ಅಸಮಾನತೆಯ ವಿರುಧ್ಧ
ಹೋರಾಡಿದ ಧೀರ,
ಹನ್ನೆರಡನೇ ಶತಮಾನದ,
ಪ್ರಮುಖ ವಚನಕಾರ,
ಮೂರ್ತಿ ಪೂಜೆಯ ಖಂಡಿಸಿ
ಇಷ್ಟ ಲಿಂಗವ ಪೂಜಿಸಿ,
ಅನುಭವ ಮಂಟಪ ಸ್ಥಾಪಿಸಿ
ಅನುಭಾವಿಗಳ ಸಂಘಟಿಸಿ,
ಮೇಲು ಕೀಳೆಂಬ ಭಾವನೆ ತೊಲಗಿಸಿ, ಸರ್ವರನೂ ಪ್ರೀತಿಸಿ
ಭಕ್ತಿ ಭಂಡಾರಿಯಾದ ಬಸವೇಶ್ವರ, ಧಾರ್ಮಿಕ, ಸಾಮಾಜಿಕ
ಕ್ರಾಂತಿಯ ಹರಿಕಾರ,
ವೈಚಾರಿಕ ಮನದ ಬಸವೇಶ್ವರ
ವಿಶ್ವ ಮಾನವ, ಬಸವೇಶ್ವರ!
-ಶಿವಪ್ರಸಾದ್ ಹಾದಿಮನಿ.
ಕೊಪ್ಪಳ. 583231.
ಮೊಬೈಲ್ : 7996790189.




















