ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಂಚನಾಳ ಗ್ರಾಮದ ಸರ್ವೇ ನಂಬರ್ 46 ಕರ್ನಾಟಕ ಸರ್ಕಾರದ ಇಲಾಖೆಗೆ ಸಂಬಂಧಪಟ್ಟ ಗೈರಾಣಿ ಭೂಮಿ ಇದ್ದು ಸುದರ್ಶನ್ ರೆಡ್ಡಿ ಎಂಬುವರು ಅಕ್ರಮವಾಗಿ ಕಬಳಿಸಿಕೊಂಡು ಸವಳು ಮಣ್ಣು ಅಗೆದು ಮಾರಾಟ ಮಾಡ್ತಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಮಾನ್ಯ ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ ವಾದಿ ) ಶಾಖೆ ಕೊಡ್ಲಿ ಕಾರ್ಯದರ್ಶಿಗಳಾದ ಗುರು ನಂದೇಶ್ ಕೋಣಿನ ರವರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುರು ನಂದೇಶ್ ಕೋಣಿನ ಕಾರ್ಯದರ್ಶಿಗಳು ಕಮ್ಯುನಿಸ್ಟ್ ಪಕ್ಷ ಕೊಡ್ಲಿ, ಕೃಷ್ಣ ಸೇರಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಕೊಡ್ಲಿ, ಸಚಿನ್ ಚೌಹಾಣ್ ಇತರ ಮುಖಂಡರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















