ಹುನಗುಂದ: ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಜನ್ಮ ಅಮೃತ ಮಹೋತ್ಸವ ನಿಮಿತ್ತ ಸ್ವರಚಿತ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹುನಗುಂದ ಮತ್ತು ಇಳಕಲ್ ತಾಲೂಕಿನ ಕವಿಗಳು ಕವಿತೆ ಕಳಿಸಬಹುದು.
ಕವಿತೆಗಳು ಎಸ್.ಆರ್.ಕಾಶಪ್ಪನವರ ಅವರ ಬದುಕು, ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಇರಬೇಕು.
ಒಬ್ಬರು ಒಂದು ಕವಿತೆ ಕಳಿಸಬೇಕು.
ಕವಿತೆಯನ್ನು ವಾಟ್ಸಾಪ್ ನಂಬರ್ ೯೪೪೮೫೧೮೫೨೬ ಮೂಲಕ ಅಥವಾ ಸಿದ್ದಲಿಂಗಪ್ಪ ಬೀಳಗಿ ನಿವೃತ್ತ ಉಪನ್ಯಾಸಕರು ಮಹಾಂತನಗರ ಹುನಗುಂದ ಇವರಿಗೆ ಅಂಚೆ ಮೂಲಕ ಕಳಿಸಬಹುದು.
ಕವಿಗಳು ತಮ್ಮ ವಿಳಾಸ ಮತ್ತು ವಾಟ್ಸಾಪ್ ನಂಬರ್ ಕಡ್ಡಾಯವಾಗಿ ಬರೆಯಬೇಕು.
ರೂ.೨೦೦೦ ಪ್ರಥಮ, ರೂ.೧೫೦೦ ದ್ವಿತೀಯ ಮತ್ತು ರೂ.೧೦೦೦ ತೃತೀಯ ಬಹುಮಾನ ನಗದು, ಪ್ರಮಾಣ ಪತ್ರ, ಉತ್ತಮ ಕವನ ಸಂಗ್ರಹ ನೀಡಲಾಗುವುದು. ಬಹುಮಾನಿತ ಕವಿತೆಗಳನ್ನು ಜನನಾಯಕ ಕಾಶಪ್ಪನವರ ಸಂಸ್ಮರಣ ಗ್ರಂಥದಲ್ಲಿ ಪ್ರಕಟಿಸಲಾಗುವುದು. ಕವಿತೆ ಕಳಿಸಲು ಇದೇ ಏಪ್ರಿಲ್ ೫ ಕೊನೆಯ ದಿನವಾಗಿದೆ ಎಂದು ಎಸ್.ಆರ್.ಕಾಶಪ್ಪನವರ ಜನ್ಮ ಅಮೃತ ಮಹೋತ್ಸವ ಸಮಿತಿ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















