ಇಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಶಿಗ್ಗಾಂವ ಸವಣೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ ಎಲ್ ಎ -2 ರವರಿಗೆ ಎಸ್ ಐ ಆರ್ (SIR) ಕಾರ್ಯಾಗಾರವನ್ನು ಗುಜರಾತ್ ಶಾದಿ ಮಹಲ್ ನಲ್ಲಿ ನಡೆಸಲಾಯಿತು.
ಶಿಗ್ಗಾಂವ್ ಸವಣೂರ ಶಾಸಕರು ಶ್ರೀ ಯಾಸೀರ್ ಖಾನ್ ಪಠಾಣ್ ರವರು ಪ್ರತಿಯೊಬ್ಬ ಬಿ ಎಲ್ ಎ ಎಸ್ ಐ ಆರ್ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ನಿಮ್ಮ ಬೂತ್ ನಲ್ಲಿ ಯಾವುದೇ ನಮ್ಮ ವೋಟರ್ ಗಳು ರದ್ದಾಗಬಾರದು ಅದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಪ್ರತಿಯೊಬ್ಬರಿಗೆ ಎಸ್ ಐ ಆರ್ ಬಗ್ಗೆ ಪೂರ್ಣ ಮಾಹಿತಿ ಕೊಟ್ಟು ಅವರ ವೋಟರ್ ನೋಂದಣಿಯನ್ನು ಮಾಡಿಸಬೇಕು ಎಂದು ಹೇಳಿದರು
ಜಿಲ್ಲಾ ಅಧ್ಯಕ್ಷರು ಶ್ರೀ ಸಂಜೀವ ಕುಮಾರ ನೀರಲಗಿ ಮೊದಲನೆಯದಾಗಿ ಬಿ ಎಲ್ ಎ ಗಳ ಕೆಲಸವನ್ನು ಏನೇನು ಎಂದು ತಿಳಿದುಕೊಳ್ಳಬೇಕು ಒಂದು ಬೂತ್ ನಲ್ಲಿ ಪಕ್ಷ ಗೆಲ್ಲಬೇಕೆಂದರೆ ಬಿ ಎಲ್ ಎ ಗಳ ಮಹತ್ವ ಮತ್ತು ಕೆಲಸ ಬಹಳಷ್ಟು ಇದೆ ಬಿ ಎಲ್ ಎ ಗಳು ತಮ್ಮ ಬೂತ್ ನಲ್ಲಿ ಎಷ್ಟು ವೋಟರ ಗಳಿವೆ ಯಾವುದು ಹೊಸದಾಗಿ, ರದ್ದು ಯಾಗಿರುವ ಹಾಗೂ ವರ್ಗಾವಣೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು ಬೂತ್ ಗೆಲ್ಲಬೇಕು ಅಂದರೆ ಬಿ ಎಲ್ ಎಗಳು ಹಾಗೂ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸಮಾಡಿ ಪಕ್ಷವನ್ನು ಗೆಲ್ಲಸಬೇಕು ,ಉಪನ್ಯಾಸಕರು ಮುತ್ತುರಾಜ್ ರವರು ಎಸ್ ಐ ಆರ್ ಬಗ್ಗೆ ಸವಿಸ್ತಾರವಾಗಿ ವಿವರಣೆ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ, ರಮೇಶ್ ಹರಿಜನ್ ಸವಣೂರ ಬ್ಲಾಕ್ ಅಧ್ಯಕ್ಷರು, ಶಿಗ್ಗಾಂವ ಗ್ಯಾರೆಂಟಿ ಅಧ್ಯಕ್ಷರು ಎಸ್ ಎಫ್ ಮಣಿಕಟ್ಟಿ, ಸವಣೂರ ಗ್ಯಾರೆಂಟಿ ಅಧ್ಯಕ್ಷರು ಸುಭಾಶ ಮಜಗಿ ಶಂಕ್ರಗೌಡ ಪಾಟೀಲ, ಶಂಬು ಆಜೂರ್, ಮಹಾಂತೇಶ್ ಸಾಲಿ, ಬಾಬರ ಬೊವಾಜಿ, ಎಂ ಜೆ ಮುಲ್ಲಾ ಹಾಗೂ
241 ಬಿ ಎಲ್ ಎ 2 ಗಳು ಮತ್ತು ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.
ವರದಿ ಬಸವರಾಜ ಎಸ್. ಎನ್




















