ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಗಳಲ್ಲ ಮಗ ಎಂದ ನನ್ನಪ್ಪ

ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿ
ಬಂಗಾರದ ಮೋಹ ನನಗಿಲ್ಲ ಅಪ್ಪ
ಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು

ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ ಯಾರಲ್ಲೂ ಭಿನ್ನ ಭೇದ ಮಾಡದೆ ಸಮಾನತೆ ಕಾಣುವಂತೆ ಮಾಡಿದರು

‘ಹಣ’ ಅದೊಂದು ಬಣ್ಣದ ಹಾಳೆ ಅಷ್ಟೇ
ಅದಕ್ಕೆ ಆಸೆ ಪಡಬೇಡ
ಧಾರ್ಮಿಕ ಬೆಳವಣಿಗೆಗೆ ಭಕ್ತಿ, ಕರುಣೆ ಭೌತಿಕವಾಗಿ ಹೆಣ್ಣು ಮಕ್ಕಳಿಗೆ ತುಂಬಾ ಅವಶ್ಯಕ ಎನ್ನುತ್ತಿದ್ದರು

ಬದುಕುವ ಆದರ್ಶವಾಗಿರಬೇಕು
ನೀ ಆದರ್ಶ ವಿದ್ಯಾರ್ಥಿನಿಯಾಗಿ ಕಾಯಕದಲ್ಲಿ ನಿಷ್ಠಾವಂತಳಾಗಿ ಹಿರಿಯರಿಗೆ ಗೌರವಯುತವಾಗಿ ಸಮಾಜದ ಒಳಿತು ಕೆಡಕುಗಳಿಗೆ ಉತ್ತರವಾಗಿ ಮನೆಗೆ ಜವಾಬ್ದಾರಿಯ ಮಗಳಾಗಿ ನಮ್ಮೆಲ್ಲರ ಪ್ರೀತಿಗೆ ಬದಲಾಗು ಮಗು ಎಂದರು

ನಾನು ನನ್ನ ತಂದೆ ಜೊತೆಗೆ ಹೊರಗೆ ಹೋಗುವಾಗ ನೋಡಿದವರೆಲ್ಲಾ
ನಿಮ್ಮ ಮಗಳ ನಡತೆ ಗುಣ ಸರಳತೆ ಎಲ್ಲಾ ನಿಮ್ಮ ಹಾಗೆಯೇ ಇದೆ ಎಂದಾಗ ನನ್ನ ತಂದೆ ನನ್ನ ಕಡೆಗೆ ಹೆಮ್ಮೆಯಿಂದ ನೋಡುತ್ತಾ ಹೌದು ಇವಳು ನನಗೆ ಮಗಳಲ್ಲ ಮಗ ಎನ್ನುತ್ತಿದ್ದರು

ಪುಸ್ತಕ ಓದುವ ಗೀಳು ಹತ್ತಿಸಿದ್ದು ಅಪ್ಪನೇ ಶನಿವಾರ ಭಾನುವಾರ ಬಂತೆಂದರೆ, ಮಗಳೇ ಬಾ ಇಲ್ಲಿ ಎಂದು ಕೂರಿಸಿ ತಾವು ಬರೆದ ಬರವಣಿಗೆ ಕವಿತೆ ಕವನಗಳ ಮತ್ತು ಓದಿದ ಪುಸ್ತಕಗಳ ಬಗ್ಗೆ ಹೇಳುತ್ತಿದ್ದರು

ನಾನು ಆಗ ತಾನೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ ಒಂದು ವಾರ ಸಂತರ ಬಗ್ಗೆ, ಮತ್ತೊಮ್ಮೆ ಸ್ವತಂತ್ರ ವೀರರ ಬಗ್ಗೆ ರಾಜಕೀಯದ ಬಗ್ಗೆ ದೇಶದ ಮುನ್ನಡೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು ಪಠ್ಯದ ಬಗ್ಗೆ ಕೇಳಿದರೆ ಅವೆಲ್ಲ ನೀನೇ ಓದಿಕೋ ಮುಂದೆ ಕಾಲೇಜಿಗೆ ಬಂದಾಗ ನಾ ಹೇಳಿಕೊಡುತ್ತೇನೆ ಅಂತಿದ್ರು

ನಾ ನನ್ನ ಪಠ್ಯವನ್ನು ಓದಿಕೊಂಡು ನನ್ನ ತಮ್ಮನಿಗೆ ಪಾಠ ಹೇಳಿಕೊಡುತ್ತಿದ್ದೆ ಕಥೆ ಕಾದಂಬರಿಗಳ ಬಗ್ಗೆ ಅಷ್ಟೇ ಅಲ್ಲದೆ ಸಸ್ಯಗಳ ಬಗ್ಗೆ ಪರಿಸರದ ಬಗ್ಗೆ ಸರಳ ಜೀವನದ ಪಾಠ ಹೇಳುತ್ತಾ
ವರ್ಷಕ್ಕೆ ಎರಡು ಬಾರಿ ಮಾತ್ರ ಎಲ್ಲರಿಗೂ ಹೊಸ ಬಟ್ಟೆ ಕೊಡಿಸುವ ಅಪ್ಪ ನನಗೆ ಮಾತ್ರ ಕೇಳಿದಗ ಎಲ್ಲಾ ಕೈಗ ಕಾಸು ಕೊಟ್ಟು ಇಷ್ಟ ಬಂದಿದ್ದು ತಗೊಂಡು ಬಾ ಅಂದರು

ಪ್ರತಿ ತಿಂಗಳು ಬಜೆಟ್ ಮಾಡುವುದು ರೇಷನ್ ತರಲು ಕರ್ಕೊಂಡು ಹೋಗುವುದು, ಉಳಿತಾಯ ಮಾಡುವುದು ಹೇಳಿಕೊಡುತ್ತಿದ್ದರು
ಅವರ ಅನಾರೋಗ್ಯ ಸಮಯದಲ್ಲಿ ಎಲ್ಲಾ ಮನೆ ಜವಾಬ್ದಾರಿ ನನ್ನ ಹೆಗಲಿಗೆ ಒಂದೊಂದೇ ಏರಿಸಿದರು ಕಾಲೇಜಿನಲ್ಲಿ ಓದುವುದರೊಂದಿಗೆ ಮನೆ ನಿಭಾಯಿಸುವುದನ್ನು ಕಲಿಸಿದರು ಅವರು ಕೊಡುವ ಒಂದೊಂದು ಪೈಸೆಗೂ ಲೆಕ್ಕ ಬೇಕಿತ್ತು ಎಲ್ಲವನ್ನೂ ಬರೆದಿಡಬೇಕಿತ್ತು

ಅಮ್ಮನಿಗೆ ಕೊನೆಯ ಮಗುವಿಗೆ ಹೊಟ್ಟೆ ಜಾರಿತು
ಆ ಸಂದರ್ಭದಲ್ಲಿ ಅಮ್ಮ ತುಂಬಾ ನೋವಿನಲ್ಲಿ ಇದ್ದಾಗ ಅಪ್ಪ ಅಮ್ಮನನ್ನು ಮಗುವಿನ ತರ ನೋಡಿಕೊಂಡು ನಮ್ಮೆಲ್ಲರಿಗೂ ಅಡುಗೆ ಮಾಡಿ ಊಟ ಬಡಿಸುತ್ತಿದ್ದರು

ಅವರು ಪುಸ್ತಕ ಪ್ರೇಮಿ ಆಗಿದ್ದರು ನಾವು ಎಲ್ಲರೂ ಮಲಗಿದರೂ ಕೈಯಲ್ಲಿ ಪುಸ್ತಕ ಇಲ್ಲದೆ ತಂದೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ

ಊಟ ಮಾಡುವಾಗ, ಮಲಗುವಾಗಲೂ ಯಾವಾಗ ನೋಡಿದರೂ ಪುಸ್ತಕ ಓದುತ್ತಿದ್ದರು ಅವರು ಊಟಕ್ಕೆ ಕುಳಿತಾಗಲೆಲ್ಲಾ ಪತ್ರಿಕೆ ಇಲ್ಲವೇ ಪುಸ್ತಕ ಕೈಯಲ್ಲಿರುತ್ತಿತ್ತು ಮತ್ತು ಹೊರಗಡೆ ಹೋದಾಗ ಕೂಡ ಬಿಳಿ ಕಾಗದ ಬಿದ್ದಿದ್ದು ಕಂಡರೆ ಎತ್ತಿಕೊಂಡು ಏನಾದರೂ ಗೀಚಿ ಜೇಬಲ್ಲಿ ಇಟ್ಟುಕೊಂಡು ಬರುವರು
ಕಾಸು ತೆಗೆದುಕೊಳ್ಳಲು ಹೋದಾಗ ನಮ್ಮ ಕೈಗೆ ಗಿಟುಕುವವು ನಾನು ಅವಗ ಏನದು ನಿನ್ನ ಹುಚ್ಚು ಹೆಚ್ಚಾಗಿದೆ ಬರವಣಿಗೆಯ ಮೇಲೆ ಎಂದು ಹೇಳಿ ಗೇಲಿ ಮಾಡುತ್ತಾ ಇದ್ದೆ ಅಪ್ಪ ನನಗೆ ಒಬ್ಬ ಒಳ್ಳೆಯ ಸ್ನೇಹಿತರು ಆಗಿದ್ದರು ಅಷ್ಟೇ ಅಲ್ಲದೆ ನಿದ್ದೆ ಬರುವವರೆಗೂ ಓದಿ ತಮ್ಮ ತಲೆಯ ದಿಂಬಿನ ಬಳಿ ಪುಸ್ತಕ ತೆರೆದಿರುವಂತೆ ಮಲಗಿ ನಿದ್ದೆ ಹೋಗಿರುತ್ತಿದ್ದರು
ಅವರು ಮಾಡಿದ ಆಸ್ತಿ ಎಂದರೆ ಪುಸ್ತಕಗಳು

ಅಪ್ಪ ವಿದ್ಯಾರ್ಥಿ ದೆಸೆಯಿಂದಲೇ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಒಬ್ಬ ಆದರ್ಶ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಬದುಕಿಗೆ ಪ್ರತಿನಿಧಿಯಾಗಿ ಹಲವಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣೀಭೂತರಾದವರು

ಎಷ್ಟೋ ಬಡ ದಲಿತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತನು ಮನ ಧನ ಸಹಾಯವನ್ನು ಮಾಡಿದವರು

ಕನ್ನಡ ಉಳಿಸಲು ಬೆಳೆಸಲು ಅವರಿಗೆ ಎಲ್ಲಿಲ್ಲದ ಹುಚ್ಚು ಹಲವಾರು ಕಥೆಗಳು ಕವನಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದರು. ಇವರು ಒಬ್ಬ ಶ್ರೇಷ್ಠ ಕವಿ ಸಾಹಿತಿ ಬರಹಗಾರರು ಲೇಖನಕಾರರು ಆಗಿದ್ದರು.

ನನ್ನ ತಂದೆ ಬಡ ಕುಟುಂಬದಿಂದಲೇ ಬಂದ ಕಾರಣ ಸುತ್ತ ಮುತ್ತಲಿನ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು ಆದ್ದರಿಂದ ನನಗೂ ಶಿಕ್ಷಣದ ಹರಿವು ಮೂಡಿಸುತ್ತಾ ಶಿಕ್ಷಣದ ಪದವಿ ಮುಗಿಸು ಎಂದು ಹೇಳುತ್ತಿದ್ದರು

ನನ್ನ ತಂದೆಗೆ ಯಾವುದರ ಬಗೆಗೂ ಯಾರ ಬಗೆಗೂ ಭಯ ಇರಲಿಲ್ಲ ಒಂದು ದಿನ ಶಾಲೆಯಿಂದ ಬಂದು ಓದುತ್ತಾ ಕೂತಿದ್ದರು ಏನೋ ಚುಟು ಚುಟು ಅಂತಿದೆ ಕಾಲಿಗೆ ಅಂದ್ರು ನೋಡಿದ್ರೆ ವಿಷಕಾರಿ ಹುಳು ತೊಡೆಯಿಂದ ಕಾಲಿಗೆ ಜಾರಿ ಕಚ್ಚಿತ್ತು ಅದರ ಅಡಿಗೆ ಅವರಿಗೆ ಗಮನವಿರಲಿಲ್ಲ
ಯಾವುದೇ ಕೆಲಸದಲ್ಲಿದ್ದರೂ ಸಂಪೂರ್ಣ ಏಕಾಗ್ರತೆಯಿಂದ ತೊಡಗಿಸಿಕೊಳ್ಳುತ್ತಿದ್ದರು ಆಗಾಗ ಅಮ್ಮನಿಗೆ ಕೋಪ ಹೆಚ್ಚಾಗಿ ಅಪ್ಪನ ಜೊತೆ ಜಗಳ ಕಂಡೆವು ಆಗ ನಾವೆಲ್ಲಾ ಹೆದರಿ ಸುಮ್ಮನೆ ಕುಳಿತಿದ್ದೆವು

ಆಹಾರವನ್ನು ವ್ಯರ್ಥ ಮಾಡುವುದಕ್ಕೆ ಬಿಡುತ್ತಿರಲಿಲ್ಲ ಎಷ್ಟು ಬೇಕು ಅಷ್ಟೇ ತಟ್ಟೆಯಲ್ಲಿ ಹಾಕಿಕೊಂಡು ತಿನ್ನಿ ಎನ್ನುತ್ತಿದ್ದರು ನಾನು ರಾತ್ರಿ ಎಲ್ಲ ಓದುತ್ತಿದ್ದು ಬೆಳಗ್ಗೆ ತಡವಾಗಿ ಎದ್ದರೆ ಅಮ್ಮ ಬಯ್ಯುತ್ತಿದ್ದರು ಅಪ್ಪ ಒಂದು ಮಾತನ್ನು ಹೇಳುತ್ತಿರಲಿಲ್ಲ ಮಲಗಲು ಬಿಡು ಎನ್ನುತ್ತಿದ್ದರು ಓದುವಾಗ ಅವಳಿಗೆ ಕೆಲಸ ಹೇಳಬೇಡ ಓದು ಎನ್ನುತ್ತಿದ್ದರು

ನಾನು ಋತುಮತಿಯಾದಾಗ ಮೂಲೆಯಲ್ಲಿ ಕೂಡಲು ಬಿಡಲಿಲ್ಲ ನೀನು ಸ್ನಾನ ಮಾಡಿ ಸಹಜವಾಗಿ ಇರು ಎಂದವರು
ಅಮ್ಮನಿಗೆ ಕೂರಿಸಿ ಆ ವಿಷಯದ ಬಗ್ಗೆ ತಿಳುವಳಿಕೆ ಬರೋ ತರ ಮನವರಿಕೆ ಮಾಡಿದವರು

ಆಧ್ಯಾತ್ಮದ ಮನೋಭಾವ ಪ್ರಾಮಾಣಿಕತೆ ಸರಳತೆ ಜ್ಞಾನ ಸಂಪಾದನೆ ಭಕ್ತಿ ಲೋಕ ಇವುಗಳು ಬದುಕಿನಲ್ಲಿ ಅದೆಷ್ಟು ಮುಖ್ಯವಾದವು ಎಂದು ಹೇಳುತ್ತಿದ್ದರು ಅವರು ಪ್ರತಿಭೆಗೆ ಪರಿಶ್ರಮಕ್ಕೆ ತಕ್ಕ ಫಲವಾಗಿ ಶಿಕ್ಷಕರಾಗಿ ಲೋಪದೋಷವಿಲ್ಲದೆ ತಮ್ಮ ಉನ್ನತ ಶಿಕ್ಷಣ ನೀಡಿ ನಿವೃತ್ತಿಗೆ ಪಾದಾರ್ಪಣೆ ಮಾಡಿದರು

ನಿವೃತ್ತಿ ಜೀವನದಲ್ಲಿ ಕೂಡ ಅವರು ಕಾಲಹರಣ ಮಾಡದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉತ್ಸಾಹದಲ್ಲಿ ಜೀವಿಸುತ್ತಾ ಮಕ್ಕಳು ಹೆಂಡತಿಗೆ ಕಾಲು ಭಾಗ ಪ್ರೀತಿ ಕೊಟ್ಟು ಉಳಿದ ಸಮಯ ಸಾಹಿತ್ಯದಲ್ಲಿ ತಾವು ಬೆರೆತು ಹೋಗುತ್ತಿದ್ದರು

ಮಗಳಿಗೆ ಮದುವೆ ವಯಸ್ಸಾಗಿದೆ ಎಂದು ಮಡದಿ ಹೇಳಿದಾಗ ಎಚ್ಚೆತ್ತುಕೊಂಡು ಕೈಯಲ್ಲಿ ಪೆನ್ನು ಜಾರಿ ನೆಲಕ್ಕೆ ಸಾಗಿತು
ಹೆತ್ತ ಮಗಳ ನೋಡಿ ಮಗಳಿಗೆ ವಯಸ್ಸಾಯ್ತ
ಮಗಳು ದೊಡ್ಡವಳಾಗ್ಬಿಟ್ಳ
ಮದುವೆ ವಯಸ್ಸಿಗೆ ಬಂದ್ ಬಿಡ್ತಾ ಎಂದು ದಿಗ್ಭ್ರಮೆಯಿಂದ ಮಡದಿಗೆ ಹೇಳಿದರೆ ಮಡದಿ ಮಗಳ ಮೇಲೆ ಪ್ರೇಮ ಕಣ್ಣು ಮುಚ್ಚಿ ಹೋಗಿದೆ ನಾ ಎಂದು ಗದರುತ್ತಾಳೆ

ತಂದೆ ಭಾರವಾದ ಮನಸ್ಸಿನಿಂದ ಹೇಳುತ್ತಾನೆ ಬಲಗೈ ಹೋದರೆ ಊಟ ಹೇಗೆ ಮಾಡಲಿ ಆಗ ಅಮ್ಮ ಮೌನವಾಗಿ ಉಳಿದುಬಿಡುತ್ತಾಳೆ

ಮಡದಿಯ ಮೌನ ನೋಡದೆ ರೇಗಿಸುತ್ತಾನೆ ಮುತ್ತು ಕೊಟ್ಟ ನಿನ್ನ ಪ್ರೀತಿ ಮರೆಯುವೆ ತುತ್ತು ಕೊಟ್ಟ ಮಗಳ ಪ್ರೀತಿ ಹೇಗೆ ಮರೆಯಲಿ ಎಂದು!

ಪ್ರೀತಿಯಲ್ಲಿ ಕೋಟೆ ಕಟ್ಟಿರುವೆ, ಕೋಟೆ ಒಡೆದು ಹೇಗೆ ಕಳಸಲಿ ರಾಜಕುಮಾರಿಯನ್ನು
ಚಿಂತಿಸಬೇಡ ಹೆಂಡತಿ ನಮ್ಮ ಕೋಟೆಗೆ ಒಬ್ಬ ರಾಜಕುಮಾರ ಬರುವನು ಎಂದು ಮಡದಿಗೆ ಸಮಾಧಾನ ಪಡಿಸಿದ ತಂದೆ

ಅವರ ಸಾವಿನ ಅಂಚಿನಲ್ಲಿರುವಾಗ ಮಡದಿ ಮಾತುಗಳು ನೆನಪು ಬರುತ್ತೆ ರಾಜಕುಮಾರನನ್ನು ತರುವ ವಿಷಯದಲ್ಲಿ ನಾನು ಸೋತುಬಿಟ್ಟೆ
ನನ್ನ ಪ್ರಾಣ ನನ್ನ ಮಗಳು ನಡು ನೀರಿನಲ್ಲಿ ಬಿಟ್ಟಂತೆ ಮಗಳು ಕೇಳುವ ಯಕ್ಷ ಪ್ರಶ್ನೆಗೆ ಉತ್ತರಿಸದಾದೆ

ಅವರು ಸಾಯುವ ಸಂದರ್ಭದಲ್ಲಿ ನಿಮ್ಮಮ್ಮನಿಗೆ ಏನೂ ತಿಳಿಯುವುದಿಲ್ಲ
ಅಣ್ಣ ತಮ್ಮಂದಿರ ಜವಬ್ದಾರಿ ನಿನ್ನದು
ನನ್ನ ಪುಸ್ತಕಗಳನ್ನು ನೀನೇ ಜೋಪಾನವಾಗಿ ಕಾಪಾಡಬೇಕು
ನಿನ್ನ ಮದುವೆ ಕನಸು ಕಂಡೆ ನನಸು ಮಾಡದೇ ಹೋಗುವೆ, ಕ್ಷಮಿಸು ಮಗಳೇ ನಿನ್ನ ಅಪ್ಪನನ್ನು ಅಲ್ಲ ನಿನ್ನ ಮಗನನ್ನು ಎಂದು ಕಣ್ಣು ಮುಚ್ಚಿಕೊಂಡರು.

ನಾನು ಬರಗಾರ್ತಿಯಾಗುವುದು ಅವರ ಕನಸಾಗಿತ್ತು ಅದು ನನಗೆ ಸಾಧ್ಯ ಎಂದು ಹೇಳುವವರು ಕೂಡ ಅಪ್ಪನೇ
ನಾನು ಅಸಾಧ್ಯ ಅಪ್ಪ ಎಂದು ಹೇಳುತ್ತಿದ್ದೆ ಅವರು ಬದುಕಿರುವವರೆಗೂ ಸಾಧ್ಯವಾಗಿರಲಿಲ್ಲ 2024 ಜುಲೈ 15 ರ ಶುಭ ಸೋಮವಾರ ನಮ್ಮ ಮನೆಯಲ್ಲಿ ನಮ್ಮನ್ನೆಲ್ಲಾ ಆಗಲಿ ಶಿವಶರಣರಲ್ಲಿ ಒಂದಾದರು. ಅಂದು ನನ್ನ ಪ್ರಥಮ ಲೇಖನ ಅವರ ಅಗಲಿಕೆಯನ್ನು ನೋವಿನಿಂದ ಪ್ರಾರಂಭವಾಯಿತು.

ಸಾಮಾಜಿಕ ಕಟ್ಟುಪಾಡುಗಳ ತೊಡೆದು ಹಾಕಲು ಧೈರ್ಯವಾಗಿ ಮುನ್ನಡೆಯಲು ಅವರು ನೀಡಿದ ಸಂಸ್ಕಾರ ನಡೆ-ನುಡಿ ಸದಾ ನನ್ನ ಮನದಲ್ಲಿ ಪ್ರತಿ ಧ್ವನಿಸುತ್ತಿರುತ್ತದೆ.

  • ಅನುರಾಧ ಡಿ ಸನ್ನಿ, ಹೂಲಗೇರಿ.
    ಕುಷ್ಟಗಿ ತಾ. ಕೊಪ್ಪಳ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!