ಬಾಗಲಕೋಟೆ -ಮುಧೋಳ : ಸುಧಾರಣೆ ಎಂಬುದು ವ್ಯಕ್ತಿ ಸುಧಾರಣೆಯಿಂದಲೇ ಆರಂಭವಾಗಬೇಕೆಂಬ ಆಶಯ ಬಸವಣ್ಣನವರದು. ಕುಟುಂಬ ಒಂದು ಚಿಕ್ಕ ಘಟಕವಾಗಿದ್ದರೂ ಸಮಾಜ ಸುಧಾರಣೆಯು ವ್ಯಕ್ತಿ ಜೀವನ ಅಥವಾ ಕುಟುಂಬ ನೆಲೆಯಿಂದಲೇ ಆರಂಭವಾಗಬೇಕೆಂಬ ಮಹದಾಸೆಯಾಗಿದೆ ಎಂದು ಮರೇಗುದ್ದಿಯ ಅಡವಿಮಠದ ಡಾ.ನಿರುಪಾಧೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಶಿರೋಳ ಗ್ರಾಮದ ಮಾಣಿಕ್ಯಶೆಟ್ಟಿ ಬಂಧುಗಳ “ಮನೆಯಲ್ಲಿ ಮಹಾಮನೆ” ಅನುಭಾವದ ನುಡಿ. ಉಡದಟ್ಟಿ ಜನಪದ ಸಂಭ್ರಮ-2026. ಕಾರ್ಯಕ್ರಮದ ಸಾನಿಧ್ಯ ವಹಿಸಿ ಅಂಜಲಿ. ಭಾಗ್ಯಶ್ರೀ. ಆನಂದ. ಆಕಾಶ. ಸಮರ್ಥ. ಐದು ಮಕ್ಕಳಿಗೆ ಶಾಲು ಮಾಲೆಯನ್ನು ಹಾಕಿ ಆಶೀರ್ವದಿಸಿ ಆಶೀರ್ವಚನವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಮಾತನಾಡಿ ವ್ಯಕ್ತಿ ಮತ್ತು ವ್ಯಕ್ತಿ ನಡುವಿನ ಸಂಬಂಧಗಳು ಸುಧಾರಿತವಾದರೆ ಆ ಮೂಲಕ ಕುಟುಂಬ ಸುಧಾರಣೆ ಮತ್ತು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಧೋಳದ ಪೂಜ್ಯರಾದ ವೆಂಕಣ್ಣ ಮಹಾರಾಜರು ಶಿರೋಳದ ಬಸಪ್ಪಜ್ಜನವರು. ಮಂಟೂರಿನ ಈರಯ್ಯ ಸ್ವಾಮಿಗಳು .ರಬಕವಿಯ ಹನುಮಂತ ಗುರುಸ್ವಾಮಿಗಳು ಉಪಸ್ಥಿತರಿದ್ದರು. ಮಾಣಿಕ್ಯ ಶೆಟ್ಟಿ, ಕುಟುಂಬದ ಸಂಗಪ್ಪ ಹಾಗೂ ಗಿರೀಶ್ ಸಹೋದರರು ಪೂಜ್ಯರೆಲ್ಲರನ್ನು ಗೌರವಿಸಿದರು. ಉದ್ಯಮಿ ಸಂಗಮೇಶ ನಿರಾಣಿ ಶುಭ ಕೋರಿದರು. ಹಿರಿಯ ಅನುಭವಿಗಳಾದ ಶಿವಪ್ಪ ಪವಾಡ ಶೆಟ್ಟಿ. ಶರಣ ಶ್ರೀ ಶಂಕರ್ ಚಿಮ್ಮಡ. ಮಾತೋಶ್ರೀ ಬಂದವ್ವ ಸಿದ್ದರಾಮಪ್ಪ ಮಾಣಿಕ ಶೆಟ್ಟಿ .ಪಾರವ್ವ ಮಹದೇವ ಮರನೂರ ಉಪಸ್ಥಿತರಿದ್ದರು.
ಚಂದ್ರು ಪವಾಡ ಶೆಟ್ಟಿ ಸ್ವಾಗತಿಸಿ ಅಭಿನಂದಿಸಿದರು. ಸಾವಿರಾರು ಸಂಖ್ಯೆಯಲ್ಲಿ ಹಿರಿಯರು ತಾಯಂದಿರು ಯುವಕರು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ




















