
ತಿಂಗಳಲ್ಲಿ ಸಂಕಷ್ಟದಿಂದ ಪಾರು: ಯಕ್ಷಗಾನ ಸೇವೆ ಮಾಡಿಸಿದ ಶಾಸಕ ಜನಾರ್ದನರೆಡ್ಡಿ
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು) ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ಶುಕ್ರವಾರ ಭೇಟಿ ನೀಡಿದ ಶಾಸಕ ಜನಾರ್ದನರೆಡ್ಡಿ, ಕಳೆದ ವರ್ಷ ಅವರ ಪತ್ನಿ ಅರುಣ ಲಕ್ಷ್ಮಿ ‘ತನ್ನ ಪತಿಯ ಬಿಡುಗಡೆಗಾಗಿ ಮಾಡಿಕೊಂಡಿದ್ದ ಹರಕೆಯಂತೆ ಯಕ್ಷಗಾನ ಸೇವೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆರೇಡಿ ಗ್ರಾಮದ ಲ್ಲಿರುವ ಇರ್ವೆರು ಉಳ್ಳಾಕ್ಲು-ಕಡೆಂಜೋಡಿತ್ತಾಯಿ ಮತ್ತು ಪರಿವಾರ ದೈವಗಳ ಹರಕೆ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ, ಪ್ರತ್ಯೇಕ ಯಕ್ಷಗಾನ ಸೇವೆ ಮಾಡಿಸುವ ಮೂಲಕ ಕಳೆದ ವರ್ಷದ ಹರಕೆ ತೀರಿಸಿದರು.
ಸಿಬಿಐನಿಂದ ಚಾರ್ಜ್ ಶೀಟ್: ಓಬಳಾಪುರಂ ಮೈನಿಂಗ್
ಕಂಪನಿಗೆ ಸೇರಿದ ಪ್ರಕರಣ ವೊಂದರಲ್ಲಿ ಸಿಬಿಐನಿಂದ ಕಳೆದ 2025ರ ಮೇ ತಿಂಗಳಲ್ಲಿ ಕಾರಾಗೃಹದ ಶಿಕ್ಷೆಗೆ ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಒಳಗಾಗಿದ್ದರು. ಪತಿಗೆ ಎದುರಾಗಿದ್ದ ಸಂಕಷ್ಟ ಪರಿಹಾರ ಸಿಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆರೇಶ್ವಡಿ ಗ್ರಾಮದ ಇರ್ವರು ಉಳ್ಳಾಕ್ಲು-ಕೆಡೆಂಜೊಡಿತ್ತಾಯಿ ಪರಿವಾರ ದೈವಗಳ ಮೊರೆಹೋದ ಶಾಸಕ ರೆಡ್ಡಿ ಹಾಗೂ ಕುಟುಂಬ ಯಕ್ಷಗಾನ ಸೇವೆ ಮಾಡಿಸಿದರು.
ಪತಿಯ ಬಿಡುಗಡೆಗಾಗಿ ಅರುಣಾಲಕ್ಷ್ಮಿ ಆರೇಲ್ಡಡಿ ಗ್ರಾಮದ ಇರ್ವೆರು ಉಳ್ಳಾಕ್ಲು-ಪರಿವಾರ ದೈವಗಳ ಮೊರೆ ಹೋಗಿದ್ದರು.
ಈ ಸಂದರ್ಭದಲ್ಲಿ ‘ಒಂದು ತಿಂಗಳಲ್ಲಿ ನಿಮ್ಮ ಪತಿ ಬಿಡುಗ ಡೆಯಾಗಲಿದ್ದಾರೆ ಎಂದು ದೈವ ನುಡಿದಿತ್ತು. ಕಾಕತಾಳೀಯ ಎಂಬಂತೆ ರೆಡ್ಡಿ 27 ದಿನದಲ್ಲಿ
ಬಿಡುಗಡೆಯಾಗಿದ್ದರು. ಹೀಗಾಗಿ ಶುಕ್ರವಾರ ನಡೆದ ಯ ಭವನದ ಉದ್ಘಾಟನೆ ಹಾಗೂ ನೇಮೋತ್ಸವದಲ್ಲಿ ಭಾಗಿಯಾಗಿ ರೆಡ್ಡಿ ಹರಕೆ ದೇಗುಲದ ನೂತನ ಸಮುದಾಯ ಸೇವೆ ಸಲ್ಲಿಸಿದರು.
ಇದಕ್ಕೂ ಮೊದಲು ಆಯೋಧ್ಯೆ ಯ ಶ್ರೀರಾಮ ಜ್ಯೋತಿ ಹಾಗೂ ಅಂಜನಾದ್ರಿಯ ಹನುಮನ ಸೇವೆ ಸಲ್ಲಿಸಿದರು.
ಶಾಸಕ ಜನಾರ್ದನರೆಡ್ಡಿ ಹೇಳಿಕೆ ಕಳೆದ ವರ್ಷವೇ ಹೋಗಬೇಕಿತ್ತು
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆರೇಲ್ಗಡಿ ಗ್ರಾಮದ ಇರ್ವೆರು ಉಳ್ಳಾಕು-ಕೆಡೆಂಜೋಡಿತ್ತಾಯ ಮತ್ತು ಪರಿವಾರ ದೈವಗಳ ಸನ್ನಿಧಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಳೆದ ವರ್ಷವೇ ಭಾಗಿಯಾಗಬೇಕಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ ಎಂದು ಶಾಸಕ ಜನಾರ್ದನರೆಡ್ಡಿ ಹೇಳಿದರು.
ಈ ಬಗ್ಗೆ ಮಾತನಾಡಿ, ನಳಿನ್ ಕುಮಾರ ಕಟೀಲ್ ಸೇರಿದಂತೆ ದೇಗುಲದ ಆಡಳಿತ ಮಂಡಳಿ ಆಹ್ವಾನ ನೀಡಿತ್ತು. ಆದರೆ ಅನಿರೀಕ್ಷಿತವಾಗಿ ಸಿಬಿಐ ನ್ಯಾಯಾಲಯದಿಂದ ನಡೆದ ಬೆಳವಣಿಗೆಯಿಂದ ಹೋಗಲಾಗಲಿಲ್ಲ. ನನ್ನ ಪತ್ನಿ ಲಕ್ಷ್ಮಿ ಆರುಣಾರನ್ನು ಕಳಿಸುವಂತೆ ದೇಗುಲ ಸಮಿತಿಯವರು ಕೋರಿದ್ದರು.
ಆದರೆ ನನ್ನ ಅನುಪಸ್ಥಿತಿಯಲ್ಲಿ ನನ್ನ ಪತ್ನಿಗೆ ದೇಗುಲಕ್ಕೆ ಹೋಗುವ ಮನಸಾಗಿರಲಿಲ್ಲ. ಆದರೆ ಬಳಿಕ ದೇಗುಲಕ್ಕೆ ಭೇಟಿ ನೀಡಿ ಹರಕೆ ಹೊತ್ತು ಭವಿಷ್ಯ ಕೇಳಿದ್ದರು. ದೈವದ ನುಡಿ ಸತ್ಯವಾಗಿದ್ದರಿಂದ ಇಂದು ಹರಕೆ ಮೂಲಕ ಯಕ್ಷಗಾನ ಸೇವೆ ಸಲ್ಲಿಸಲಾಗಿದೆ ಎಂದು ರೆಡ್ಡಿ ಹೇಳಿದರು.
ಜ್ಯೋತಿಗಳ ಸಂಗಮ ಕ್ಷೇತ್ರವಾದ ಪುತ್ತೂರಿನ ಹನುಮಗಿರಿಯ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲ ಶೋತ್ಸವ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರೆಡ್ಡಿ ಕುಟುಂಬದವರು ಭಾಗಿಯಾಗಿದರು. ಬಿಜೆಪಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡಂಜಿ ರೆಡ್ಡಿಗೆ ಸಾಥ್ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















