
ಕಲಬುರಗಿ/ಚಿಂಚೋಳಿ :ಯಾವೂರ ಹುಲಿ , ಬಿಜಾಪುರ ಹುಲಿ, ಚಿಂಚೋಳಿಗ್ಯಾಕೆ ಬಂತು, ಚಿಂಚೋಳಿ ಸಕ್ಕರಿ ಫ್ಯಾಕ್ಟರಿ ಬಂದ್ ಆಗಿತ್ತು,
ಚಾಲೂ ಮಾಡಿ ರೈತರ ಸಹಾಯಕ ನಿಂತಿತು.
ಮತ್ತೆ ದವಾಖಾನೆ, ಹೋಟೆಲ್, ಶಾಲಾ ಕಾಲೇಜು, ಬಟ್ಟೆ ಅಂಗಡಿ, ಕೃಷಿ ಕೇಂದ್ರ ಹೀಗೆ ಪೆಟ್ರೋಲ್ ಬಂಕ್, ಹಲವಾರು ರೈತನ ಮಕ್ಕಳಿಗೆ ಉದ್ಯೋಗ ಕೊಟ್ಟಿತ್ತು. ಚಿಂಚೋಳಿ ಹಿಂದುಳಿದ ತಾಲೂಕಿನ ಹಣೆಪಟ್ಟೆ ತೆಗೆಯುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಮುಂದೆ ನಾವೇನು ಮಾಡಬೇಕು ತಾಲೂಕಿನ ರೈತರು ಕಬ್ಬು, ಮೆಕ್ಕೆಜೋಳ ಬೆಳೆದು ಕಾರ್ಖಾನೆಗೆ ಕೊಟ್ಟು ಕಾರ್ಖಾನೆಯ ಋಣ ಮತ್ತು ಮಾಲೀಕನಿಗೆ ( ಐದು ವರ್ಷಕ್ಕೆ ಒಮ್ಮೆ ಬರೋದು ಚುನಾವಣೆ, ವೋಟು ಕೊಟ್ಟು ಅವರ ಋಣ ತೀರಿಸಬೇಕು.) ಇದು ನಾವು ರೈತರ ಮಾಡುವ ಕೆಲಸ. ತಾಲೂಕಿನವರಾದ ನಾವು ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ಚಿಂಚೋಳಿ ತಾಲೂಕಿನವರಾದ ನಾವು ನಾವು ಮುಂದೆ ಬರಲು ಸಾಧ್ಯ. ಇದನ್ನೆಲ್ಲಾ ಮಾಡದೆ ಹೋದಲ್ಲಿ ನಾವು ದುಡಿಯುವವರೂ ದುಡಿಯುತ್ತಲೇ ಇರಬೇಕಾಗುತ್ತದೆ. ನಿಧಾನವಾಗಿ ಯೋಚಿಸಿ… ನೋಡಿ. ಸೂರ್ಯ ಚಂದ್ರ ನಿತ್ಯ ಬರುವುದು ಎಷ್ಟು ಸತ್ಯವೋ, ಎರಡು ಮೂರು ವರ್ಷದಲ್ಲಿ ಚಿಂಚೋಳಿ ರೈತರ ಮತ್ತು ತಾಲೂಕಿನ ಚಿತ್ರಣ ಬದಲಾಗುವುದು ಅಷ್ಟೇ ಸತ್ಯ, ನಮಸ್ಕಾರ, ಜೈ ಅನ್ನದಾತ ಎನ್ನುತ್ತಾರೆ ರೈತ ಮುಖಂಡರಾದ ವೀರಣ್ಣ ಗಂಗಾಣಿಯವರು.
ವರದಿ ಎಸ್. ವಿ. ಗಂಗಾಣಿ



















