ಹನೂರು : ತಾಲೂಕಿನ ಅಂಬೇಡ್ಕರ್ ನಗರದ 1 ನೇ ವಾರ್ಡಿನಲ್ಲಿ ತೆರದ ನೀರಿನ ತೊಟ್ಟಿಗೆ ಬಿದ್ದ ಹಸು, ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆ
ಹನೂರು ಪಟ್ಟಣದಲ್ಲಿ ಬರುವ ಮೊದಲನೆಯ ವಾರ್ಡಿನ ಅಂಬೇಡ್ಕರ್ ನಗರದ ಬೀದಿಯಲ್ಲಿ ತೆರೆದ ನೀರಿನ ತೊಟ್ಟಿಗೆ ಅಚಾನಕ್ಕಾಗಿ ಹಸು ಒಂದು ಬಿದ್ದು ಸಂಕಷ್ಟಕ್ಕೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ,
ನೀರು ತುಂಬಿದ್ದ ತೊಟ್ಟಿಗೆ ಹಸು ಬಿದ್ದು ಒದ್ದಾಡುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಅಗ್ನಿಶಾಮಾಕ ದಳ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ್ದರು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಣೆ ಕಾರ್ಯದಲ್ಲಿ ತೊಡಗಿ ಹಸುವನ್ನು ಮೇಲೆತ್ತಿ ರಕ್ಷಣೆ ಮಾಡಿ ಪ್ರಾಣವನ್ನು ಉಳಿಸಿದರು , ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಂದು ರಕ್ಷಣೆ ಮಾಡಿದನ್ನು ನೋಡಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪ್ರಸನ್ನ ನಾಯಕ್ ಮಹೇಶ್, ಹರ್ಷ, ಜಯ ಪ್ರಕಾಶ್, ಪ್ರವೀಣ್, ಕಾರ್ತಿಕ್
ಹಾಗೂ ಸಾರ್ವಜನಿಕರಾದ ಕೃಷ್ಣ, ಮಹೇಶ್, ಪ್ರಭುಸ್ವಾಮಿ, ಅಜಿತ್ ಹಾಗೂ ಇನ್ನಿತ್ತರು ಇದ್ದರು
ವರದಿ:ಉಸ್ಮಾನ್ ಖಾನ್




















