ಕೊಪ್ಪಳ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ ಎಂದು ಯಲಬುರ್ಗಾ ಸರಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಸುರೇಶ ಕುಮಾರ ಹೇಳಿದರು.
ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಮಂಗಳವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವತಿಯಿಂದ 2025-26 ನೇ ಸಾಲಿನ ವಾರ್ಷಿಕ ವಿಶೇಷ ಎನ್. ಎಸ್. ಎಸ್. ಶಿಬಿರದ ಏಳನೇ ದಿನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಮನೆ ನಡೆಸುವುದು ಕೂಡ ಆರ್ಥಿಕ ಚಟುವಟಿಕೆ ಆಗಿದೆ. ಸಾಲ ಮತ್ತು ಸಹಾಯ ಅಷ್ಟು ಬೇಗ ಸಿಗುವುದಿಲ್ಲ.ಮಹಿಳೆಯರ ಆರ್ಥಿಕ ಸಬಲೀಕರಣ ಸಮಾನತೆಯನ್ನು ತರುತ್ತದೆ. ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಸಂಪಾದನೆ ಮಾಡಬೇಕು. ಎಲ್ಲರಲ್ಲಿಯೂ ಕೌಶಲ್ಯ ಮತ್ತು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಪ್ರದೀಪ್ ಕುಮಾರ ಅವರು ಮಾತನಾಡುತ್ತ ಎಲ್ಲರಿಗೂ ಸಾಮಾನ್ಯ ಜ್ಞಾನ ಇರಬೇಕು. ನೀವು ಇನ್ನೊಬ್ಬರ ಜೊತೆಗೆ ಹೋಲಿಕೆ ಮಾಡಿಕೊಳ್ಳಬಾರದು. ನಮ್ಮ ಮೆದುಳನ್ನು ಹೆಚ್ಚು ಉಪಯೋಗ ಮಾಡಿಕೊಳ್ಳಬೇಕು. ಮೆದುಳನ್ನು ಹೆಚ್ಚು ಹೆಚ್ಚು ಬಳಸಿದರೆ ಅದು ಹೆಚ್ಚು ಶಕ್ತಿಶಾಲಿಯಾಗುತ್ತದೆ. ಹೆಚ್ಚು ಸಮಯವನ್ನು ಓದುವುದರಲ್ಲಿ ಕಳೆಯಬೇಕು. ಸಾಧನೆ ಮಾಡಿದ ವ್ಯಕ್ತಿಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಛಲ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಹಾದಿಮನಿ, ಡಾ. ಪ್ರಕಾಶ್ ಹುಲ್ಲೂರ್, ಕಲ್ಲಯ್ಯ ಪೂಜರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಬಿರದ ಕುರಿತು ಅನಿಸಿಕೆಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಅದಪ್ಪ ಹಳ್ಳಿಕೇರಿ, ಸೋಮಶೇಖರಯ್ಯ ಇನಾಮದಾರ, ಬಸವರಾಜ್ ಕೋಣಿ, ಕಾಲೇಜಿನ ಉಪನ್ಯಾಸಕರಾದ ನೇತ್ರಾವತಿ ಸಾದರ, ಕಾವ್ಯಶ್ರೀ, ಪ್ರಫುಲ್ ಚಂದ್ರ, ಸಮಿಉದ್ದಿನ್ ಖ್ಯಾಜಿ, ಮಹ್ಮದ್ ರಫೀಕ್ ಸೂಡಿ, ಮಂಜುನಾಥ, ಶ್ರೀಕಾಂತ್, ಡಾ.ನರಸಿಂಹ, ಶೋಭಾ ಬಂಜಿಗೋಳ ಹಾಗೂ ಇತರರು ಉಪಸ್ಥಿದರಿದ್ದರು.
ಕಾರ್ಯಕ್ರಮವನ್ನು ಕಾವೇರಿ ನಿರೂಪಿಸಿದರು. ನಾಗರತ್ನ, ದುರಗಮ್ಮ ಪ್ರಾರ್ಥಿಸಿದರು, ಪ್ರೇಮ ಸ್ವಾಗತಿಸಿದರು, ಲಕ್ಷ್ಮೀ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















