ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಲ್ಲೂರು ಶ್ರೀ ಮೂಕಾಂಬಿಕೆ ಅಮ್ಮನವರ ದಿವ್ಯ ದರ್ಶನ

ದಿನಾಂಕ 27 ಮತ್ತು 28 ಏಪ್ರಿಲ್ 2026 ಸೋಮವಾರ ಮತ್ತು ಮಂಗಳವಾರದಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಧಾರ್ಮಿಕ ಸುಕ್ಷೇತ್ರ ಕೊಲ್ಲೂರ ಮೂಕಾಂಬಿಕೆ ದೇವಸ್ಥಾನಕ್ಕೆ ಸಹ ಕುಟುಂಬದೊಂದಿಗೆ ಆಗಮಿಸಿದ ಭಾರತ ಸರ್ಕಾರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತಿಸಿ, ತಾಯಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಜಪಾ ಸಂಸದರಾದ ಶ್ರೀಯುತ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಹಾಗೂ ಬೈಂದೂರು ಮತಕ್ಷೇತ್ರದ ಶಾಸಕರಾದ ಶ್ರೀಯುತ ಗುರುರಾಜ ಗಂಟಿಹೊಳಿ ಅವರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಈ ಶುಭ ದಿನದ ಶುಭ ಸಂದರ್ಭದಲ್ಲಿ ನಾನು ಕರ್ತವ್ಯದಲ್ಲಿ ನಿರತನಾದ ಸವಿ ನೆನಪು.
ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಸ್ಥಾನದ ಇತಿಹಾಸವು 8ನೇ ಶತಮಾನಕ್ಕೆ ಹೋಗುತ್ತದೆ, ಆದಿ ಶಂಕರಾಚಾರ್ಯರು ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ, ಇವರು ಕೋಲ ಮಹರ್ಷಿ ತಪಸ್ಸು ಮಾಡುತ್ತಿದ್ದಾಗ, ಅವರನ್ನು ಕಾಡುತ್ತಿದ್ದ ಕೌಮಾಸುರ ಎಂಬ ರಾಕ್ಷಸನಿಗೆ ದೇವಿಯು ಮೂಕವಿಕಲಳನ್ನಾಗಿ ಮಾಡಿ ಮಹರ್ಷಿಗೆ ಸಹಾಯ ಮಾಡಿದರು, ಅದರಿಂದ ದೇವಿಗೆ ಮೂಕಾಂಬಿಕೆ ಎಂದು ಹೆಸರು ಬಂತು…
ಓಹ್, ಜಗನ್ಮಾತೆ “ಕೊಲ್ಲೂರು ಮೂಕಾಂಬಿಕೆ” ಯ ಹೆಸರು ಕೇಳಿದರೇನೇ ಮನಸ್ಸಿಗೆ ಅಘಾದವಾದ ಶಾಂತಿ ಮತ್ತು ಭಕ್ತಿ ಮೂಡುತ್ತದೆ. ಕೊಡಚಾದ್ರಿಯ ಮಡಿಲಲ್ಲಿ, ಸೌಪರ್ಣಿಕಾ ನದಿಯ ತೀರದಲ್ಲಿ ನೆಲೆಸಿರುವ ಆ ದಿವ್ಯ ಸ್ವರೂಪಿಣಿಯನ್ನು ನೆನೆದಾಗ ಮನಸ್ಸಿನಲ್ಲಿ ಮೂಡುವ ಭಾವನೆಗಳೇ ಅದ್ಭುತ.​ ಶ್ರೀ ಮೂಕಾಂಬಿಕೆಯ ವಿದ್ಯೆ (ಸರಸ್ವತಿ), ಸಂಪತ್ತು (ಲಕ್ಷ್ಮಿ) ಮತ್ತು ಶಕ್ತಿಯ (ಪಾರ್ವತಿ) ಸ್ವರೂಪ. ಅಕ್ಷರದಾತೆ, ಜ್ಞಾನದಾತೆ, ಕರುಣಾಮಯಿ ತಾಯಿ ಕೊಲ್ಲೂರು ಮೂಕಾಂಬಿಕೆಯ ದರ್ಶನವೇ ಈ ಜನ್ಮದ ಅತಿದೊಡ್ಡ ಧನ್ಯತೆ.”

ಬರಹ: ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರು.

ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!