ಗದಗ/ ರೋಣ: ತಾಲೂಕು ಎಸ್ .ಆರ್. ಪಾಟೀಲ್ ಪ್ರತಿಷ್ಠಾನ ಇವರ ವತಿಯಿಂದ ರೋಣ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಜಿ. ಎಸ್. ಪಾಟೀಲ್ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ 30 ಕ್ಕೂ ಕಂಪನಿಗಳಲ್ಲಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಕೌಶಲ್ಯ ಅಭಿವೃದ್ಧಿ ತರಬೇತಿ ಸ್ಟಾರ್ಟ್ ಅಪ್ ಗೆ ಚಾಲನೆ ನೀಡಲಾಯಿತು.ಈ ಮೂಲಕ ಮಹಿಳೆಯರು ಕುಂತಲ್ಲೇ ಸ್ವಂತ ಉದ್ಯೋಗದಿಂದ ವಸ್ತುಗಳನ್ನು ತಯಾರಿಸಬಹುದು. 17 ಕೋಟಿ ರೂ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲಾ ಕಟ್ಟಡದ ನಿರ್ಮಾಣ ಕಾಮಗಾರಿ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿ ಸಾಲುಮರದ ತಿಮ್ಮಕ್ಕನ ನೆನಪು ಅಜರಾಮರ ಉಳಿವಿಗಾಗಿ ಸಸ್ಯೋದ್ಯಾನ ಪ್ರವಾಸೋದ್ಯಮ ವಲಯದಲ್ಲಿ ಮೆರುಗು ನೀಡುವ ಉದ್ದೇಶದಿಂದ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ್ ಸಾವಿರ ಕೆರೆಗಳ ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ್ ಉದ್ಘಾಟಿಸಿ ಸಸಿಗೆ ನೀರು ಹಾಕಿ ಶಂಕು ಸ್ಥಾಪನೆ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು 78ನೇ ವರ್ಷದ ಹುಟ್ಟು ಹಬ್ಬ ಶುಭಾಶಯ ಕೋರಿದರು.
ವರದಿ ಶರಣಪ್ಪಗೌಡ




















