ಯಕ್ಷರು ಗ್ರಾಮೀಣ ಹಾಲು ಉತ್ಪಾದಕರ ಸಂಘ, ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಸದಾಶಿವ ಬುಟಾಳಿ, ಶ್ರೀ ಮಹಾದೇವ ಬಿಳಿಕುರಿ ನಿರ್ದೇಶಕರು ಕೆ,ಎಂ,ಎಫ್, ಹಿರಿಯ ಮುಖಂಡರಾದ ಶ್ರೀ ಮಹಾದೇವ ಹಳ್ಳದಮಳ, ಶ್ರೀ ಶಿವಾನಂದ ದಿವಾನಮಳ, ಶ್ರೀ ಮಲ್ಲಿಕಾರ್ಜುನ ಗೋಟಖಿಂಡಿ, ಶ್ರೀ ಶ್ರೀಶೈಲ ನಾಯಿಕ, ಶ್ರೀ ಅಭಯ ಪಾಟೀಲ ನಿರ್ದೇಶಕರು ಗ್ರಾಮೀಣ ಹಾಲು ಉತ್ಪಾದಕರ ಸಂಘ,ಶ್ರೀ ಡಾ|| ವಿ, ಎನ್,ಶ್ರೀಕಾಂತ ಎಂ, ಡಿ, ಕೆ, ಎಂ,ಎಫ್ ಬೆಳಗಾವಿ, ಮುಖಂಡರಾದ ಸುರೇಶ ಆಲಬಾಳ, ಸಂಕೋನಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಆಕಾಶ ಬುಟಾಳಿ, ಆನಂದ ಲಗಳಿ ಹಾಗೂ ಶಿವಯೋಗಿ ನಗರದ ಹಿರಿಯ ಮುಖಂಡರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.
ವರದಿ ವಿಠ್ಠಲ ಖೋಕಾಟೆ, ಅಥಣಿ.



















