ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯುವುದರಿಂದ ಇವೆಯಂತೆ ಲೆಕ್ಕಕ್ಕೇ ಸಿಗದಷ್ಟು ಪ್ರಯೋಜನಗಳು

ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು ಎಲ್ಲರು ತಂಪಾದ ನೀರನ್ನು ಕುಡಿಯಲು ಬಯಸುತ್ತಾರೆ. ಕಚೇರಿಯಲ್ಲಾಗಲಿ, ಬೇಸಿಗೆ ಕಾಲ ಬಂತೆಂದರೆ ಸಾಕು, ಎಷ್ಟೇ ಐಸ್ ನೀರು ಕುಡಿದರೂ ತೃಪ್ತಿ ಸಿಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರು ಫ್ರಿಜ್ ನೀರಿಗಿಂತ ಮಣ್ಣಿನ ಮಡಕೆಯ ನೀರನ್ನೇ ಹೆಚ್ಚು ಇಷ್ಟಪಡುತ್ತಾರೆ. ಮಡಕೆಯ ನೀರು ಕೇವಲ ತಂಪು ನೀಡುವುದಲ್ಲದೆ, ಆರೋಗ್ಯಕ್ಕೂ ಹಿತಕಾರಿ.

ಆದರೆ, ಮಡಕೆಯಲ್ಲಿ ನೀರು ತುಂಬಿಸುವ ಮುನ್ನ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಒಂದು ವೇಳೆ ನೀವು ಮಡಕೆಯನ್ನು ಸರಿಯಾಗಿ ತೊಳೆಯದೆ ಬಳಸುತ್ತಿದ್ದರೆ, ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.ಮನೆಯಲ್ಲಾಗಲಿ ಅಥವಾ ಹೊರಗಡೆ ಇಂದಾ ಬಂದ ತಕ್ಷಣ ಪ್ರಿಜ್ ತೆಗೆದು ತಣ್ಣಗಿನ ನೀರನ್ನು ಕುಡಿಯುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ ಅತಿ ಹೆಚ್ಚು ತಣ್ಣಗಿನ ಪ್ರಿಜ್ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಅದಕ್ಕಾಗಿ
ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದು ನಮಗೆ ಹೊಸದಲ್ಲ. ಆದರೆ ಅವೆಲ್ಲವನ್ನೂ ಮರೆತಿರುವ ಇಂದಿನ ಪೀಳಿಗೆಗೆ ಇದರ ಪ್ರಯೋಜನಗಳನ್ನು ತಿಳಿಸುವುದು ನಮ್ಮ ಕರ್ತವ್ಯ. ಹಾಗಾದರೆ ಇವುಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

ಮಡಕೆಯ ನೀರನ್ನು ಸರ್ವರೋಗಕ್ಕೂ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಅಲ್ಲದೇ ಮಡಿಕೆ ನೀರು ಸಂಪೂರ್ಣವಾಗಿ ನೈಸರ್ಗಿಕದತ್ತವಾಗಿರುವುದರಿಂದ ನಮ್ಮ ದೇಹಕ್ಕೆ ಯಾವುದೇ ರಿತಿಯ ಹಾನಿಉನ್ನು ಉಂಟುಮಾಡುವುದಿಲ್ಲ.

ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದು ದೇಹದ ಚಯಾಪಚಯವನ್ನು ಉತ್ತೇಜಿಸುತ್ತದೆ. ಜೊತೆಗೆ ಇದರಲ್ಲಿರುವ ಖನಿಜಾಂಶಗಳು ಜೀರ್ಣ ಶಕ್ತಿಯನ್ನೂ ಹೆಚ್ಚಿಸುತ್ತವೆ. ಇದರಲ್ಲಿ ಯಾವ ರಾಸಾಯನಿಕಗಳು ಮಿಶ್ರಣವಾಗುವುದಿಲ್ಲ.
ಬೇಸಿಗೆ ದಿನಗಳಲ್ಲಿ ಮಣ್ಣಿನ ನೀರನ್ನು ಕುಡಿಯುವುದು ಜೇನುತುಪ್ಪದಂತಹ ಸಿಹಿ ರುಚಿಯನ್ನು ಹೊಂದಿರುತ್ತದೆ. ನೈಸರ್ಗಿಕವಾಗಿ ಮಣ್ಣಿನ ಪಾತ್ರೆಗಳಲ್ಲಿನ ನೀರು ತಣ್ಣಗಾಗುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿಟ್ಟ ನೀರಿನ ರುಚಿ ಯಾವುದರಲ್ಲೂ ಸಿಗುವುದಿಲ್ಲ. ಏಕೆಂದರೆ ಮಣ್ಣಿನ ಮಡಕೆಯಲ್ಲಿರುವ ಮಣ್ಣು ನೀರನ್ನು ಹೀರಿಕೊಂಡು ಹೊರಗೆ ಕಳುಹಿಸುತ್ತದೆ. ಇವು ನೈಸರ್ಗಿಕವಾಗಿ ತಂಪಾದ ನೀರು. ಹಾಗೆಯೇ, ಮಡಕೆಯನ್ನು ತೆರೆದಾಗ ಶುದ್ಧ ಗಾಳಿಯು ಒಳಗೆ ಹೋಗಿ ಆ ನೀರನ್ನು ತಂಪಾಗಿಸುತ್ತದೆ. ಅದಕ್ಕಾಗಿಯೇ ನೀರು ಯಾವಾಗಲೂ ತಂಪಾಗಿರುತ್ತದೆ.
ಬೇಸಿಗೆಯಲ್ಲಿ ಬಿಸಿಲಿನಿಂದ ಕೆಲವು ರೋಗಗಳು ಹರಡುತ್ತವೆ. ಇದನ್ನು ತಡೆಯಲು ಮಣ್ಣಿನ ಮಡಕೆ ನೀರು ಅತ್ಯುತ್ತಮ ನೈಸರ್ಗಿಕ ಔಷಧವಾಗಿದೆ. ಪಾತ್ರೆ ನೀರು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುವುದಲ್ಲದೆ ಒಂದು ಲೋಟ ನೀರಿನಲ್ಲಿ ಬಾಯಾರಿಕೆಯನ್ನು ನೀಗಿಸುತ್ತದೆ.
ಕ್ಷಾರೀಯ ದೇಹದಲ್ಲಿ pH ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹವು ಬಹಳ ಮುಖ್ಯವಾದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ರೆಫ್ರಿಜಿರೇಟರ್‌ನಲ್ಲಿಟ್ಟ ತಣ್ಣೀರು ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು. ಮಣ್ಣಿನ ಮಡಕೆ ನೀರು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ವಿಶೇಷವಾಗಿ ಶೀತ, ಕೆಮ್ಮು, ಒಣ ಗಂಟಲು, ಅಸ್ತಮಾ ಮತ್ತು ಗಂಟಲು ನೋವಿನಂತಹ ಸಮಸ್ಯೆಗಳಿಗೆ ಮಡಕೆ ನೀರು ಅತ್ಯುತ್ತಮ ಆಯ್ಕೆಯಾಗಿದೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿ BPA ಎಂಬ ಹಾನಿಕಾರಕ ಕಣ ಇದ್ದು, ಇದು ನೀರಿನ ಕಣಗಳಿಗೆ ಅಂಟಿಕೊಂಡಿರುತ್ತವೆ. ಈ ನೀರನ್ನು ಕುಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮಡಕೆಯಲ್ಲಿಟ್ಟ ನೀರಿನಲ್ಲಿ ಮಣ್ಣಿನ ಯಾವುದೇ ಅಂಶಗಳು ನೀರಿನ ಜೊತೆ ಕರಗುವುದಿಲ್ಲ. ಇದರ ಸೇವನೆಯಿಂದ ಯಾವ ಹಾನಿಯೂ ಆಗುವುದಿಲ್ಲ.
ನೀರಿನಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಂಡು ನೀರನ್ನು ಶುದ್ಧವಾಗಿಸುವ ಗುಣಗಳು ಮಣ್ಣಿನೊಳಗೆ ಇವೆ ಎಂದು ಹೇಳಲಾಗುತ್ತದೆ. ಇದು ನೀರಿನ ಎಲ್ಲಾ ಅಗತ್ಯ ಸೂಕ್ಷ್ಮ ಪೋಷಕಾಂಶಗಳು ನೀರಿನಲ್ಲಿ ಉಳಿಯಲು ಅನುವು ಮಾಡಿಕೊಡುತ್ತದೆ.
ಪರಿಸರಕ್ಕೂ-ದೇಹಕ್ಕೂ ಮಾರಕ ಅಲ್ಲ
ಮಣ್ಣಿನ ಮಡಿಕೆಗಳು ಪರಿಸರ ಸ್ನೇಹಿ. ಪ್ರಕೃತಿಯ ಭಾಗವಾದ ಮಣ್ಣಿನಿಂದಲೇ ಇದನ್ನ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್‌ ಬಾಟಲಿ, ಕಂಟೇನರ್‌ಗಳಲ್ಲಿ ನೀರು ಸಂಗ್ರಹಿಸಿಟ್ಟು ಅದನ್ನ ಕುಡಿದರೆ ನಮ್ಮ ದೇಹಕ್ಕೂ ಅಪಾಯ. ಪ್ಲಾಸ್ಟಿಕ್‌ ಹಲವು ರೋಗಗಳಿಗೆ ಮೂಲವಾಗಿರುತ್ತದೆ. ಹಾಗೇ, ಖಾಲಿಯಾದ ಬಾಟಲಿಗಳನ್ನ ನಾಶ ಮಾಡಲೂ ಸಾಧ್ಯವಿಲ್ಲ. ಸಿಕ್ಕಸಿಕ್ಕಲ್ಲಿ ಎಸೆದರೆ ಪರಿಸರಕ್ಕೆ ಹಾನಿಕಾರಕ. ಹೀಗಾಗಿ ಪರ್ಯಾಯವಾಗಿ ಮಣ್ಣಿನ ಮಡಿಕೆಗಳನ್ನೇ ಬಳಸಿದರೆ ಒಳ್ಳೆಯದು.

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!