ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಆರಾಧ್ಯದೇವರಾದ ಶ್ರೀ ತುರುಮುಂದಿ ಬಸವೇಶ್ವರ ಮಹಾರಥೋತ್ಸವವು ಬಸವೇಶ್ವರರ ಜಯಂತಿಯ ದಿನವಾದ ಇಂದು ಸಂಜೆ ಸಡಗರ,ಸಂಭ್ರಮ,ಶ್ರದ್ದೆ,ಭಕ್ತಿಯಿಂದ ಜರುಗಿತು.
ಮಹಾರಥೋತ್ಸವದ ಅಂಗವಾಗಿ ಏ.19 ರಂದು ಕಳಸ,ಕುಂಭಗಳೊಂದಿಗೆ ಗಂಗೆಸ್ಥಳ ಕಾರ್ಯಕ್ರಮವು ವೀರಗಾಸೆ, ಪುರವಂತರ ನೃತ್ಯ ಜರುಗಿತು. ನಂತರ ಶ್ರೀತುರುಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಕಲ್ಯಾಣೋತ್ಸವವು ಸಂಭ್ರಮದಿಂದ ಜರುಗಿತು.
ಇಂದು ಬೆಳಿಗ್ಗೆ ತುರುಮುಂದಿ ಬಸವೇಶ್ವರರ ಶಿಲಾಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಹಾಗೂ ಮಡಿ ತೇರನ್ನು ಎಳೆಯಲಾಯಿತು. ಸಂಜೆ ಮಂಗಲವಾದ್ಯಗಳು, ವಿವಿಧ ಜಾನಪದ ಕಲಾತಂಡಗಳೊಂದಿಗೆ ಉತ್ಸವ ಮೂರ್ತಿಗಳಾದ ತುರುಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಪ್ರತಿಮೆಗಳನ್ನು ಮೆರವಣಿಗೆ ಮೂಲಕ ತಂದು ರಥದಲ್ಲಿ ಪ್ರತಿಪಷ್ಠಾಪಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಹಾರಥೋತ್ಸವದಲ್ಲಿ ಶಾಸಕ ಜೆ.ಎನ್.ಗಣೇಶ್ ಭಾಗವಹಿಸಿ ಸ್ವಾಮಿಯ ಆಶೀರ್ವಾದ ಪಡೆದರು. ಮಹಾರಥೋತ್ಸವದಲ್ಲಿ ಗ್ರಾಮದ ಮುಖಂಡರಾದ ಜಿ.ಲಿಂಗನಗೌಡ, ಅಳ್ಳಳ್ಳಿ ವಿರೇಶ್, ಜಿ.ಚಂದ್ರಶೇಖರಗೌಡ, ಜಿ.ಮಲ್ಲಿಗೌಡ, ಬಸವನಗೌಡ, ಜಿ.ಗಣೇಶಗೌಡ, ಕಡೇಮನಿ ಪಂಪಾಪತಿ, ಜಿ.ವೀರನಗೌಡ, ಅಮರೇಗೌಡ, ಚನ್ನವೀರ,ಬಸವ, ಮುತ್ತಯ್ಯ, ಚಿದಾನಂದಪ್ಪ , ಪುರೋಹಿತರಾದ ಗುರುತಾತ, ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ರಾತ್ರಿ ತುರುಮುಂದಿ ಬಸವೇಶ್ವರ ದೇವಸ್ಥಾನಕ್ಕೆ ಚಿಕ್ಕೆನಕೊಪ್ಪದ ಶಿವಶಾಂತವೀರ ಶರಣರು ಆಗಮಿಸಿ ಗ್ರಾಮದ ಭಕ್ತರಿಗೆ ಶುಭ ಆಶೀರ್ವಚನ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















