ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ

ಕೊರಟಗೆರೆ ತಾಲೂಕಿನಲ್ಲಿ ನಿರ್ದಿಷ್ಟ ಅರಣ್ಯ ಪ್ರದೇಶಗಳಿದ್ದರೂ ನಗರಗಳ ಅಭಿವೃದ್ಧಿ ಅರಣ್ಯ ಪ್ರದೇಶಗಳಲ್ಲಿ ರೆಸಾರ್ಟ್ ಗಳು ಅಲ್ಲಿಗೆ ವಿದ್ಯುತ್ ವ್ಯವಸ್ಥೆ, ರಸ್ತೆ ವ್ಯವಸ್ಥೆ ಇವುಗಳನ್ನು ಮಾಡಲು ಅರಣ್ಯ ನಾಶವಾಗಿ ಅರಣ್ಯ ಪ್ರದೇಶದ ಪ್ರಾಣಿ ಪಕ್ಷಿಗಳು ಹಳ್ಳಿ ಪಟ್ಟಣಗಳಿಗೆ ಬರುತ್ತಿವೆ. ಕಾರಣ ಮನುಷ್ಯನ ಆಧುನಿಕತೆಯ ಜೀವನ ಆದ್ದರಿಂದ ನಾವು ಕಾಡಿಗೆ ಹೋಗಬಹುದು ಪ್ರಾಣಿಗಳು ನಾಡಿಗೆ ಬರಬಾರದೆ ಎಂಬಂತೆ ಕೊರಟಗೆರೆಗೆ ಚಿರತೆ ಕರಡಿ ಹೆಬ್ಬಾವು ಬಂದು ಅವುಗಳ ಆಹಾರಕ್ಕಾಗಿ ನಾಯಿ ಕುರಿ , ಮೇಕೆಗಳು ಮತ್ತು ಸಿಕ್ಕ ಮನುಷ್ಯರನ್ನು ಕಚ್ಚುತ್ತವೆ.
ಇನ್ನು ಈ ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಬೆಟ್ಟಗಳು ಅರಣ್ಯ ಪ್ರದೇಶಗಳು ನಗರಕ್ಕೆ ಹತ್ತಿರ ಇರುವುದರಿಂದ ಪ್ರಾಣಿಗಳು ಆಹಾರ ನೀರು ಹುಡುಕಾಟದಲ್ಲಿ ನಗರಕ್ಕೆ ಬರುತ್ತಿವೆ ಆದ್ದರಿಂದ ಅರಣ್ಯ ಪ್ರದೇಶಗಳಲ್ಲಿ ಜನರಿಗೆ ವಾಸಿಸುವುದಕ್ಕೆ ಹೋಗುವುದಕ್ಕೆ ಪ್ರಾಣಿಗಳು ಅರಣ್ಯದಿಂದ ಹೊರಬರದಂತೆ ತಂತಿ ಬೇಲಿಯ ವ್ಯವಸ್ಥೆಯು ಸಹ ಇಲ್ಲ.
ಇದೇ ರೀತಿ ಎಲ್ಲಾ ಪ್ರಾಣಿಗಳಿಗೂ ಮನುಷ್ಯರಂತೆ ಭಾವನೆಗಳಿವೆ ಅವುಗಳ ಕ್ರಿಯೆ ಪ್ರತಿಕ್ರಿಯೆಯನ್ನು ಸೂಕ್ಷ್ಮತೆಯಿಂದ ಹರಿಯುವ ಮನಸ್ಸು ಹಿಂದಿನ ಆಧುನಿಕ ಪೀಳಿಗೆಗೆ ಅತ್ಯವಶ್ಯಕ. ಪರಿಸರದಲ್ಲಿ ಪ್ರಾಣಿ ಪಕ್ಷಿಗಳು ಬದುಕುವ ಹಕ್ಕಿದೆ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವಾಗಿದೆ ಆದರೆ ಮೊಬೈಲ್ ತರಂಗಗಳಿಂದ ಹಾಗೂ ಅರಣ್ಯ ನಾಶದಿಂದ ಇಂದು ಪಕ್ಷಿಗಳು ಮಾಯವಾಗುತ್ತಿದೆ ಪ್ರಾಣಿಗಳು ನಗರಕ್ಕೆ ಬರುವುದು ಸಹಜವಾಗಿದೆ.
ಆದ್ದರಿಂದ ನಾವು ಕಾಡುಗಳನ್ನು ಬೆಳೆಸಲು ಕೈಜೋಡಿಸಬೇಕು ಆದಷ್ಟು ಇರುವ ಪ್ರದೇಶಗಳಲ್ಲಿ ವಾಸ ಮಾಡಬೇಕು ಆಗ ಪ್ರಾಣಿ ಪಕ್ಷಿಗಳು ಅರಣ್ಯದಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ಆದ್ದರಿಂದ ನಾವುಗಳು ಅರಣ್ಯ ಬೆಟ್ಟ ಗುಡ್ಡಗಳನ್ನು ಡೈನಾಮಿನೆಂಟ್ ಗಳಲ್ಲಿ ನಾಶ ಮಾಡುವುದನ್ನು ನಿಲ್ಲಿಸಬೇಕು.
ನದಿ ಹಳ್ಳ ಕೆರೆಗಳಲ್ಲಿ ನೀರಿದ್ದರೆ ಪ್ರಾಣಿಗಳು ನಾಡಿಗೆ ಬರುವುದನ್ನು ನಿಲ್ಲಿಸುತ್ತವೆ.
ಪ್ರಕೃತಿಯ ಸಂರಕ್ಷಣೆಯು ನಮ್ಮೆಲ್ಲರ ಆದ್ಯ ಕರ್ತವ್ಯ ಸಾಧ್ಯವಾದಷ್ಟು ಉಳಿಸೋಣ ಮುಂದಿನ ಪೀಳಿಗೆಗೆ ತಿಳಿಸೋಣ.

ವರದಿಗಾರ.ಪ್ರಸನ್ ಕುಮಾರ್ ಎಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!