
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಹಾಗೂ ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಅಖಿಲ ಭಾರತ ನಿವೃತ್ತ ನೌಕರರ ಫೆಡರೇಶನ್ ವತಿಯಿಂದ ತಾಲೂಕಿನ ನಿವೃತ್ತ ನೌಕರರು 25-03-2026 ರಂದು ಬುಧವಾರ ಕಾಳಗಿ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕಾಳಗಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿಯವರಿಗೆ ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ನಡೆಸಿದ ನೌಕರರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಅವರ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಹತ್ತು ವರ್ಷಕೊಮ್ಮೆ ನಡೆಯಬೇಕಾದ ಪಿಂಚಣಿ ಪರಿಷ್ಕರಣೆ ವಿಷಯದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ನಿವೃತ್ತಿ ವೇತನ ಹಾಗೂ ಕುಟುಂಬ ಪಿಂಚಣಿಯನ್ನು ತಕ್ಷಣ ಪರಿಷ್ಕರಿಸಬೇಕು ಮತ್ತು ಈ ಹಿಂದೆ ನೀಡಲಾಗುತ್ತಿದ್ದ ವರ್ಷವಾರು ಎರಡು ತುಟಿ ಭತ್ಯೆಗಳನ್ನು ಪುನಃ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಸರ್ಕಾರದ ಹೇಳಿಕೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನಂತರ ತಹಸೀಲ್ದಾರ್ ಪೃಥ್ವಿರಾಜ್ ಪಾಟೀಲ್ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ಅಹಮದ್ ಗುಡುಸಾಬ್, ಅಧ್ಯಕ್ಷ ಅಣವೀರಪ್ಪ, ಉಪಾಧ್ಯಕ್ಷ ನಾಗಪ್ಪ ಬೀದಿ ಮನಿ, ಅಣ್ಣಾರಾವ್ ಮಠಪತಿ, ಇಬ್ರಾಹಿಂ ಪಾಷಾ ಗಿರಣಿಕರ, ನಾಗೇಂದ್ರಪ್ಪ ಮುಚ್ಚೆಟಿ ಸೂಗೂರು, ಶಿವ ಶರಣಪ್ಪ ಚಿನ್ನ, ಹಣಮಂತ್ ರಾವ್ ಕುರು ಕೋಟಿ, ಶಿವಾಜಿ ಸಿಂಧೆ, ತಿಪ್ಪಣ್ಣ ಶ್ರೀಮನಿ, ಪಾಪಣ್ಣ ಇಟಗಿ ಕರ್, ಮಹಮದ್ ನದೀಮ್, ಕಾಶಿನಾಥ್ ಯರಭಾಗ, ತುಳಜಾ ರಾಮ್ ಸಾಮನೆ, ಗುಂಡಪ್ಪ ಕೋಡ್ಲಿ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಹಾಗೂ ಇತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















