ಕೊಪ್ಪಳ :ಡಾ. ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರು. ಶೋಷಿತರ ಮತ್ತು ದಮನಿತರ ಹಕ್ಕುಗಳಿಗಾಗಿ ಜೀವಿತಾವಧಿಯವರಿಗೆ ಹೋರಾಡಿದ ಧೀಮಂತ ನಾಯಕರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾನುವಾರದಂದು ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 119 ನೇ ಜಯಂತಿ ಆಚರಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತ ಡಾ. ಬಾಬು ಜಗ ಜೀವನ್ ರಾಮ್ ಅವರು ಸುಮಾರು 30 ವರ್ಷ ಕ್ಯಾಬಿನೆಟ್ ಸಚಿವರಾಗಿದ್ದವರು. ದೇಶದಲ್ಲಿ ದಲಿತ ಮತ್ತು ಹಿಂದುಳಿದವರಿಗೆ ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ದೊರೆಯುವಲ್ಲಿ ಅಂಬೇಡ್ಕರ್ ಅವರ ಜೊತೆಗೆ ಜಗಜೀವನ್ ರಾಮ್ ಅವರು ಕೂಡ ಶ್ರಮ ಪಟ್ಟರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಇಬ್ರಾಹೀಮ್ ಅವರು ಮಾತನಾಡುತ್ತ ಡಾ. ಬಾಬು ಜೀವನ್ ರಾಮ್ ಅವರು ದೇಶದ ಅಭಿವೃದ್ಧಿಯ ಹರಿಕಾರರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇದ್ದಾರೆ. ಎಲ್ಲರೂ ಸಮಾನರಾಗಿ ಬದುಕುಬೇಕು ಎಂಬ ಆಶಯವನ್ನು ಹೊಂದಿದ್ದರು. ದೇಶವು ಆಹಾರ ಸಮಸ್ಯೆ ಎದುರಿಸಿದಾಗ ಹಸಿರು ಕ್ರಾಂತಿಯನ್ನು ಮಾಡಿದರು. ಬಡವರ ಹಕ್ಕುಗಳುಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿ ಇಟ್ಟರು. ಇತಿಹಾಸ ಪುಟದಲ್ಲಿ ಡಾ. ಬಾಬು ಜಗ ಜೀವನ್ ರಾಮ್ ಹೆಸರು ಸೇರಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ನರಸಿಂಹ ಅವರು ಮಾತನಾಡುತ್ತ ಡಾ. ಬಾಬು ಜಗಜೀವನರಾಮ್ ಅವರು ಸ್ವಾತಂತ್ರ ಹೋರಾಟಗಾರರು. ಇವರು ದೇಶದ ಮೊದಲು ಕಾರ್ಮಿಕ ಸಚಿವರಾಗಿದ್ದರು. ಉಪಪ್ರಧಾನಿ ಆಗಿದ್ದರು. ದಲಿತರಿಗೆ ಬಡ್ತಿಯಲ್ಲಿ ಮೀಸಲಾತಿ ಜಾರಿಗೆ ತಂದರು. ಕಾರ್ಮಿಕರ ಪರವಾದ ಪಿಂಚಣಿ ಸೇರಿದಂತೆ ಹಲವಾರು ಕಾನೂನುಗಳನ್ನು ಜಾರಿಗೆ ತಂದರು. ಭೂರಹಿತರಿಗೆ ಭೂಮಿಯನ್ನು ಹಂಚಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಪ್ರದೀಪ್ ಕುಮಾರ್, ಡಾ. ಸುರೇಶ್ ಕುಮಾರ ಸೊನ್ನದು, ಡಾ. ನಂದ, ಕಾಲೇಜಿನ ಭೋದಕೇತರ ಸಿಬ್ಬಂದಿಗಳಾದ ಲಕ್ಷ್ಮೀ ಎ. ಕೆ, ರುಕ್ಕಮ್ಮ, ಗವಿಸಿದ್ದಪ್ಪ ಅಜ್ಜ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ ನರಸಿಂಹ ನಿರೂಪಿಸಿ ಸ್ವಾಗತಿಸಿದರು. ಡಾ. ಪ್ರದೀಪ್ ಕುಮಾರ್ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















