ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ಜಗನ್ಮಾತೆ ವಾಸವಿ ಜಯಂತಿ ಅದ್ದೂರಿ ಮೆರವಣಿಗೆ ವ್ಯಾಪಾರದ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ – ಶಾಸಕ ಬಿ ಎಂ ನಾಗರಾಜ

ಸಿರುಗುಪ್ಪ- ಆರ್ಯ ವೈಶ್ಯ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ವ್ಯಾಪಾರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಬೇಕು ಎಂದು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ನಗರದ ಆರ್ಯವೈಶ್ಯ ಮಂಡಳಿಯಿಂದ 59ನೇ ಜಗನ್ಮಾತೆ ಶ್ರೀವಾಸವಿ ಜಯಂತೋತ್ಸವ ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿಯಾದ ಶಾಸಕ ಬಿ ಎಂ ನಾಗರಾಜ ಜಗನ್ಮಾತೆ ದರ್ಶನ ಪಡೆದು ಭವ್ಯ ಅದ್ದೂರಿಯ ವಾಸವಿ ದೇವಿ ಜಯಂತೋತ್ಸವದ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡುತ್ತಾ ವಾಸವಿ ದೇವಿ ಅಹಿಂಸಾ ತತ್ವ ಆದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅವರು ಕರೆ ಕೊಟ್ಟರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಚಾಗಿ ಸುಬ್ಬಯ್ಯ ಅವರು ಸರ್ವರನ್ನು ಸ್ವಾಗತ ಬಯಸಿದರು ಪ್ರಧಾನ ಕಾರ್ಯದರ್ಶಿ ಬಿ.ಜೆ. ಮಧುಸೂದನ್ ಶೆಟ್ಟಿ, ಉಪಾಧ್ಯಕ್ಷರಾದ ಷಣ್ಮುಖ ಸ್ವಾಮಿ, ಯಾಡ್ಕಿ ಮಂಜುನಾಥ, ಮರಿಸ್ವಾಮಿ, ರಾಘವೇಂದ್ರ ಅಮಿತ್, ಕೋಸಗಿ ನಾಗರಾಜ್, ನಿಟ್ಟೂರು ಸುನಿಲ್ ಬಾಗೇವಾಡಿ, ಪಂಪಾಪತಿ, ಜಗನ್ನಾಥ್ ಶೆಟ್ಟಿ, ಖಜಾಂಚಿ ಅಗಸನೂರು ಶಿವಕುಮಾರ್, ಚಾಗಿ ನರಸಿಂಹಮೂರ್ತಿ, ಬಲಕುಂದಿ ನರಸಿಂಹಮೂರ್ತಿ, ವೀರ ಕುಮಾರ್, ಬಾಡದ ನಾರಾಯಣ ಮೂರ್ತಿ, ಸತೀಶ್, ಸಮಾಜದ ಹಿರಿಯ ಮುಖಂಡರಾದ ವಂದವಾಗಲಿ ಬಿ.ತಿಪ್ಪಯ್ಯ ಶೆಟ್ಟಿ, ಕಾಂಗ್ರೆಸ್ ಹಿರಿಯ ಮುಖಂಡರು ಬಿ. ಮುತ್ಯಾಲಯ್ಯ ಶೆಟ್ಟಿ, ಸಿರುಗುಪ್ಪ ವಿದ್ಯಾಸಂಸ್ಥೆ ಅಧ್ಯಕ್ಷರು ಮಾಜಿ ಸಚಿವ ಬಿ ಇ
ರಾಮಯ್ಯನವರ ಮಗ ಬಿ ಇ ದೊಡ್ಡಯ್ಯ, ವಿ.ನಾಗರಾಜ ಶೆಟ್ಟಿ, ಬಿ.ವಿಶ್ವನಾಥ್ ಶೆಟ್ಟಿ, ಆರ್ಲ ಗಡ್ಡೆ, ಸಂತೋಷ್, ಹೊಳಗುಂದ ಶ್ರೀನಿವಾಸ ಶೆಟ್ಟಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಲೋಕ ಶಿಕ್ಷಣ ಶಾಂತಿ ಸಭೆ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಗೆಜಳ್ಳಿ ಈರಣ್ಣ, ಬಾದರ್ಲಿ ವೆಂಕಟೇಶ, ಬರಗಲ್ ದಿನ್ನಿ ಕಿಷ್ಟಯ್ಯ, ಕಲ್ಮಾಲಿ ಹನುಮಂತಯ್ಯ ಶೆಟ್ಟಿ, ನಗರಸಭೆ ಮಾಜಿ ಸದಸ್ಯ ಹೆಚ್. ಗಣೇಶ್, ಉಮೇಶ್ ಗೌಡ, ಟಿ ಸಿ ಮೋಹನ್, ಆರ್ಯವೈಶ್ಯ ಮಂಡಳಿ ಪದಾಧಿಕಾರಿಗಳು ಸಮಾಜದ ಮುಖಂಡರು ಸಾರ್ವಜನಿಕರು ಇದ್ದರು.

ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!