ಸಿರುಗುಪ್ಪ- ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭಗೀರಥ ಮಹರ್ಷಿಯ ಆದರ್ಶ ಗುಣ ತತ್ವ ಸಿದ್ಧಾಂತ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ಹಿರಿಯ ಸಹೋದರ ಸರ್ವ ಧರ್ಮೀಯರ ಸಂಘದ ಅಧ್ಯಕ್ಷರು ಬಿ ಎಂ ಸತೀಶ್ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರಸಭೆ ಎಲ್ಲಾ ಇಲಾಖೆಗಳ ಸಹ ಭಾಗಿತ್ವದಲ್ಲಿ ಮಹರ್ಷಿ ಶ್ರೀ ಭಗೀರಥ ಅವರ ಜಯಂತಿ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಗೌರವದೊಂದಿಗೆ ಅರ್ಪಿಸಿ ನಮನ ಸಲ್ಲಿಸಿ ಸ್ಮರಿಸಿ ಅವರು ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಾ ಯಾವುದೇ ಕೆಲಸ ಮಾಡಬೇಕಾದರೆ ಏಕಾಗ್ರತೆಯಿಂದ ಮಾಡಬೇಕು ಪೌರಾಣಿಕ ಪುರುಷ ಸಮಾಜದಲ್ಲಿ ಇಂದಿಗೂ ಕಠಿಣ ಪರಿಶ್ರಮಕ್ಕೆ ಉದಾಹರಣೆಗೆ ನೀಡಲಾಗುತ್ತಿದೆ ಭಗೀರಥ ಎಂದರೆ ಸಾಧನೆಯ ಸಾಕ್ಷಾತ್ ಗಂಗೆಯನ್ನು ಧರೆಗಿಳಿಸಿದ ಮಹಾಪುರುಷ ಎಂದು ಅವರು ಕರೆ ನೀಡಿದರು.
ತಾಲೂಕ ಕಚೇರಿಯ ಉಪ ತಹಶೀಲ್ದಾರ್ ಸಿದ್ದಾರ್ಥ ಕಾರಂಜಿ ಅವರು ಮಾತನಾಡಿ ಭಗೀರಥ ಉಪ್ಪಾರ ಸಮಾಜದ ಆರಾಧ್ಯ ಮಹಾನ್ ಛಲಗಾರ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಲ್ಲಿಕಾರ್ಜುನ ಅವರು ಸರ್ವರನ್ನು ಸ್ವಾಗತ ಬಯಸಿ ಮಾತನಾಡುತ್ತಾ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತರುವಲ್ಲಿ ಭಗೀರಥನ ಪಾತ್ರ ಅಪ್ರತಿಮವಾದುದು ಪೂರ್ವಜರ ಆತ್ಮಕ್ಕೆ ಶಾಂತಿ ಒದಗಿಸಿದ ಮಹರ್ಷಿ ಭಗೀರಥ ಉಪ್ಪಾರ ಜನಾಂಗ ಸ್ವಾವಲಂಬಿ ಜೀವನ ನಡೆಸುವ ಸಮಾಜದ ಕಠಿಣಶ್ರಮ ಹೊಂದಿದ್ದಾರೆ ಸಾಧನೆ ಸಲೀಸು ಶ್ರಮದ ಜೀವಿಗಳು ಎಂದರು.
ಡಾ. ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷರು ಕೊಡ್ಲೆ ಮಲ್ಲಿಕಾರ್ಜುನ ಅವರು ಮಾತನಾಡಿ ಮಹರ್ಷಿ ಭಗೀರಥ ಇಡೀ ಮನಕುಲಕ್ಕೆ ದೊರೆತ ಮಹಾನ್ ಕೊಡುಗೆ ಎಂದರು.
ರಾವಿಹಾಳು ಹುಸೇನ್ ಪೀರ, ಕಂಬಳಿ ಮಲ್ಲಿಕಾರ್ಜುನ, ಈದ್ಗಾ ಮತ್ತು ಖಬರ ಸ್ಥಾನ್ ಸಮಿತಿಯ ಮಾಜಿ ಅಧ್ಯಕ್ಷರು ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಂಡಿ ಹಾಷಿಂ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ, ಶ್ರೀ ಭಗೀರಥ ಮಹರ್ಷಿ ಸಂಘ ತಾಲೂಕು ಅಧ್ಯಕ್ಷರು ಹೆರೆಕಲ್ ಯು. ಹನುಮಂತಪ್ಪ, ಸಿರುಗುಪ್ಪ ನಗರ ಘಟಕದ ಅಧ್ಯಕ್ಷರು ಯು.ಕೋದಂಡರಾಮ, ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸರ್ವ ಪದಾಧಿಕಾರಿಗಳು ಉಪ್ಪಾರ್ ಸಂಘದ ಸದಸ್ಯರು ನಗರಸಭಾ ಪೌರಾಯುಕ್ತ ಗಂಗಾಧರ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್. ದಂಡಪ್ಪನವರ್, ಡಿ ವೈ ಎಸ್ ಪಿ ಮಾಲತೇಶ್ ಕೂನಬೇವ, ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಅಬಕಾರಿ ಇಲಾಖೆ ಪಶು ಸಂಗೋಪನ ಇಲಾಖೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಉಪ್ಪಾರ್ ಸಂಘದ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪತ್ರಿಕ ಮಾಧ್ಯಮ ಮಿತ್ರರು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಇದ್ದರು ಬಳ್ಳಾರಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಡಾ ಯು ಶ್ರೀನಿವಾಸಮೂರ್ತಿ ಅವರು ಮುಖ್ಯ ಭಾಷಣಕಾರರಾಗಿ ಮಹರ್ಷಿ ಶ್ರೀ ಭಗೀರಥ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















