ಬಳ್ಳಾರಿ : ಬರುವ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರೀ ಬದಲಾವಣೆ ಕಾಣಿಸಿಕ ಗೊಳ್ಳಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದ ಅತಿಥಿ ಗೃಹದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಗುಂಪುಗಳ ನಡುವೆ ಶಿಸ್ತು ಮೀರಿ ನಡೆದುಕೊಳ್ಳುತ್ತಿ ರುವುದಾಗಿ ಆರೋಪಿಸಿದರು. ದಾವಣಗೆರೆ ಉಪಚುನಾವ ಣೆಯ ವೇಳೆ ಕಾಂಗ್ರೆಸ್ನ ಅನೇಕ ಮುಸ್ಲಿಂ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಅವರ ನ್ನು ಪಕ್ಷದಿಂದ ಹೊರಹಾಕ ಲಾಗಿದೆ. ಇದಕ್ಕೆ ಮುಸ್ಲಿಂ ಧಾರ್ಮಿಕ ಮುಖಂಡರು
ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದರೂ, ಪಕ್ಷದ ಹಿರಿಯರು ಅದನ್ನು ಖಂಡಿಸಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಈಶ್ವರಪ್ಪ, ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು ಮಹಿಳೆಯರಿಗೆ ಮಾಡಿದ ಅಪಮಾನ ಎಂದರು.
ಬಿಜೆಪಿಯಲ್ಲಿ ಹಿಂದುತ್ವಕ್ಕೆ ಸೂಕ್ತ ಸ್ಥಾನಮಾನ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಜಾತಿ ಆಧಾರಿತ ರಾಜಕಾರಣ ಹೆಚ್ಚುತ್ತಿರುವುದ ‘ರಿಂದ ಪಕ್ಷದಲ್ಲಿ ಶುದ್ದೀಕರಣ ಅಗತ್ಯವಿದೆ. ಶೀಘ್ರದಲ್ಲೇ ಅದು ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅವರ ಸನ್ಮಾನ ಸಮಾರಂಭಕ್ಕೆ ಆಹ್ವಾನ ಬಂದರೆ ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳು ಅವರವುದಾಗಿ ಹೇಳಿದರು.
ವರದಿ : ಜಿಲಾನಸಾಬ್ ಬಡಿಗೇರ್




















