ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸ್ ಹತ್ತುವಾಗ ಮೂರು ತೊಲೆ ಬಂಗಾರ ಹಾರಿಸಿದ ಚಾಲಾಕಿ ಕಳ್ಳರು

ಕೊಪ್ಪಳ / ಗಂಗಾವತಿ : ಹೌದು ಈಗಿನ ದಿನಗಳಲ್ಲಿ ಬಂಗಾರ ಎಂದರೆ ಬಾಯಿ ಪಡೆದುಕೊಳ್ಳುವಂತ ಸಂದರ್ಭ ಇದರ ನಡುವೆ ಸೋದರಳಿಯನ ಮದುವೆಗೆ ಬಂದಿದ್ದ ಮಹಿಳೆ ಬಂಗಾರವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

20 ಹತ್ತುವಾಗ ಮಹಿಳೆಯೊಬ್ಬರ ಸರ ಸೇರಿದಂತೆ ಇತರ ಚಿನ್ನಾಭರಣಕ್ಕೆ ಕತ್ತರಿ ಹಾಕಿದ ಕಳ್ಳರು, ಬರೋಬ್ಬರಿ ಮೂರು ತೊಲೆ ಬಂಗಾರದ ಆಭರಣಗಳನ್ನು ಕದ್ದುಕೊಂಡು ಪರಾರಿಯಾದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಘಟನೆಯಲ್ಲಿ ಸುಮಾರು ನಾಲ್ಕವರೆ ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣಗಳನ್ನು ಕಳೆದುಕೊಂಡ ಮಹಿಳೆಯನ್ನು ಗದಗ ಶಹರದ ನಿವಾಸಿ ರಿಜೀಯಾಬೇಗಂ ಅಲಿಯಾಸ್ ಮುಸ್ತಾನಬೇಗಂ ದಾವಲ್‌ಸಾಬ್ ಎಂದು ಗುರುತಿಸಲಾಗಿದೆ.
ಈ ಮಹಿಳೆಯು, ಗಂಗಾವತಿಯ ಹಿರೇಜಂತಕಲ್ ನಲ್ಲಿರುವ ತನ್ನ ಸಹೋದರ ಮಗನ (ಸಹೋದರ ಅಳಿಯ) ಮದುವೆ ಕಾರ್ಯಕ್ರಮಕ್ಕೆ ಎಂದು ಬಂದಿದ್ದರು. ಮದುವೆ ಮುಗಿಸಿಕೊಂಡು ಹೋಗುವ
ಸಂದರ್ಭದಲ್ಲಿ ವಾಹನದಲ್ಲಿ ಪ್ರಯಾಣಿಕರಿಂದ ದಟ್ಟಣೆ ಇತ್ತು. ಜನರ ದಟ್ಟಣೆಯನ್ನೆ ಬಂಡವಾಳ ಮಾಡಿಕೊಂಡ ಕಳ್ಳರು, ಕತ್ತರಿ ಪ್ರಯೋಗ ಮಾಡಿ ಸುಮಾರು ಮೂರು ತೊಲೆ ಬಂಗಾದರ ಆಭರಣ ಕದ್ದು ಪರಾರಿಯಾಗಿ ದ್ದಾರೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನ ಕಳೆದುಕೊಂಡಿರುವ ಮಹಿಳೆಯ ಸುತ್ತಲು ನೆರೆದ ಜನ, ಸಮಾಧಾನಿಸಿದರು.

ಶೋಧನೆ ಮಾಡುತ್ತಿದ್ದಾರೆ.

ಸಿಸಿ ಕ್ಯಾಮರಾ, ಸಿಬ್ಬಂದಿ ಕೊರತೆ: ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ವಾಹನಗಳ ಸಂಚಾರವಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಓಡಾಟವಿದೆ. ಇಂತಹ ದಟ್ಟಣೆ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ
ಭದ್ರತೆ, ರಕ್ಷಣೆ ಇಲ್ಲವಾಗಿದೆ ಎ೦ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರಿಗೆ ಸೂಕ್ತ ರಕ್ಷಣೆ, ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ಕನಿಷ್ಟ ಪಕ್ಷ ಕೇಂದ್ರ ಬಸ್ ನಿಲ್ದಾಣದಲ್ಲಿ ಎಲ್ಲಾ ಭಾಗದ ದೃಶ್ಯಗಳು ಸೆರೆಯಾಗುವಂತೆ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರವಿಲ್ಲ.

ಈ ಬಗ್ಗೆ ಮಾತನಾಡಿದ ಸಂತ್ರಸ್ತೆಯ ಸಹೋದರ ನಾಜೀರ್, ಇಷ್ಟು ಜನ ಓಡಾಡುವ ಸ್ಥಳದಲ್ಲಿ ಪೊಲೀಸ್ ಇಲಾಖೆ ಕನಿಷ್ಟ ಪಕ್ಷ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಹೀಗಾಗಿ ಬಸ್ ನಿಲ್ದಾಣದಲ್ಲಿ ಅಪರಾಧಗಳು ಹೆಚ್ಚುತ್ತಿವೆ. ತಮ್ಮ ಸಹೋದರಿ ಚಿನ್ನದ ಕಳೆದುಕೊಂಡಿದ್ದರ ಬಗ್ಗೆ ತಕ್ಷಣ ದೂರು ನೀಡಲಾಗಿದೆ. ತಕ್ಷಣ ಪೊಲಿಸರು ಕಾರ್ಯಾಚರಣೆ ಮಾಡಬೇಕಿತ್ತು. ಸುತ್ತಲಿನ ಸಿಸಿ ಕ್ಯಾಮರ ಪರಿಶೀಲನೆ ಮಾಡಿದ್ದರೆ ಆರೋಪಿಗಳು ಸಿಗುವ ಸಾಧ್ಯತೆ ಇತ್ತು. ಆದರೆ ದೂರು ನೀಡಿ ಒಂದು ಗಂಟೆಯಾದರೂ ಪರಿಶೀಲನೆ ನಡೆಸಲು ಮುಂದಾಗಲಿಲ್ಲ ಎಂದು ಯುವಕ ಆರೋಪಿಸಿದ್ದಾರೆ.
ಇದು ಸಾರಿಗೆ ಇಲಾಖೆಯ ಅಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಜನರು ದೂರಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!