ಬಳ್ಳಾರಿ / ಕಂಪ್ಲಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಡಿ.7ರ ಭಾನುವಾರದಂದು ಬಳ್ಳಾರಿಯಲ್ಲಿ ನಡೆಯುವ ಚುನಾವಣೆ ಹಿನ್ನಲೆ ಕಂಪ್ಲಿಯ ಜೆಸ್ಕಾಂ ಕಚೇರಿಯಲ್ಲಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳಲ್ಲಿ ಮತ ನೀಡುವಂತೆ ಅಭ್ಯರ್ಥಿಗಳು ಗುರುವಾರ ಮತ ಯಾಚಿಸಿದರು.
ಅಭ್ಯರ್ಥಿ ಸುಕುಮಾರ ನೇತೃತ್ವದಲ್ಲಿ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾದ ಎಸ್.ತಿಪ್ಪೇಸ್ವಾಮಿ, ಸಿ.ಪಿ.ರಾಜಣ್ಣ, ವಿ.ಗಂಗಾಧರ ನಾಯ್ಕ, ಹೆಚ್.ಬಸವರಾಜ, ಕೆ.ಯಲ್ಲಪ್ಪ, ರುದ್ರಪ್ಪ, ಕೆ.ಎಂ.ವಿರೇಶ ಮತ ಕೋರಿದರು.
ನಂತರ ಸುಕುಮಾರ ಮಾತನಾಡಿ, ಇದೇ 7ರಂದು ಸಂಘಕ್ಕೆ ಚುನಾವಣೆ ನಡೆಯಲಿದ್ದು, ಮತದಾರರು ಮತ ನೀಡಿ, ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಂಪ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ಡಿ.ಶ್ರೀನಿವಾಸ, ಕಾರ್ಯದರ್ಶಿ ಎನ್.ಉಮೇಶ, ಸದಸ್ಯರಾದ ಕೆ.ನಾಗರಾಜ, ಎನ್.ವೆಂಕಟಚಲಮ್, ಬಿ.ಹೊನ್ನೂರಸ್ವಾಮಿ, ದೊಡ್ಡಬಸಪ್ಪ, ಹಿರಿಯರಾದ ಸಿ.ರಾಜಣ್ಣ, ಕೆ.ಬಸಪ್ಪ ಸೇರಿದಂತೆ ನೌಕರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















