ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯ ಕಲ್ಯಾಣಚೌಕಿಮಠ ಕಾಮಧೇನು ಗೋಶಾಲೆಗೆ ಕಲ್ಲಂಗಡಿ ಹಣ್ಣುಗಳ ದೇಣಿಗೆ.

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಕ್ರಾಸ್ ಹತ್ತಿರದಲ್ಲಿರುವ ಶ್ರೀ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯ ಗೋವುಗಳಿಗೆ ಕೊಟ್ಟಾಲ್ ಗ್ರಾಮದ ಪ್ರಗತಿಪರ ರೈತರಾದ ಮಾದಿನೇನಿ ನಾಗರಾಜ ಅವರು ಸುಮಾರು ಒಂದು ಟ್ಯಾಕ್ಟರ್ ನಷ್ಟು ಕಲ್ಲಂಗಡಿ ಹಣ್ಣುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರು ಸುಮಾರು ಮೂರ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದು, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಅತ್ಯಂತ ಪಾತಾಳಕ್ಕೆ ಇಳಿದಿದ್ದರಿಂದ ಹಾಗೂ ಹಣ್ಣು ಕೀಳುವ ಕೂಲಿಯೂ ಬಾರದೇ ಇರುವುದರಿಂದ ಅವುಗಳನ್ನು ಜಮೀನಿನಲ್ಲಿಯೇ ಹಾಳು ಮಾಡುವ ಬದಲಿಗೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಹಾಗೂ ಗೋಶಾಲೆಯನ್ನು ಆರಂಭಿಸುವ ಮೂಲಕ ಜಾನುವಾರುಗಳಿಗೆ ಆಶ್ರಯದಾತನಾಗಿರುವ ಜೊತೆಗೆ ಗೋವುಗಳಿಂದಾಗುವ ಅನುಕೂಲಗಳನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಗೆ ನೀಡುತ್ತಿರುವುದಾಗಿ ತಿಳಿಸಿದರು.
ಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆಯ ಮುಖ್ಯಸ್ಥರಾದ ಕೆ.ಎಂ.ಬಸವರಾಜ ಶಾಸ್ತ್ರಿಗಳು ಮಾತನಾಡಿ ಗೋಶಾಲೆಯಲ್ಲಿ ನೂರಾರು ಗೋವುಗಳನ್ನು ಸಾಕಲಾಗುತ್ತಿದೆ. ಈ ಭಾಗದಲ್ಲಿ ಎರಡನೇ ಬೆಳೆ ಇಲ್ಲದೇ ಇರುವುದರಿಂದ ಗೋವುಗಳಿಗೆ ತೊಂದರೆಯಾಗತ್ತಿದ್ದು, ಪ್ರಗತಿಪರ ರೈತರಾದ ಮಾದಿನೇನಿ ನಾಗರಾಜ ಅವರು ಒಂದು ಲೋಡ್ ಕಲ್ಲಂಗಡಿಗಳನ್ನು ದೇಣಿಗೆಯಾಗಿ ನೀಡಿದ್ದು ಗೋವುಗಳಿಗೆ ಅನುಕೂಲವಾಗಿದೆ. ಅವರ ಗೋವುಗಳ ಸೇವೆಗೆ ಭಗವಂತನು ಒಳಿತನ್ನು ಮಾಡಲಿ ಎಂದರು.

ಗೋಶಾಲೆಗೆ ಮೇವು ಕೊಡಿ :
ತಾಲ್ಲೂಕಿನಲ್ಲಿ ಗೋಶಾಲೆಯನ್ನು ಆರಂಭಿಸಿದ್ದು, ಗುಡ್ಡದ ಪ್ರದೇಶದಲ್ಲಿ ಗೋಶಾಲೆ ಇರುವುದರಿಂದ ಹಾಗೂ ಮಳೆ ಇಲ್ಲದೇ ಇರುವುದರಿಂದ ಯಾವುದೇ ಬೆಳೆಯನ್ನು ಬೆಳೆಯಲಾಗುತ್ತಿಲ್ಲ ಜೊತೆಗೆ ಈ ಭಾಗದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಗೋವುಗಳ ಮೇವಿಗೆ ತೊಂದರೆಯಾಗಿದ್ದು, ತಾಲ್ಲೂಕಿನ ಹಾಗೂ ಅಕ್ಕಪಕ್ಕದ ತಾಲ್ಲೂಕಿನ ರೈತರು ನಮ್ಮ ಗೋಶಾಲೆಗೆ ಮೇವನ್ನು ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎಂ.ಪ್ರದೀಪ, ಮಾದಿನೇನಿ ನಾಗರಾಜ, ಗೋಶಾಲೆಯ ಸಿಬ್ಬಂದಿಗಳು, ಶ್ರೀಮಠದ ಸದ್ಭಕ್ತರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!