ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹುಬ್ಬಳ್ಳಿ ಯುವತಿಯ ಕೊಲೆ ಖಂಡಿಸಿ ಮಾದಿಗ ಸಮುದಾಯದವರಿಂದ ಮೌನ ಪ್ರತಿಭಟನೆ

ಬೀದರ/ಬಸವಕಲ್ಯಾಣ : ನಗರದಲ್ಲಿಂದು ಗಾಂಧಿ ಚೌಕದಿಂದ ಅಂಬೇಡ್ಕರ ಚೌಕ ವರಗೆ ಮಾದಿಗ ಸಮುದಾಯವರಿಂದ ಮೌನ ಪ್ರತಿಭಟನೆ ಮಾಡಲಾಯಿತು. ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಿನಾಂಕ : 21-012-2025 ರಂದು ತನ್ನ ಸ್ವಂತ ಮಗಳಾದ ಮಾನ್ಯಳನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ, ಮಾದಿಗ ಜನಾಂಗದ ಯುವಕ ವಿವೇಕಾನಂದನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕಾಶ ಗೌಡನ ಕುಟುಂಬಸ್ಥರ ಹೇಯ ಕೃತ್ಯವನ್ನು ಅತ್ಯಂತ ಉಘ್ರವಾಗಿ ಖಂಡಿಸುತ್ತೇವೆ, ಮಾದಿಗ ಜನಾಂಗದ ಯುವಕ ವಿವೇಕಾನಂದ ಲಿಂಗಾಯತ ಜಾತಿಯ ಯುವತಿ ಮಾನ್ಯಳನ್ನು ಪ್ರೀತಿಸಿ ಮುದವೆ ಆಗಿರುವುದನ್ನು ಸಹಿಸದ ಖಟುಕರು ತನ್ನ ಒಡ ಹುಟ್ಟಿದ ಮಗಳು ತುಂಬು ಗರ್ಭೀಣಿಯಾಗಿದ್ದರು. ಕರುಣೆ ತೋರದೆ, ನಡು ರಸ್ತೆಯಲ್ಲಿ ಕೊಚ್ಚಿ ಕೊಲೆಗೈದಿದ್ದಾರೆ. ಈ ಕೃತ್ಯ ಮಾನವ ಕುಲ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಬಸವಣ್ಣನ ಅನೂಯಾಯಿಗಳೆಂದು ಜಂಬ ಕೊಚ್ಚಿ ಕೊಳ್ಳುವ ಈ ಜನಾಂಗ ಬಸವಾದಿ ಶರಣರ ಆಶೆಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವದು ಖಂಡನಿಯವಾಗಿದೆ ಹೇಯ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ಮಾರಣಾಂತಿಕ ಹಲ್ಲೆಗೊಳಗಾಗಿರುವ ನೊಂದ ವಿವೇಕನಂದನ ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಹಾಗೂ ಹಲ್ಲೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ಖರ್ಚು ಸರ್ಕಾರವೆ ಭರಿಸಬೇಕು.
ಗ್ರಾಮದಲ್ಲಿರುವ ಆಸ್ಪಶರ ಕುಟಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು.
15 ದಿವಸಗಳಿಗೊಮ್ಮೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಬಸವಕಲ್ಯಾಣ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ದತ್ತು ಎಲ್ ಬೆಂಡೆ ತಾಲೂಕ ಅಧ್ಯಕ್ಷರು ಅ.ಕ. ಆದಿಜಾಂಭವ ಸಂಘ (ರಿ.) ಬಸವಕಲ್ಯಾಣ, ಯುವರಾಜ ಬೆಂಡೆ ಜಿಲ್ಲಾ ಉಪಾಧ್ಯಾಕ್ಷರು ಅ.ಕ. ಆದಿಜಾಂಭವ ಸಂಘ (ರಿ.) ಬಸವಕಲ್ಯಾಣ , ರಮೇಶ ಜಿ. ಉಮಾಪುರೆ ತಾಲೂಕ ಗೌರವ ಅಧ್ಯಕ್ಷರು ಅ.ಕ. ಆದಿಜಾಂಭವ ಸಂಘ (ರಿ.) ಬಸವಕಲ್ಯಾಣ
ಪಿಂಟು ಕಾಂಬಳೆ DSS ಪ್ರೋ. ಬಿ ಕೃಷ್ಣಪ್ಪಾ ಸ್ಥಾಪಿತ ತಾಲೂಕ ಅಧ್ಯಕ್ಷರು ಬಸವಕಲ್ಯಾಣ, ವಾಮನ ಮೈಸಲಗೆ KSDSS ತಾಲೂಕ ಸಂಚಾಲಕರು ಬಸವಕಲ್ಯಾಣ, ಸಿಂಕದರ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬ.ಕಲ್ಯಾಣ, ಮಹಾದೇವ ಗಾಯಕವಾಡ DSS ಅಂಬೇಡ್ಕರವಾದಿ ಅಧ್ಯಕ್ಷರು ಬಸವಕಲ್ಯಾಣ , ಚೇತನ ಕಾಡೆ ಭೀಮ ಆರ್ಮಿ ಅಧ್ಯಕ್ಷರು ಬಸವಕಲ್ಯಾಣ
ಸುರೇಶ ಎಂ ಜಮ್ಮು ತಾಲೂಕ ಉಪಾಧ್ಯಕ್ಷರು ಅ.ಕ. ಆದಿಜಾಂಭವ ಸಂಘ(ರಿ.) ಬಸವಕಲ್ಯಾಣ , ದತ್ತು ಧುರೆ ಪ್ರ. ಕಾರ್ಯದರ್ಶಿ ಅ.ಕ. ಆದಿಜಾಂಭವ ಸಂಘ(ರಿ.) ಬಸವಕಲ್ಯಾಣ , ಕೃಷ್ಣ ಗಾಯಕವಾಡ ಉಪಾಧ್ಯಕ್ಷರು ಅ.ಕ. ಆದಿಜಾಂಭವ ಸಂಘ(ರಿ.) ಬಸವಕಲ್ಯಾಣ , ನಾಗರಾಜ ವರ್ಮಾ ಸಮಾಜದ ಯುವ ಮುಖಂಡರು ಬಸವಕಲ್ಯಾಣ ಹಾಗೂ ಸಮಾಜದ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!