ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತೀರ್ಥಳ್ಳಿಯ ಸುಪ್ರಸಿದ್ದ ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಯೋಗ ಮತ್ತು ಧ್ಯಾನ

ಶಿವಮೊಗ್ಗ/ ತೀರ್ಥಹಳ್ಳಿ :ದಿ. 23/11/2025 ರ ಮುಂಜಾನೆ 5.15 ಕ್ಕೆ ಚುಮು ಚುಮು ಚಳಿಯಲ್ಲಿ ಬೆಟ್ಟ ಏರಿ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ನ ಸುಮಾರು 200 ಯೋಗ ಬಂಧುಗಳಿಂದ ಯೋಗ ಹಾಗೂ 20 ನಿಮಿಷಗಳ ಕಾಲ ಧ್ಯಾನ ನೆರವೇರಿತು.

ಧ್ಯಾನದ ಬಗ್ಗೆ ಬೆಂಗಳೂರಿನಿಂದ ಆಗಮಿಸಿದ ಹಾರ್ಟ್ ಫುಲ್ ನೆಸ್ ಸಂಸ್ಥೆಯಿಂದ ಆಗಮಿಸಿದ ನಿಮ್ಹಾನ್ಸ್ ನ ಖ್ಯಾತ ಮನಃಶಾಸ್ತ್ರಜ್ಞರಾದ ಡಾ|| ರಘು ಕೃಷ್ಣಮೂರ್ತಿ ಯವರು ವಿಶೇಷ ಧ್ಯಾನ ತರಗತಿಯನ್ನು ನಡೆಸಿಕೊಟ್ಟರು, ಅವರು ಮಾತನಾಡಿ ಯೋಗದ ಜೊತೆಗೆ ಧ್ಯಾನವನ್ನು ಹೇಗೆ ಮಾಡಬೇಕೆಂದು ತಿಳಿಸಿದರು ಹಾಗೂ ಅದರಿಂದ ಅಗುವ ಉಪಯೋಗಗಳನ್ನು ತಿಳಿಸಿದರು, ಅವರು ಸುಮಾರು 180 ದೇಶಗಳಲ್ಲಿ ಧ್ಯಾನದ ಬಗ್ಗೆ ಗೊತ್ತಿಲ್ಲದವರಿಗೆ ಅದರಿಂದ ಅಗುವ ಉಪಯೋಗಗಳನ್ನು ತಿಳಿಸಿದ್ದಾರೆ, ಯೋಗ ಮತ್ತು ಧ್ಯಾನ ಯಾವ ಜಾತಿ ಧರ್ಮಕ್ಕೆ ಸೇರಿದ್ದಲ್ಲ, ಅದು ಯಾವ ದೈವಿಕ ಪದ್ಧತಿ ಅಲ್ಲ, ಯೋಗ ಮತ್ತು ಧ್ಯಾನ ನಮ್ಮ ದೇಹದಲ್ಲಿ ಯಾವುದೇ ಔಷಧಿ ಇಲ್ಲದೆ ಅನೇಕ ಆರೋಗ್ಯ ಬದಲಾವಣೆಯನ್ನು ಕಾಣಬಹುದು ಎಂದು ತಿಳಿಸಿದರು. ಯೋಗ ಮತ್ತು ಧ್ಯಾನದಿಂದ ಆಗುವ ಆರೋಗ್ಯದ ಬದಲಾವಣೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಯೋಗ ಮತ್ತು ಧ್ಯಾನ ಒಂದು ಅವಿಭಾಜ್ಯ ಅಂಗ ಹಾಗೂ ಧ್ಯಾನವನ್ನು ಹೇಗೆ ಮಾಡಬೇಕೆಂದು ಸರಳವಾಗಿ ತಿಳಿಸಿ
ಧ್ಯಾನ ಮಾಡುವಾಗ ನಮ್ಮ ಮನಸ್ಸನ್ನು ಹೇಗೆ ಕೇಂದ್ರೀಕೃತ ಮಾಡಿಸಬೇಕೆಂದು ಸರಳವಾಗಿ ತಿಳಿಸಿಕೊಟ್ಟರು.

ದಿನಾಂಕ 24.11. 2025 ರಂದು ಮುಂಜಾನೆ ಸುಮಾರು 5.45ಕ್ಕೆ ಬಾಳೆಬೈಲಿನ ತುಂಗಾ ನದಿಯ ದಡದಲ್ಲಿರುವ ಸುಂದರ ಉದ್ಯಾನವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ಯೋಗ ಬಂಧುಗಳಿಂದ ಯೋಗ ಮತ್ತು ಧ್ಯಾನ ಕಾರ್ಯಕ್ರಮ ನಡೆಯಿತು, ಬೆಂಗಳೂರಿನ ಪ್ರತಿಷ್ಠಿತ ಸ್ಯಾನ್ ಸುಯಿ ಸಾಫ್ಟ್ ವೇರ್ ಕಂಪನಿಯ ಮಾಲೀಕರಾದ ಅವರು ಧ್ಯಾನ ಮಾಡುವಾಗ ಮನಸ್ಸನ್ನು ಹೇಗೆ ಕೇಂದ್ರೀಕರಿಸಬೇಕೆಂದು ಸರಳವಾಗಿ ತಿಳಿಸಿಕೊಟ್ಟರು, ಅದರ ಜೊತೆಗೆ ಸುಮಾರು 20 ನಿಮಿಷ ಧ್ಯಾನವನ್ನು ಮಾಡಿಸಿ ಅದರ ಅನುಭವವನ್ನು ಯೋಗ ಬಂಧುಗಳಿಂದ ಕೇಳಿ ತಿಳಿದುಕೊಂಡರು.

ದಿನಾಂಕ 25.11.2025 ರಂದು ಪ್ರೇರಣಾ ಟ್ರಸ್ಟಿನ ಯೋಗ ಬಂಧುಗಳಿಂದ ಮತ್ತೆ ಯೋಗ ಹಾಗೂ ಧ್ಯಾನ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಎನ್ ಎಸ್ ನಾಗರಾಜ್ ಸೆನ್ ಸುಯಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಾಫ್ಟ್ ವೇರ್ ಕಂಪನಿಯ ಮಾಲೀಕರು 15 ವರ್ಷಗಳ ಕಾಲ ಇನ್ಫೋಸಿಸ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದವರು .
ಮೂಲತಃ ಹರಿಹರದವರು , ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ .
ಹಾರ್ಟ್ ಫುಲ್ ನೆಸ್ ಸಂಸ್ಥೆಯಲ್ಲಿ ತರಬೇತುದಾರರು ಮತ್ತು ಬ್ರೈಟರ್ ಮೈಂಡ್ಸ್ ನಿರ್ದೇಶಕರು ಅಷ್ಟಾಂಗ ಯೋಗ , ರಾಜಯೋಗ , ಧ್ಯಾನ ಮತ್ತು ಉಪನಿಷತ್ ಬಗ್ಗೆ ಅಪಾರ ಜ್ಞಾನ ಹೊಂದಿರುವವರು ಬೆಂಗಳೂರಿನ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಟ್ರಸ್ಟಿನ ಉಪಾಧ್ಯಕ್ಷರಾದ ಭಾಗ್ಯ ಐತಾಳ್, ಕಾರ್ಯದರ್ಶಿ ಪ್ರಕಾಶ್ ಟಿ ವಿ ಸೇರಿದಂತೆ ಇನ್ನೂ ಅನೇಕ ಹಿರಿಯ ಯೋಗ ಬಂಧುಗಳು ಭಾಗವಹಿಸಿದ್ದರು.

ಭಾರತೀಯ ಯೋಗ ಟ್ರಸ್ಟ್ ನಿಂದ ನಡೆಯುವ ಯೋಗ ಸಂಪೂರ್ಣ ಉಚಿತವಾಗಿರುತ್ತದೆ ಹಾಗೂ ಯಾವುದೇ ವಯಸ್ಸಿನ ಮಿತಿ ಇಲ್ಲವಾಗಿರುತ್ತದೆ ಮತ್ತು ಯಾವುದೇ ಜಾತಿ ಧರ್ಮ ಎಂಬ ಭೇದ ಭಾವ ಇರುವುದಿಲ್ಲ, ಈ ಸಂಸ್ಥೆಯ ಧ್ಯೇಯ ಒಂದೇ ಯೋಗದಿಂದ ಎಲ್ಲರೂ ಆರೋಗ್ಯವಂತರಾಗಿರಬೇಕು ಎಂಬುದು, ಈ ಸಂಸ್ಥೆಯಿಂದ ಪ್ರತಿ ದಿನ ಮುಂಜಾನೆ 5:45 ರಿಂದ 7. 45 ರವರೆಗೆ ಉಚಿತವಾಗಿ ಯೋಗ ಹೇಳಿಕೊಡುತ್ತಾರೆ, ಯೋಗ ನಡೆಯುವ ಕೇಂದ್ರಗಳು ಪ್ರೇರಣಾ ಟ್ರಸ್ಟ್ ತೀರ್ಥಹಳ್ಳಿ, ಕುಶಾವತಿ ಆಂಜನೇಯ ಸ್ವಾಮಿ ದೇವಸ್ಥಾನ, ಸೊಪ್ಪುಗುಡ್ಡೆಯ ಸೇವಾ ಭಾರತಿ ಸ್ಕೂಲ್, ಬಾಳೆಬೈಲಿನ ವೆಂಕಟರಮಣ ಸ್ವಾಮಿ ದೇವಸ್ಥಾನ ಹಾಗೂ ಶಿವರಾಜ್ಪುರದಲ್ಲಿ ನಡೆಯುತ್ತದೆ, ತೀರ್ಥಹಳ್ಳಿಯ ಜನತೆ ಯೋಗದ ಜೊತೆಗೆ ಆರೋಗ್ಯವನ್ನು ಪಡೆಯಬೇಕು.

ವರದಿ : ಪ್ರಸಾದ್ ಹೆಚ್. ಬಿ, ತೀರ್ಥಹಳ್ಳಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!