
ಪುಣೆ : ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಕೆನರಾ ಬ್ಯಾಂಕ್ ರುಡ್ಸೆಟ್ ಇದರ ಸಂಚಾಲಕ , ನಿರ್ದೇಶಕ ಹಾಗೂ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀ ರಾಜಕುಮಾರ್ ಬಿರಾದಾರ ಅವರು ಹೂ ಗುಚ್ಛ ಮತ್ತು ಸ್ಮರಣಿಕೆ ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಶ್ರೀ ರಾಜಕುಮಾರ್ ಬಿರಾದಾರ್ ಅವರು ರುಡ್ಸೆಟ್ ಕೇಂದ್ರದ ವಿವಿಧ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಿ ಸದ್ಯಕ್ಕೆ ತರಬೇತಿ ಪಡೆಯುತ್ತಿರುವ ವಿವಿಧ ಊರುಗಳಿಂದ ಬಂದಿರುವ ತರಬೇತುದಾರರಿಗೆ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಪರಿಚಯಿಸಿದರಲ್ಲದೆ ಮೈಸೂರು ಪೇಟಾ ತೊಡಿಸಿ ವಿವಿಧ ನೆನಪು ಕಾಣಿಕೆಗಳನ್ನು ನೀಡಿ ಸತ್ಕರಿಸಿದರು.




















