
ಕೊರಟಗೆರೆ ತಾಲೂಕಿನ ಮಲ್ಲೇಶ್ವರದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ, ಸಮಾನತೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಮಹಾನ್ ನಾಯಕ ಭೀಮರಾವ್ ಅಂಬೇಡ್ಕರ್ ಜಯಂತೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಗ್ರಾಮದಲ್ಲಿ ಅಂಬೇಡ್ಕರ್ ರವರ 135 ನೇ ಜನ್ಮ ದಿನೋತ್ಸವವನ್ನು ಜನನಾಯಕ ಸಮಾಜ ಸೇವಕರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿಎನ್ ಕೃಷ್ಣಮೂರ್ತಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ , ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿ ಎನ್ ಕೃಷ್ಣಮೂರ್ತಿಯವರು ಭೀಮರಾವ್ ರವರು ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಸಾಮಾಜಿಕ ಸಮಾನತೆ ಅಸ್ಪೃಶ್ಯತೆಯ ನಿವಾರಣೆಗೆ ಹೋರಾಡಿದ ದೇಶ ವಿದೇಶಗಳಲ್ಲೂ ಗುರುತಿಸಿಕೊಂಡ ಮಹಾನ್ ನಾಯಕ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರಿಗೆ 135 ನೇ ಜನ್ಮದಿನದ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಅವರು ಅಸ್ಪೃಶ್ಯತೆ ವಿರುದ್ಧ ಹೋರಾಟ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕಲ್ಪನೆ ಹಾಗೂ ವಿಚಾರವಂತಿಕೆಯು ಪ್ರಜಾಪ್ರಭುತ್ವದ ಆಡಳಿತ ವಿಧಾನವಲ್ಲ ಅದೊಂದು ಜೊತೆಯಾಗಿ ಬಾಳುವ ವಿಧಾನ ಸಮಗ್ರ ಬದುಕಿನ ಅನುಭವ ಜೊತೆಯಲ್ಲಿರುವ ಮನುಷ್ಯರಿಗೆ ಘನತೆ ಗೌರವ ನೀಡುವ ಕ್ರಮವೆಂದು ಭಾರತದ ಸಂವಿಧಾನದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ರವರು ಹೇಳಿದ್ದಾರೆ. ಸಮಾಜದಲ್ಲಿ ಧೈರ್ಯದಿಂದ ಹುಲಿಗಳಂತೆ ಬದುಕಬೇಕು ಎಂದು ತಿಳಿಸಿದರು. ನಾವು ಮೊದಲು ಮಾನವ ಜಾತಿಯಾಗಬೇಕು ಯಾವ ಧರ್ಮ ಅಥವಾ ದೇವರು ನಮ್ಮನ್ನು ಉದ್ದಾರ ಮಾಡುವುದಿಲ್ಲ ನಮ್ಮನ್ನು ಉದ್ದಾರ ಮಾಡುವುದು ನಮ್ಮ ಶಿಕ್ಷಣ ಮಾತ್ರ ಅದುವೇ ನಮ್ಮ ಶಕ್ತಿಯಾಗುತ್ತದೆ ಹೇಳಿದರು. ನಾವು ಅವರನ್ನು ಕೆಲವು ಸಮಯದಲ್ಲಿ ಮಾತ್ರ ನೆನಪಿಸಿಕೊಳ್ಳುವುದಲ್ಲ ಅವರು ಪ್ರತಿಪಾದಿಸಿದ ಪ್ರತಿಯೊಂದು ತತ್ವವನ್ನು ರಕ್ಷಿಸಿ ಹಕ್ಕನ್ನು ಮೌಲ್ಯವನ್ನು ಎತ್ತಿ ಹಿಡಿದು ನಾವು ಎದ್ದು ನಿಲ್ಲಬೇಕು ಧೈರ್ಯದಿಂದ ಹೇಳಬೇಕು ಆಗ ಅಂಬೇಡ್ಕರ್ ರವರಿಗೆ ನಾವು ಸಲ್ಲಿಸುವ ಗೌರವ ಎಂದ ಅಲ್ಲಿ ಬಂದಿದ್ದ ಎಲ್ಲರಿಗೂ ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಾಡಿ ವೆಂಕಟೇಶ್ ರವರು ದಲಿತರೆಲ್ಲರೂ ಒಗ್ಗಟ್ಟಿನಿಂದ ಕೂಡಿ ಜಯಂತಿಯನ್ನು ಆಚರಣೆ ಮಾಡಿದರೆ ಅದು ದಲಿತರ ಬಲವಾಗುತ್ತದೆ ಹಾಗೂ ಎಲ್ಲರೂ ಶಿಕ್ಷಣ ಮತ್ತು ಸಮಾನತೆಯ ಬಗ್ಗೆ ತಿಳಿದುಕೊಂಡು ಸಮಾಜದಲ್ಲಿ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನನಾಯಕರಾದ ಪಿ ಎನ್ ಕೃಷ್ಣಮೂರ್ತಿಯವರು, ಪ್ರಜಾ ಶಕ್ತಿ ಜನಪರ ವೇದಿಕೆ ರಾಜ್ಯಾಧ್ಯಕ್ಷರಾದ ರಮೇಶ್ ಎಸ್ ಎನ್ , ಮಹಿಳಾ ಜಿಲ್ಲಾಧ್ಯಕ್ಷರಾದ ರೇಖಾ ಆರ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ನರಸಿಂಹರಾಜು ಎಲ್, ಡಿಎಸ್ಎಸ್ ಮುಖಂಡರಾದ ದಾಡಿ ವೆಂಕಟೇಶ್,ದೊಡ್ಡಯ್ಯ, ಹನುಮಂತರಾಜು ಮೆಡಿಕಲ್, ಸಿದ್ದಗಂಗಮ್ಮ ಇನ್ನೂ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ಅದ್ದೂರಿಯಾಗಿ ಜರುಗಿತು.
ವರದಿ ಪ್ರಸನ್ ಕುಮಾರ್ ಎಸ್. ಕೊರಟಗೆರೆ




















