ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೂರ್ಣಗೊಂಡ ರಸ್ತೆ ಡಾಂಬರೀಕರಣ : ನಿಟ್ಟುಸಿರು ಬಿಟ್ಟ ನಿವಾಸಿಗಳು

ಬಳ್ಳಾರಿ / ಕಂಪ್ಲಿ : ಕೆಲ ದಿನಗಳ ಹಿಂದೆ ಆರಂಭವಾಗಿ ಕಂಪ್ಲಿ ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿ ಕಾಮಗಾರಿ ಇದೀಗ ಮುಕ್ತಾಯಗೊಂಡಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ರಸ್ತೆ ಡಾಂಬರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ರಸ್ತೆ ಡಾಂಬರೀಕರಣವಾಗದೇ ಈ ರಸ್ತೆಯಲ್ಲಿ ಧೂಳು ಮುಚ್ಚಿ ಹೋಗಿದ್ದು, ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಮಾಡುವುದು ಅತ್ಯಂತ ದುಸ್ತರವಾಗಿತ್ತು ಹಾಗೂ ಈ ರಸ್ತೆ ಬಹುತೇಕ ಜನವಸತಿ ಪ್ರದೇಶವಾಗಿದ್ದರಿಂದ ನಿವಾಸಿಗಳು ಪ್ರತಿದಿನ ಜೀವನ ನಡೆಸುವುದು ತೊಂದರೆಯಾಗಿತ್ತು. ಧೂಳಿನಿಂದ ಅನೇಕ ರೋಗರುಜಿನಗಳ ಆತಂಕ ಮನೆ ಮಾಡಿತ್ತು. ಅಂತು ಇಂತೂ ರಸ್ತೆ ಡಾಂಬರೀಕಣವಾಗಿದೆ, ಆದರೆ, ರಸ್ತೆಯ ಎರಡು ಬದಿಗೆ ಇನ್ನು ಫೇವರ್ಸ್ಗಳನ್ನು ಜೋಡಿಸಿಲ್ಲದಿರುವುದರಿಂದ ರಸ್ತೆ ಬದಿಯಲ್ಲಿ ದ್ವಿಚಕ್ರ ಸೇರಿದಂತೆ ಇತರೆ ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಆದಷ್ಟು ಬೇಗ ರಸ್ತೆಯಲ್ಲಿ ಫೇವರ್ಸ್ಗಳನ್ನು ಜೋಡಿವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!