ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಂಡೋಣಿಯಿಂದ ಉಡುಪಿಗೆ ಪಾದಯಾತ್ರೆ ಹೊರಟಿರುವ ಬೆಂಡೋಣಿ ಗ್ರಾಮದ ಮಂಜುಳ ನಗಿಮುಖ.

ಬಾಗಲಕೋಟೆ: ಲಿಂಗಸುಗೂರು ತಾಲೂಕು ಬೆಂಡೋಣಿ ಗ್ರಾಮದ ಮಹಿಳೆ ಮಂಜುಳ ನಗಿಮುಖ ಹಲವಾರು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ನೇರವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ನೇರವಾಗಿ ಮಾತನಾಡಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ತಮ್ಮ ಗ್ರಾಮ ಬೆಂಡೋಣಿಯಿಂದ ಕಂದಗಲ್ಲ ಕುಷ್ಟಗಿ ಮಾರ್ಗವಾಗಿ ಉಡುಪಿ ತಲುಪಿ ಅಲ್ಲಿ ಶ್ರೀ ಕ್ರಷ್ಣಮಂದಿರದ ದೇವಾಲಯದ ಆವರಣದಲ್ಲಿ ಮೋದಿಜಿಯವರನ್ನು ಭೇಟಿಯಾಗಲೆಂದು ಅಂದಾಜು 462 ಕಿ ಮೀ ನಡೆಯುತ್ತಿದ್ದಾಳೆ.
ಅತ್ಯಾಚಾರಿಗಳಿಂದ ಮತ್ತು ಲವ್ ಜಿಹಾದದಿಂದ್ ಮುಕ್ತಿ, ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿ, ಹಾಗೂ ಸ್ಪೋಕನ್ ಇಂಗ್ಲೀಷ್ ಗೆ ಆದ್ಯತೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಪ್ರಧಾನ ಮಂತ್ರಿಗಳು ಶಕ್ತಿಯಾಗಿ ನಿಲ್ಲಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಪಾದಯಾತ್ರೆ ಕೈಗೊಂಡಿರುವ ಈ ಮಹಿಳೆಯ ಸಾಹಸ ಮೆಚ್ಚುವಂತಹದು.
ಜಿಲ್ಲೆಯ ಇಲಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಈ ಮಹಿಳೆ ಪಾದಯಾತ್ರೆ ಹೋಗುವುದನ್ನು ಕಂಡ ಗ್ರಾಮದ ಹಿತಚಿಂತಕ ಸಂಗಣ್ಣ ಹವಾಲ್ದಾರ್ ಈ ಮಹಿಳೆಯ ಕೆಲಸ ಮೆಚ್ಚಿ ತಮ್ಮ ಸಂಸ್ಥೆ ವಿಶ್ವ ಚೇತನ ಪಬ್ಲಿಕ್ ಶಾಲೆಯ ಗುರುಮಹಾಂತ ರಂಗಮಂದಿರದಲ್ಲಿ ಸನ್ಮಾನಿಸಿ ಧೈರ್ಯ ತುಂಬಿ ಬೀಳ್ಕೊಟ್ಟರು. ಶಾಲೆಯ ಎಲ್ಲಾ ಗುರುಗಳು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!