
ಬಳ್ಳಾರಿ / ಕಂಪ್ಲಿ : 12ನೇ ಶತಮಾನದ ಅದ್ವಿತೀಯ ಶಿವಶರಣೆ, ವೈರಾಗ್ಯ ನಿಧಿ ಅಕ್ಕಮಹಾದೇವಿಯ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಅಕ್ಕನ ಪ್ರತಿಮೆಯ ಬೃಹತ್ ಮೆರವಣಿಗೆ, ತೊಟ್ಟಿಲು ಹಾಗೂ ಮುತೈದೆಯರಿಗೆಹುಡಿ ತುಂಬುವ ಕಾರ್ಯಕ್ರಮಗಳು ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿದವು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಅವರಣದಲ್ಲಿರುವ ಅಕ್ಕಮಹಾದೇವಿಯ ಅಮೃತ ಶಿಲೆಯ ಪ್ರತಿಮೆಗೆ ಬೆಳಿಗ್ಗೆ ವಿವಿಧ ಅಭಿಷೇಕಗಳನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಸಂಜೆ ಅಲಂಕೃತ ವಾಹನದಲ್ಲಿ ಅಕ್ಕನ ಪ್ರತಿಮೆಯನ್ನು ಇಟ್ಟು ವಿವಿಧ ಹೂಗಳು ಮತ್ತು ವಿದ್ಯುದೀಪಗಳಿಂದ ಅಲಂಕರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ದೂರಿಯಿಂದ ಮೆರವಣಿಗೆಯನ್ನು ನಡೆಸಿದರು.
ನಂತರ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಮೆರವಣಿಗೆ ಮುಕ್ತಾಯಗೊಂಡ ನಂತರ ಅಲ್ಲಿ ಅಕ್ಕಮಹಾದೇವಿಯ ತೊಟ್ಟಿಲು ಕಾರ್ಯಕ್ರಮವನ್ನು ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸಮಾಜದ ಮಹಿಳೆಯರು ತೊಟ್ಟಿಲು ಹಾಡುಗಳನ್ನು ಪ್ರಸ್ತುತ ಪಡಿಸುವ ಮೂಲಕ ನೆರವೇರಿಸಿದರು.
ನಂತರ ಲಿಂ. ಗೊಗ್ಗ ವಿಶಾಲಾಕ್ಷಮ್ಮನವರ ಸ್ಮರಣಾರ್ಥ ಮುತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ನೂರಾರು ಮಹಿಳೆಯರಿಗೆ ಉಡಿಯನ್ನು ತುಂಬಿದರು. ನಂತರ ಧರ್ಮಸಭೆ ನಡೆಯಿತು, ಕೊನೆಯಲ್ಲಿ ಅನ್ನ ಸಂತರ್ಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ. ಶಾರದಾ ಜಗನ್ನಾಥ್ ಹಿರೇಮಠ, ಪದಾಧಿಕಾರಿಗಳಾದ ಲಕ್ಷ್ಮೀ ಕಾಮಗಂಡಿ, ಬಿ.ಸುಮಂಗಲ, ಪುಷ್ಪಾ ಬಿ.ಎಂ, ಎಸ್.ಸಿಂಧೂಗೌಡ, ಸುಜಾತಾ ತಾಂಡೂರು, ರಶ್ಮೀ ಕಲ್ಗುಡಿ, ಅನ್ನಪೂರ್ಣ.ಟಿ., ಅನುಪಮ ಅರವಿ, ವಸ್ತ್ರದ ಶಾಂತಾ, ಚಿನ್ನದಕಂತಿ ಶೋಭಾ, ಮಧುಮತಿ ತಂಬ್ರಳ್ಳಿ, ಸಿದ್ದಮಲ್ ಜಯಲಕ್ಷ್ಮೀ, ಕೋರಿ ಜಯಶ್ರೀ, ಉಮಾದೇವಿ ಕಾಮರೆಡ್ಡಿ, ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವೀರಶೈವ ಸಮಾಜದ ಹಿರಿಯ ಮುಖಂಡರು, ಸಮಾಜದ ಮಹಿಳೆಯರು,ವೀರಶೈವ ಸಂಘದ ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















